Wednesday, April 10, 2013

ಮೆಲ್ಲ ಮೆಲ್ಲನೆ ತವಕಿಸು


!!ಮೆಲ್ಲ ಮೆಲ್ಲನೆ ತವಕಿಸು
ಹಾತೊರೆಯುವ ಹೃದಯವೆ
ಯಾರೋ ಬರುತ್ತಿದ್ದಾರೆ
ಹೀಗೆ ಚಡಪಡಿಸಿ ನನ್ನನ್ನೂ ಚಡಪಡಿಸದಿರು ಪದೇ ಪದೇ
ಯಾರೋ ಬರುತ್ತಿದ್ದಾರೆ!!

!!ಅವನ ಪಾದಗಳ ಪರಿಮಳ ಗಾಳಿಯಲ್ಲಿದೆ
ಅವನ ಹೆಜ್ಜೆಗಳ ಸ್ವರ ಅಧೀನದಲ್ಲಿದೆ
ನನಗೆ ಮಾಡಲು ಕೊಡು
ಮಾಡಲು ಕೊಡು ಅಂದ ಸಿಂಗಾರ
ಯಾರೋ ಬರುತ್ತಿದ್ದಾರೆ!!
ಮೆಲ್ಲ ಮೆಲ್ಲನೆ ತವಕಿಸು...

!!ನನ್ನನ್ನು ಸ್ಪರ್ಶಿಸುತ್ತಿದೆ ಅವನ ಛಾಯೆಗಳು
ಹೃದಯದ ಹತ್ತಿರ ನುಡಿಯುತ್ತಿದೆ ಶಹನಾಯಿಗಳು
ನನ್ನ ಕನಸಿನ ಅಂಗಳದಲ್ಲಿ ಹಾಡುತ್ತಿದೆ ಪ್ರೀತಿ
ಯಾರೋ ಬರುತ್ತಿದ್ದಾರೆ!!
ಮೆಲ್ಲ ಮೆಲ್ಲನೆ ತವಕಿಸು...

!!ಮುನಿಸಿ ಮೊದಲು ಮನ ತುಂಬಾ ಸತಾಯಿಸುವೆ ನಾನು
ಅವನು ಮನವೊಲಿಸಿದಾಗ ಒಪ್ಪುವೆ ನಾನು
ಹೀಗಿರುವಾಗ ಹೃದಯದಲ್ಲಿ ಎಲ್ಲಿರುತ್ತದೆ ತಾಳ್ಮೆ
ಯಾರೋ ಬರುತ್ತಿದ್ದಾರೆ!!
ಮೆಲ್ಲ ಮೆಲ್ಲನೆ ತವಕಿಸು...

ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ :ಹೇಮಂತ್ ಕುಮಾರ್
ಚಿತ್ರ : ಅನುಪಮ

Dheere Dheere Machal Aye Dila-ye-bekaraar, Koee Aataa Hain
yoo Tadap Ke Naa Tadapaa Muze Baar Baar, Koee Aataa Hain

usake Daaman Kee Khushboo Hawaaon Mein Hain
usake Kadamon Kee Aahat Panaahon Mein Hain
muz Ko Karane De Karane De Solah Singaar

muz Ko Chhune Lagee Usakee Parachhaeeyaan
dil Ke Najadik Bajatee Hain Shahanaaeeyaan
mere Sapanon Ke Aangan Mein Gaataa Hain Pyaar

ruthh Ke Pahale Jee Bhar Sataaoongee Main
jab Manaayenge Wo Man Jaaoongee Main
dil Pe Rahataa Hain Ayese Mein Kab Ikhtiyaar
http://www.youtube.com/watch?v=VIDnaZUyzv0

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...