Sunday 6 November 2011

ಸಾಧಾರಣ ಪ್ರೇಮಿ

ನಾನು ರಾಮನಲ್ಲ
ಆದರೂ ಸೀತೆಯಂತೆ ನಿನ್ನಿಂದ ಅಗ್ನಿ ಪರೀಕ್ಷೆ ಮಾಡಿಸಲಾರೆ

ನಾನು ಕೃಷ್ಣನಲ್ಲ
ಆದರೂ ರಾಧೆಯಂತೆ ನಿನ್ನನ್ನು ವಿರಹ ಅಗ್ನಿಯಲ್ಲಿ ಸುಡಲು ಬಿಡಲಾರೆ

ನಾನು ಯುಧಿಷ್ಟರನಲ್ಲ
ಆದರೂ ದ್ರೌಪದಿಯನ್ನು ಜೂಜಿನಲ್ಲಿ ಸೋತಂತೆ ನಾ ನಿನ್ನನ್ನು ಸೋಲಲಾರೆ

ನಾನೊಬ್ಬ ಸಾಧಾರಣ ಪ್ರೇಮಿ
ನಿನ್ನ ಪ್ರೀತಿಗಾಗಿ ನಾ ಯಾವುದೂ ಪರೀಕ್ಷೆ ಕೊಡಲು ಸಿದ್ಧ
ನಿನ್ನ ಪ್ರೀತಿಯ ಜಾಲದಲಿ ಇಡಿ ಜೀವನ ನಿನ್ನ ವಶದಲ್ಲಿರಲು ಸಿದ್ಧ
ನಿನ್ನ ಪ್ರೀತಿಯಲಿ ತನ್ನನ್ನು ತಾನೇ ಸೋಲಲು ಸಿದ್ದ 
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment