!!ಈ ಐಶ್ವರ್ಯ ತೆಗೆದುಕೊಳ್ಳಿ
ಈ ಪ್ರಸಿದ್ಧಿ ತೆಗೆದುಕೊಳ್ಳಿ,
ನನ್ನಿಂದ ನನ್ನ ಯೌವನವನ್ನೂ ಕಸಿದುಕೊಳ್ಳಿ
ಆದರೆ ಹಿಂತಿರುಗಿಸಿ ನನ್ನ ಬಾಲ್ಯದ ವರ್ಷವನ್ನು
ಆ ಕಾಗದದ ದೋಣಿ
ಆ ಮಳೆಯ ನೀರಿನ ಹರ್ಷವನ್ನು !!
!!ಬೀದಿಯ ಬಹಳ ಹಳೆಯ ಗುರುತನ್ನು
ಆ ಮುದುಕಿಯೊಬ್ಬಳು
ಮಕ್ಕಳು ಕರೆಯುತ್ತಿದ್ದರು ಅಜ್ಜಿ ಅವಳನ್ನು
ಆ ಅಜ್ಜಿಯ ಕಥೆಯಲ್ಲಿ ಅಪ್ಸರೆಯರ ಬಿಡಾರ
ಸುಕ್ಕುಗಟ್ಟಿದ ಮೋರೆಯಲ್ಲಿ
ಶತಮಾನಗಳ ತಿಳಿವಳಿಕೆ ಅಪಾರ
ಮರೆಯ ಬೇಕೆಂದರೂ ಮರೆಯಲಾಗದು
ಆ ತೀರ ಚಿಕ್ಕ ರಾತ್ರಿ
ಆ ಅತಿ ದೀರ್ಘ ಕತೆಯನ್ನು!!
ಆ ಕಾಗದದ ದೋಣಿ....
!!ಸುಡು ಬಿಸಿಲಲ್ಲಿ
ತನ್ನ ಮನೆಯಿಂದ ಹೊರಡುವುದು
ಆ ಹಕ್ಕಿ ಬುಲ್ಬುಲ್
ಆ ಪಾತರಗಿತ್ತಿ ಹಿಡಿಯುವುದು
ಆ ಗೊಂಬೆಯ ಮದುವೆಯಲ್ಲಿ ಜಗಳುವುದು
ಆ ಉಯ್ಯಾಲೆಯಿಂದ ಬೀಳುವುದು
ಬಿದ್ದು ನಿಭಾಯಿಸುವುದು
ಆ ಹಿತ್ತಾಳೆಯ ವಸ್ತುಗಳ ಪ್ರೀತಿಯ ಉಡುಗೊರೆ
ಆ ತುಂಡಾದ ಕೆಂಪು ಬಿಳಿ ಸಮ್ಮಿಶ್ರ ಬಳೆಗಳನ್ನು!!
ಆ ಕಾಗದದ ದೋಣಿ....
!!ಕೆಲವೊಮ್ಮೆ ಎತ್ತರದ
ಮರಳಿನ ರಾಶಿಗೆ ಹೋಗುವುದು
ಮರುಳ ಮನೆ ಮಾಡುವುದು
ಮಾಡಿ ಅಳಿಸುವುದು
ಆ ಮುದ್ದು ಪ್ರೀತಿಯ ಚಿತ್ರ ನಮ್ಮ
ಆ ಕನಸ ಆಟಿಕೆಯ ಸೊತ್ತು ನಮ್ಮ
ಇರಲಿಲ್ಲ ಜಗದ ಭಯ
ಇರಲಿಲ್ಲ ಸಂಬಂಧದ ಬಂಧನ
ಹೇಗೆ ತಾನೇ ಮರೆಯಲಿ ಆ ಸುಂದರ ಬದುಕನ್ನು !!
ಆ ಕಾಗದದ ದೋಣಿ....
ಮೂಲ :ಸುದರ್ಶನ್ ಫಕೀರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಜಗಜಿತ್ ಸಿಂಗ್
ये दौलत भी ले लो, ये शोहरत भी ले लो
भले छीन लो मुझसे मेरी जवानी
मगर मुझको लौटा दो बचपन का सावन
वो काग़ज़ की कश्ती, वो बारिश का पानी
मुहल्ले की सबसे निशानी पुरानी
वो बुढ़िया जिसे बच्चे कहते थे नानी
वो नानी की बातों में परियों का डेरा
वो चहरे की झुरिर्यों में सदियों का फेरा
भुलाये नहीं भूल सकता है कोई
वो छोटी सी रातें वो लम्बी कहानी
कड़ी धूप में अपने घर से निकलना
वो चिड़िया वो बुलबुल वो तितली पकड़ना
वो गुड़िया की शादी में लड़ना झगड़ना
वो झूलों से गिरना वो गिर के सम्भलना
वो पीतल के छल्लों के प्यारे से तोहफ़े
वो टूटी हुई चूड़ियों की निशानी
कभी रेत के ऊँचे टीलों पे जाना
घरोंदे बनाना बना के मिटाना
वो मासूम चाहत की तस्वीर अपनी
वो ख़्वाबों खिलौनों की जागीर अपनी
न दुनिया का ग़म था न रिश्तों के बंधन
बड़ी खूबसूरत थी वो ज़िंदगानी
www.youtube.com/watch?v=NqRCVdotF1U
ನನಗೂ ಈ ಗೀತೆಯೂ ಅಚ್ಚು ಮೆಚ್ಚು. ನೀವು ಕನ್ನಡೀಕರಿಸಿದ ರೀತಿಯೂ ಆತ್ಮೀಯವಾಗಿದೆ. ಮತ್ತೆ ನಾನು ಬಾಲ್ಯಕೆ ತುಸುಕಾಲ ಹೋಗಿ ಬಂದೆ...
ReplyDeleteತುಂಬಾ ಧನ್ಯವಾದಗಳು ಬದರಿ ಸರ್ ....
ReplyDelete