ಕೇವಲ ಸತ್ಯ ಹೇಳಿದಕ್ಕೆ........
________________________
ಸತ್ಯದ ಶವ ಮಣ್ಣಲ್ಲಿ ಅಡಗಿತ್ತು
ಅದರ ಮೇಲೆ ಸುಳ್ಳು ಬೆತ್ತಲೆ ನರ್ತಿಸುತ್ತಿತ್ತು ........
_________________________
ಅವಳು"ನೀನು ಪ್ರಾಪಂಚಿಕತೆ ಕಲಿ"
ಎಂದು ಹೇಳಿ ನನ್ನನ್ನು ಬಿಟ್ಟು ಹೋದಳು......
_________________________
ಕೋಟಿ ಕೋಟಿ ಹಣ ಸಂಪಾದಿಸಿದೆ
ಮೋಹ ಮುಗಿಯುತ್ತಲೇ ಭಿಕ್ಷುಕನಾದೆ .....
__________________________
ನಾನೊಬ್ಬನೇ ಈ ಪ್ರಪಂಚದಲ್ಲಿ
ಈಗ ನಾನು "ಸನ್ಯಾಸಿ" ........
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment