ಕೋಗಿಲೆ
ಹೆಸರು ಅವಳದ್ದು
ಆದರೆ
ಅವಳು ಹಾಡಿದುದೆಲ್ಲ ರಾಗ ಅಲ್ಲ ಸದ್ದು
-------
ಪುಷ್ಪ
ಹೂ ಅಲ್ಲ
ಅವಳ ಹೆಸರು
-------
ಶೋಕ
ಬಂದಿದ್ದಾರೆ
ಶೋಕ ಸಭೆಯಲ್ಲಿ
ಧರಿಸಿ ಭವ್ಯ ಪೋಷಾಕ
ಇದೆಂಥಾ ಶೋಕ
------
ಸಾಲ
ಅವನು ಬಾಲ್ಯದಲ್ಲಿ
ಶಾಲೆಯಲ್ಲಿ ತನ್ನ ತಿಂಡಿ
ನನ್ನಿಂದ ಹಂಚಿದ,
ಇಂದಿಗೂ ತೀರಲಿಲ್ಲ
ಅವನ ಸಾಲ
by ಹರೀಶ್ ಶೆಟ್ಟಿ,ಶಿರ್ವ
No comments:
Post a Comment