Friday, November 18, 2011

ಏನು ಪ್ರಯೋಜನ

ಮುಳ್ಳ ಹಾದಿಯಲಿ ನಡೆದವನು    
ಸುಳ್ಳ ಕಾರ್ಯ ಮಾಡಿದರೆ
ಏನು ಪ್ರಯೋಜನ  

ಒಳ್ಳೆ ವೃತ್ತಿ ಮಾಡುವವನು 
ಕೊಳ್ಳೆ ಹೊಡೆಯಲು ಹೋದರೆ 
ಏನು ಪ್ರಯೋಜನ

ಮೊಲೆ ಹಾಲು ಕುಡಿದವನು
ಹೆತ್ತ ತಾಯಿಗೆ ಕಷ್ಟ ಕೊಟ್ಟರೆ
ಏನು ಪ್ರಯೋಜನ 

ಧರ್ಮದ ಮಾತು ನುಡಿಯುವವನು
ಅಧರ್ಮ ಮಾಡಿದರೆ
ಏನು ಪ್ರಯೋಜನ

ಸಂಸಾರ ಇದ್ದವನು
ಕರ್ತವ್ಯ ಮರೆತು ಸನ್ಯಾಸಿ ಆದರೆ
ಏನು ಪ್ರಯೋಜನ

ದೇವರನ್ನು ನಂಬುವವನು 
ಜಾತಿ ಧರ್ಮ ವಿಂಗಡಿಸಿದರೆ
ಏನು ಪ್ರಯೋಜನ
by  ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...