Wednesday, April 3, 2013

ಅಲ್ಲಿ ನೋಡಿ ದೀಪ ಬೆಳಗುತ್ತಿದೆ

ಅಲ್ಲಿ ನೋಡಿ 
ದೀಪ ಬೆಳಗುತ್ತಿದೆ 
ಕತ್ತಲಾಗಲಿಲ್ಲ ನೋಡಿ 
ನೋಡಿ ನೋಡಿ ಎಷ್ಟೆಷ್ಟೋ ದೀಪಗಳು

ತನ್ನ ಬೆಳಕನ್ನು ನೀಡಿ ಹೋದ ನೋಡಿ 
ಈ ಎಲ್ಲ ದೀಪಗಳಿಗೆ
ತನ್ನ ಕಾಂತಿ ಬೀರಿ ಎಂದು
ಆಶಿರ್ವಾದ ನೀಡಿ ಹೋದ ನೋಡಿ 

ರವಿ ನಿಷ್ಠುರನೆಂದು
ಹೇಗೆ ಹೇಳಲಿ
ಅವನು ಜನಿಸುವುದೇ
ಅಸ್ತನಾಗಲು

ಆಘಾತವಾಯಿತೆ, ಹೌದೇ
ಆದರೆ ಕಣ್ಣೀರನ್ನು ತಡೆಯಿರಿ
ಅವನು ನೀಡಿದ
ಬೆಳಕನ್ನು ಆರಿಸದಿರಿ

ಜ್ಞಾನ ಪ್ರಕಾಶಿಸಲಿ
ಸಂತೋಷವಾಗುವುದು ಅವನಿಗೆ
ಖುಷಿ ಪಡುವನು ಅವನು
ಇದೇ ಅವನ ಆಶಯವಾಗಿತ್ತು
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...