Wednesday, April 10, 2013

ಮೋಹಕ ರಾತ್ರಿ ಕಳೆದಿದೆ

!!ಮೋಹಕ ರಾತ್ರಿ ಕಳೆದಿದೆ 
ತಿಳಿದಿಲ್ಲ ನೀನ್ಯಾವಾಗ ಬರುವೆಯೆಂದು 
ಜಗದ ಋತುವೆಲ್ಲ ಬದಲಾಗಿದೆ
ತಿಳಿದಿಲ್ಲ ನೀನ್ಯಾವಾಗ ಬರುವೆಯೆಂದು!!

!!ನೋಟಗಳು ತನ್ನ ಮೋಜನ್ನು 
ತೋರಿಸಿ ತೋರಿಸಿ ಮರೆಯಾದವು 
ತಾರೆಗಳು ತನ್ನ ಬೆಳಕನ್ನು 
ತೊರೆದು ತೊರೆದು ಮಲಗಿದವು 
ಪ್ರತಿಯೊಂದು ದೀಪ ಉರಿದಿದೆ 
ತಿಳಿದಿಲ್ಲ ನೀನ್ಯಾವಾಗ ಬರುವೆಯೆಂದು!!

!!ಹಂಬಲಿಸುತ್ತಿದ್ದೇನೆ ನಾನಿಲ್ಲಿ 
ನಿನ್ನ ನಿರೀಕ್ಷೆಯಲಿ
ಶಿಶಿರದ ಬಣ್ಣ ಏರುತ್ತಿದೆ 

ವಸಂತ ಕಾಲದಲಿ
ಗಾಳಿಯೂ ಹಾದಿ ಬದಲಾಯಿಸುತ್ತಿದೆ
ತಿಳಿದಿಲ್ಲ ನೀನ್ಯಾವಾಗ ಬರುವೆಯೆಂದು!!


ಮೂಲ : ಶಕೀಲ್ ಬದಯೂನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ನೌಶಾದ್
ಚಿತ್ರ : ದುಲಾರಿ

Suhani Raat Dhal Chuki Na Jaane Tum Kab Aaoge
Jahan Ki Rut Badal Chuki Na Jaane Tum Kab Aaoge

Nazaare Apni Mastiyaan Dikha Dikha Ke Kho Gaye
Sitaare Apni Roshni Luta Luta Ke So Gaye
Har Ek Shamma Jal Chuki
Na Jaane Tum Kab Aaoge

Tadap Rahe Hain Hum Yahan Tumhare Intezaar Mein
Khiza Ka Rang Aa Chala Hai Mausam-E-Bahar Mein
Havaa Bhi Rukh Badal Chuki
Na Jaane Tum Kab Aaoge

http://www.youtube.com/watch?v=XkOFIgN_Gvg

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...