Tuesday, April 16, 2013

ಸೇಂದಿ ಅಂಗಡಿ

ಮುಂಜಾನೆ ಸಂಜೆ ಎಂದಿಲ್ಲ 
ಎದ್ದ ಸಮಯವೇ 
ಅವನಿಗೆ 
ಪ್ರಭಾತ !

ಅವನು ಧರಿಸುವ ಬಟ್ಟೆ 
ಅಂದರೆ 
ಒಂದು ಹರಕಲು ಬನಿಯಾನು 
ಸೊಂಟಕ್ಕೆ ಲುಂಗಿ !

ಹಬ್ಬದ ದಿವಸ
ಆವನ ಮೈ ಹಾಗು
ಉಟ್ಟ ಬಟ್ಟೆಗೆ
ಸಾಬೂನು ನೀರಿನ ಭಾಗ್ಯ!

ಪೇಟೆಯ ಯಾವುದೇ ಅಂಗಡಿಯ ಬಗ್ಗೆ
ಅವನಿಗೆ ಆಸಕ್ತಿ ಇಲ್ಲ
ಒಂದು ಅಂಗಡಿ ಬಿಟ್ಟು
"ಸೇಂದಿ ಅಂಗಡಿ" !

ಅವನ ಹಾಸಿಗೆ
ಅಂದರೆ
ಹೆಚ್ಚಾಗಿ ಯಾವುದೇ ಚರಂಡಿ ಅಲ್ಲದೆ
ಕಸದ ರಾಶಿ !

ಅವನಲ್ಲಿ ಇರುವುದು
ಒಂದೇ ಗುಣ
ಅಂದರೆ
ಪ್ರಾಮಾಣಿಕತೆ!

ಇಡಿ ಮನೆ ಬೇಕಾದರೂ
ಅವನ ಭರವಸೆಯಲ್ಲಿ
ಬಿಟ್ಟು ಹೋಗಬಹುದು
ಒಂದು ನಯ ಪೈಸೆ ಅಲ್ಲಿಲ್ಲಾಗದು !

ಆದರೆ ಮನೆಯವರಿಂದ
ಹಣ ಬಂದ ಕೂಡಲೇ
ಅವನನ್ನು ಎಳೆಯುವುದು
ಆದೇ "ಸೇಂದಿ ಅಂಗಡಿ"!

ಎಷ್ಟೋ ವರ್ಷದ ನಂತರ
ಅವನನ್ನು ನೋಡಿದ್ದು
ಈಗ ಅವನ ಶರೀರದ ಅವಸ್ಥೆ
ಇನ್ನೂ ಹಾಳು!

ಆದರೆ ಈಗಲೂ ಬೇರೆ ಯಾವದರಲ್ಲೂ
ಅವನಿಗೆ ರುಚಿ ಇಲ್ಲ
ಅವನಾಯಿತು ಹಾಗು ಅವನ
ಅದೇ "ಸೇಂದಿ ಅಂಗಡಿ" ಆಯಿತು!
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...