ನನಗೆ ಸೂರ್ಯನಾಗುವ ಬಯಕೆ
ಜಗತ್ತನ್ನು ಬೆಳಗಿಸುವ ಸೂರ್ಯನಂತೆ
ಪರೋಪಕಾರದ ಸಂಕಲ್ಪ ಮಾಡಿ
ನನ್ನ ಬಾಳ ಬೆಳಕನ್ನು ಎಲ್ಲರಲ್ಲೂ ಹಂಚುವೆ
ನನಗೆ ಚಂದ್ರನಾಗುವ ಬಯಕೆ
ತನ್ನ ಆಕಾರ ಬದಲಾಯಿಸುವ ಚಂದ್ರನಂತೆ
ನನ್ನ ಅಗತ್ಯಗಳನ್ನು ನಿರ್ಲಕ್ಷಿಸಿ ಕಡಿಮೆ ಮಾಡಿ
ಅನ್ಯರ ಜೀವನದ ಹುಣ್ಣಿಮೆಯ ಚಂದ್ರನಾಗುವೆ
ನನಗೆ ಮಲ್ಲಿಗೆ ಹೂವು ಆಗುವ ಬಯಕೆ
ಸುಗಂಧ ಹರಡುವ ಬಿಳಿ ಮಲ್ಲಿಗೆಯಂತೆ
ನಾನೂ ನನ್ನ ಹೃದಯ ನಿರ್ಮಲ ಮಾಡಿ
ಅನ್ಯರ ಜೀವನದಲಿ ಪರಿಮಳ ಬೀರುವೆ
ನನಗೆ ಗುಲಾಬಿ ಹೂವು ಆಗುವ ಬಯಕೆ
ಮುಳ್ಳ ಒಟ್ಟಿಗೆ ಬದುಕುವ ಗುಲಾಬಿಯಂತೆ
ನಾನೂ ನನ್ನ ದುಷ್ಟ ವಿಚಾರಗಳನ್ನು ಕಡೆಗಣಿಸಿ
ನನ್ನ ಒಳ್ಳೆಯ ಭಾವನೆಗಳನ್ನು ಚೆಲ್ಲುವೆ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment