Thursday, April 11, 2013

ಹೇ ಸ್ವಾಮಿ ಮಕ್ಕಳು ನಾವು ನಿನ್ನ


!!ಹೇ ಸ್ವಾಮಿ 
ಮಕ್ಕಳು ನಾವು ನಿನ್ನ
ಹೀಗಿಯಾಗಿರಲಿ ನಮ್ಮ ಕರ್ಮವೂ
ಆರಿಸಿ ಸತ್ಯ ಪಥವನ್ನು
ತೊರೆದು ಸುಳ್ಳ ಮಾರ್ಗವನ್ನು
ನಗು ನಗುತ್ತಲೇ ಬಬಿಡುವೆವು ಈ ಪ್ರಾಣವನ್ನು  !!

!!ದಟ್ಟ ಕತ್ತಲು ಹರಡುತ್ತಿದೆ ಇಲ್ಲಿ
ನಿನ್ನ ಮಾನವ ಇದ್ದಾನೆ ಭಯದಲಿ
ಏನಾಗುತ್ತಿದೆ ಅರಿವಿಲ್ಲ
ಏನೂ ಕಂಡು ಬರುವುದಿಲ್ಲ
ಸುಖದ ಸೂರ್ಯ ಇದೆ ಮರೆಯಾಗುವುದರಲ್ಲಿ
ನಿನ್ನ ಬೆಳಕ ಶಕ್ತಿಯಿಂದ
ತರಬಹುದು ಅಮಾವಾಸ್ಯೆಯಲ್ಲಿಯೂ ಹುಣ್ಣಿಮೆಯನ್ನು !!
ಆರಿಸಿ ಸತ್ಯ ಪಥವನ್ನು ..

!!ಒದಗಿದರೆ ಕಷ್ಟ ಪೀಡನೆ
ಬಂದು ಕಾಪಾಡು ನೀನೆ
ಅವರು ಮಾಡಲಿ ಕೆಟ್ಟದನ್ನೇ
ನಾವು ಮಾಡುವ ಒಳ್ಳೆಯದನ್ನೇ
ದ್ವೇಷದ ಇರದಿರಲಿ ಕಾಮನೆ
ಮುಂದುವರಿಯುವ ಇಟ್ಟು ಪ್ರೀತಿಯ ಹೆಜ್ಜೆಯನ್ನು
ಅಳಿಸುವ ಎಲ್ಲ ವೈಷಮ್ಯವನ್ನು !!
ಆರಿಸಿ ಸತ್ಯ ಪಥವನ್ನು.....

!!ಈ ಮನುಷ್ಯ ತುಂಬಾ ದುರ್ಬಲ
ಅವನು ಕಟ್ಟು ಸಾವಿರ ಕೊರತೆಗಳ
ಆದರೆ ನೀನಿರುವೆ ನಮ್ಮಲ್ಲಿ
ದೊಡ್ಡ ಕೃಪಾಳು ನಮ್ಮ ಪಾಲಲ್ಲಿ
ಉಳಿದಿದೆ ಈ ಭೂಮಿ ಕೃಪೆಯಿಂದ ನಿನ್ನ
ಜನ್ಮ ನೀಡಿದವನೇ ನೀನು ನಮ್ಮನ್ನ
ನೀನೆ ಸಹಿಸುವೆ ನಮ್ಮೆಲ್ಲರ ದುಃಖವನ್ನು  !!
ಆರಿಸಿ ಸತ್ಯ ಪಥವನ್ನು .....

ಮೂಲ : ಭರತ್ ವ್ಯಾಸ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ವಸಂತ್ ದೇಸಾಯಿ
ಚಿತ್ರ : ದೋ ಆಂಖೆ ಬಾರಹ ಹಾತ್

ऐ मालिक तेरे बन्दे हम
ऐसे हों हमारे करम
नेकी पर चलें और बदी से टलें,
ताकि हंसते हुए निकले दम

ये अंधेरा घना छा रहा, तेरा इंसान घबरा रहा
हो रहा बेखबर, कुछ न आता नज़र
सुख का सूरज छुपा जा रहा
है तेरी रोशनी में जो दम
तो अमावस को कर दे पूनम
नेकी पर...

जब ज़ुल्मों का हो सामना, तब तू ही हमें थामना
वो बुराई करें, हम भलाई भरें
नहीं बदले की हो कामना
बढ़ उठे प्यार का हर कदम, और मिटे बैर का ये भरम
नेकी पर...

बड़ा कमज़ोर है आदमी, अभी लाखों हैं इसमें कमी
पर तू जो खड़ा, है दयालू बड़ा
तेरी किरपा से धरती थमी
दिया तूने हमें जब जनम
तू ही झेलेगा हम सबके ग़म
नेकी पर...
► www.youtube.com/watch?v=m2CJZiP4_Sc

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...