ಯಾಕೆ ?
ತುತ್ತು ಅನ್ನಕ್ಕಾಗಿ ಪರದಾಡುವ ನನಗೆ
ಮುಪ್ಪು ಬರುವ ಚಿಂತೆ ಯಾಕೆ ?
ಸಮುದ್ರ ತಟದಲ್ಲಿ ನಿವಾಸ ಇದ್ದ ನನಗೆ
ಸುನಾಮಿ ಬರುವ ಹೆದರಿಕೆ ಯಾಕೆ ?
ತುಂಡು ಜೋಪಡಿಯಲ್ಲಿರುವ ನನಗೆ
ಭೂಕಂಪ ಆಗುವ ಭಯ ಯಾಕೆ ?
ಆಕಾಶದಂತ ಚಾವಣಿ ಇದ್ದ ನನಗೆ
ಮಳೆ ನೀರಿನ ಭೀತಿ ಯಾಕೆ ?
ಹರಿದ ಅಂಗಿ ಧರಿಸುವ ನನಗೆ
ಚಳಿಗಾಲದ ದಿಗಿಲು ಯಾಕೆ ?
ದಿನಾಲೂ ಸಾವಿರಾರು ಸರಿ ಸಾಯುವ ನನಗೆ
ಮೃತ್ಯುವಿನ ಗಾಬರಿ ಯಾಕೆ ?
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment