Tuesday, November 1, 2011

ಅಸ್ತಿತ್ವ

ಜೀವನವೆಲ್ಲ 
ಕಳೆದೆ  ಹುಡುಕುತ್ತಲೇ
ನನ್ನ ಅಸ್ತಿತ್ವ ಎಲ್ಲಿ ಎಂದು ಗೊತ್ತಾಗಲಿಲ್ಲವಲ್ಲ

ಹುಡುಕುವ 
ಶಕ್ತಿ ಮುಗಿಯುತ್ತಲೇ
ನಾನೂ ಇಲ್ಲ ನನ್ನ ಅಸ್ತಿತ್ವವು ಇಲ್ಲ

ಹೆಣ್ಣು ಹೊನ್ನು ಮಣ್ಣಿನ
ಆಸೆಯಲಿ ಮಗ್ನನಾಗಿ 
ಯಾವಾಗ ಮುಪ್ಪು ಸೇರಿದೆ ಎಂದು ತಿಳಿಯಲಿಲ್ಲವಲ್ಲ

ಮನ ಶರೀರ ಆತ್ಮ
ಇದರ ಅರ್ಥ ಆಗುತ್ತಲೇ
ನಶ್ವರ ಶರೀರ ಮಣ್ಣು ಪಾಲಾಯಿತಲ್ಲ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...