Sunday, November 27, 2011

ವ್ಯತ್ಯಾಸ

ಅವನಿಗೆ ಎಲ್ಲರೂ ಸ್ವಾರ್ಥಿ ಎಂದು ಹೇಳುತ್ತಿದ್ದರು
ಆದರೆ ಅವನು ತನ್ನ ಕುಟುಂಬಕ್ಕಾಗಿ ತನ್ನ ಸರ್ವವನ್ನೂ ತ್ಯಾಗ ಮಾಡಿದ ನಿಸ್ವಾರ್ಥಿ .....
ಅವನಿಗೆ ಎಲ್ಲರೂ ನಿಸ್ವಾರ್ಥಿ ಎಂದು ಹೇಳುತ್ತಿದ್ದರು
ಆದರೆ  ಅವನು ತನ್ನದೇ ಲೋಕದಲ್ಲಿರಲು ತನ್ನ ಕುಟುಂಬ ತ್ಯಾಗ ಮಾಡಿದ ಸ್ವಾರ್ಥಿ ....
_____________________

ಅವನು ಹಲವು ಬಿದಿರಿಂದ
ಸುಂದರ ಗುಡಿಸಲು ಕಟ್ಟಿದ
ಅದರಲ್ಲಿ ಜೀವನವಿತ್ತು  ಅವನ ವಾಸವಿತ್ತು....
ಅವನು ನಾಲ್ಕು ಗೋಡೆಯಿಂದ ಕೂಡಿದ
ದೊಡ್ಡ ಮನೆಯೊಂದು ಕಟ್ಟಿದ
ಆದರೆ ಅಲ್ಲಿ ಇರುವುದು ಅವನಲ್ಲ ಕೇವಲ ಏಕಾಂತ ......
________________________
ಅವನು ಭಿಕ್ಷುಕ
ಭಿಕ್ಷೆ ಬೇಡಿ ಹೊಟ್ಟೆ ತುಂಬುತ್ತಿದ್ದ
ಆದರೆ ಭಿಕ್ಷೆ ನೀಡಿದವರಲ್ಲಿ ಯಾರೂ ಅವನ ಜ್ಞಾಪಕದಲ್ಲಿರಲಿಲ್ಲ ...
ಅವನು ಜ್ಞಾನಿ
ಅವನಿಗೆ ಕೊಟ್ಟ ಜ್ಞಾನ ಅವನು ಮರೆಯಲಿಲ್ಲ
ಆದರೆ ಜ್ಞಾನ ಕೊಟ್ಟವರನ್ನು  ಮರೆತು ಬಿಟ್ಟ.....

by  ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...