Thursday, November 17, 2011

ಯಾರು ನನ್ನವರು ಯಾರು ಪರಕೀಯರು

ಯಾರು ನನ್ನವರು  
ಯಾರು ಪರಕೀಯರು
ಗುರುತಿಸುವುದು ಹೇಗೆ ?

ಕ್ಷಣದಲ್ಲಿ ಅವರು ಒಳ್ಳೆಯವರು
ಕ್ಷಣದಲ್ಲಿ ಅವರು ದುಷ್ಟರು
ಯಾರೂ ನಮ್ಮವರೆಂದು ಅರಿಯುವುದು ಹೇಗೆ ?

ರಕ್ತ ಸಂಬಂಧದಲ್ಲೂ ಹೊಂದಾಣಿಕೆಯ ಕೊರತೆ
ಅಪರಿಚಿತರ ಮೇಲೆ ಮೂಡುತ್ತದೆ ನಂಬಿಕೆ
ಇದರ ಕಾರಣ ಹುಡುಕುವುದು ಹೇಗೆ ?

ಮಿತ್ರರಿಂದ ಜಗಳವಾಗಿ ಉಂಟಾಗುತ್ತದೆ ಶತ್ರುತ್ವ
ಶತ್ರುವಿಂದ ಉಪಕಾರವಾಗಿ ತಿಳಿಯುತ್ತದೆ ಮಿತ್ರತ್ವ 
ಜನರ ಸತ್ಯ ಅಸತ್ಯ ಪರಿಗಣಿಸುವುದು ಹೇಗೆ ?
by ಹರೀಶ್ ಶೆಟ್ಟಿ, ಶಿರ್ವ

2 comments:

  1. ಹೌದು ಕಣ್ರಿ.. ನಮಗೆ ನಾವೇ ಅಂತಿಮ ಮಿತ್ರ.. ಬೇರೆಯವರಲ್ಲೆಲ್ಲಾ ಏನಾದರೂ ಹುಳುಕು ಕಂಡೇ ಕಾಣುತ್ತದೆ.. ಒಳ್ಳೆಯದಕ್ಕಾಗಿ ಹೊಂದಾಣಿಕೆ ಬೇಕಷ್ಟೆ..

    ReplyDelete
  2. ತುಂಬಾ ಧನ್ಯವಾದಗಳು ಪ್ರಶಸ್ತಿ .....

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...