Thursday, April 4, 2013

ಮಾನವತೆ


ಅವನು ಕೇಳಿದ
"ನಿನ್ಯಾರು ?"
ಇವನು ಕೇಳಿದ
"ಹೇಳುವೆಯಾ ನಾನ್ಯಾರೆಂದು ?
_________
ಅವಳಿಂದ ಭಿಕ್ಷೆ
ಬೇಡಲೆಂದು ಹೋದವನು
ಅವಳ ಮಕ್ಕಳು
ಹಸಿವೆಯಿಂದ ಅಳುತ್ತಿದ್ದನ್ನು ಕಂಡ,
ಅವನು ತನ್ನ ಜೋಳಿಗೆಯಲ್ಲಿದ್ದ
ಎಲ್ಲ ಅಕ್ಕಿಯನ್ನು
ಅವಳ ಅಂಗಳದಲ್ಲಿ ಚೆಲ್ಲಿ ಹೋದ
____________________
ಅವನು
ದೇವಾಲಯದ ಪ್ರಸಿದ್ಧ ಪೂಜಾರಿ,
ಜನರು ಮರುಳು ಅವನ ಕೈಯಿಂದ
ಪಡೆಯಲು ತೀರ್ಥ ಪ್ರಸಾದ,
ಆದರೆ ಮನೆಯಲ್ಲಿ
ಅವನ
ಹೆಂಡತಿಗೆ ಅವನು
ದಿನನಿತ್ಯ ನೀಡುತ್ತಿದ್ದ ಪೆಟ್ಟಿನ ಪ್ರಸಾದ.
______
ಅವನು
ಮಹಾ ದಾನಿಯೆಂದು ಪ್ರಸಿದ್ದ,
ಅವನ ಮನೆಯಿಂದ
ಖಾಲಿ ಕೈ ಹೋದವರಿಲ್ಲ,
ಮನೆ ಕೆಲಸ ಮಾಡುತ್ತಿದ್ದವಳ
ಮಗಳು ಬಡತನದಿಂದ
ಶಾಲೆಗೆ ಹೋಗುವುದಿಲ್ಲವೆಂದು
ಅವನಿಗೆ ಗೊತ್ತಾಯಿತು
ಅವನು ಅವಳನ್ನು ಕರೆದು
"ನೀನು ಸಹ ನಾಳೆಯಿಂದ ಮನೆ ಕೆಲಸಕ್ಕೆ ಬಾ ಎಂದ ".
by ಹರೀಶ್ ಶೆಟ್ಟಿ ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...