Tuesday, November 8, 2011

ಹುಲ್ಲು ಮಂಜಿನ ಮಿಲನ

ಹಸಿರು ಹುಲ್ಲ ಮೇಲೆ
ಮಂಜಿನ ಹನಿಗಳ ನರ್ತನ
ಆದರೆ ಅವುಗಳ ಬಾಳು ಕೆಲವೇ ಕ್ಷಣ

ಭಾಗ್ಯದ ಅನನ್ಯ ಪ್ರೇಮ ಬಂಧನ
ಹುಲ್ಲಿಗೆ ಕೊಡುತಿವೆ ಜೀವನ
ಸುಂದರ ಅದ್ಭುತ ವಿಲಕ್ಷಣ

ಹುಲ್ಲಿಗೆ ಆನಂದ ಉಲ್ಲಾಸ ಉತ್ತೇಕನ
ಮಂಜಿನ ಅಲ್ಪಾವಧಿಯ ಮಿಲನ
ಅಪ್ಪಿ ತಬ್ಬಿ ಹೆಚ್ಚು ಗಳಿಗೆ ಒಟ್ಟಿಗೆ ಇರುವ ಮನ

ಸೂರ್ಯನ ಬಿಸಿಲ ತ್ವರೆತನ
ಹುಲ್ಲು ಮಂಜಿಗೆ ಕಂಪನ
ಎಷ್ಟು ಕಷ್ಟದಾಯಕ ಈ ವಿಚ್ಛೇದನ
by  ಹರೀಶ್ ಶೆಟ್ಟಿ, ಶಿರ್ವ

2 comments:

  1. ಪ್ರಾಸಬದ್ದವಾಗಿ ಚೆನ್ನಾಗಿ ಮೂಡಿಬಂದಿದೆ

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...