ಏನೋ ಕುತೂಹಲ, ಏನು ಹೇಳಬಹುದು? ಅವರಿಗೆ ಮೆಚ್ಚುಗೆಯಾಗಬಹುದೇ ನಾ ಬರೆದ ಮೊದಲ ಕಾದಂಬರಿ?ಅವರು ಏನು ಹೇಳಬಹುದು? ನನ್ನ ಕಾದಂಬರಿ ಮೆಚ್ಚಿ ಪ್ರಕಟಿಸಬಹುದೆ? ಇದೆಲ್ಲ ವಿಚಾರ ಮಾಡುತ ಶ್ರೀಹರಿ ನಡೆಯುತ್ತ ಹೋಗುತ್ತಿದ್ದ, ಹೇಗೋ ಅರ್ದ ಗಂಟೆ ನಂತರ ಅವನು ಯಾವುದೋ ಒಂದು ಪುಸ್ತಕ ಪ್ರಕಟಣೆಯ ಆಫೀಸ್ ಗೆ ಬಂದು ಮುಟ್ಟಿದ.
ಆಫೀಸ್ ಒಳಗೆ ಬಂದು ಸಂಪಾದಕರನ್ನು ಬೇಟಿಯಾಗಲಿದೆ ಎಂದು ಹೇಳಿ, ಅಲ್ಲೇ ಇದ್ದ ಒಂದು ಸೋಫಾದಲ್ಲಿ ಕೂತು ಕೊಂಡ.
ಒಂದು ೪೫ ನಿಮಿಷದ ನಂತರ ಸಂಪಾದಕರು ಅವನನ್ನು ಒಳಗೆ ಕರೆದರು.
"ಬನ್ನಿ ಬನ್ನಿ ಶ್ರೀಹರಿಯವರೇ, ರಾಮಕೃಷ್ಣನವರು ಫೋನ್ ಮಾಡಿದರು, ಕೂತು ಕೊಳ್ಳಿ" ಎಂದು ಸಂಪಾದಕರು ಅವ್ಹಾನಿಸಿದರು.
"ನಮಸ್ಕಾರ ಸರ್" ಎಂದು ನಾಜೂಕಾಗಿ ಹೇಳಿ ಕೂತು ಕೊಂಡ.
"ಸರ್ ಇದು ನಾನು ಬರೆದ ಕಾದಂಬರಿ" .
"ಹೌದೆ ಏನು ಇದರ ವಿಷಯ "
"ಸರ್ ...ಇದು ಒಂದು ಕೌಟುಂಬಿಕ ಕಥೆ, ದಯಮಾಡಿ ನೀವು ಇದನ್ನು ಓದಿ ಮುದ್ರಿಸ ಬೇಕು"
"ಆಯಿತು ರಾಮಕೃಷ್ಣರು ನಿಮಗೆ ಕಳಿಸಿದರು ಅಂದರೆ ಓದದೆ ಆಗುತ್ತದೆಯೇ, ನಾನು ಓದಿ ನಿಮಗೆ ತಿಳಿಸುತ್ತೇನೆ , ಆಗಬಹುದೇ ?
"ಖಂಡಿತವಾಗಿ ಸರ್ " ಎಂದು ಹೇಳಿ ಶ್ರೀಹರಿ ಸಂತೋಷದಿಂದ ಅಲ್ಲಿಂದ ಹೊರಟೆ.
ಹಲವು ದಿವಸದ ನಂತರ ಹೀಗೆಯೇ ಹಳೆ ವಾರ್ತಾ ಪತ್ರಿಕೆಯ ಗಂಟು ಮಾಡಿ ಗುಜರಿ ಅಂಗಡಿಯಲಿ ಮಾರಲಿಕ್ಕೆಂದು ಶ್ರೀಹರಿ ಹೋದ, ಗುಜರಿ ಅಂಗಡಿಯಲಿ ಗಂಟನ್ನು ಕೊಟ್ಟು ಹಣ ತೆಗೊಂಡು ಹೋಗುವಾಗ, ಹಾಗೆಯೇ ಅಂಗಡಿಯ ಮೂಲೆಯಲಿ ಅವನ ದೃಷ್ಟಿ ಬಿತ್ತು. ಆ ಮೂಲೆಯಲಿ ಅವನು ಪರಿಶ್ರಮ ಪಟ್ಟು ಬರೆದ ಕಾದಂಬರಿಯ ಹಾಳೆಗಳು ಬಿದ್ದು ಅವನನ್ನು ದಯನೀಯ ದೃಷ್ಟಿಯಿಂದ ನೋಡುತ್ತಿತ್ತು, ಶ್ರೀಹರಿಯ ಹೃದಯ ಭಾರವಾಯಿತು ಕಣ್ಣಿನಿಂದ ಕಣ್ಣೀರು ಹರಿದು ಬಂತು, ಮೆಲ್ಲನೆ ಅವನು ಅಲ್ಲಿಂದ ಕಾಲು ತೆಗೆದ.
by ಹರೀಶ್ ಶೆಟ್ಟಿ, ಶಿರ್ವ

is this story true!!! well then u can put ur novel in ur blog itself..
ReplyDeleteತುಂಬಾ ಧನ್ಯವಾದಗಳು .....
ReplyDelete