Wednesday, November 2, 2011

ತೆರಳುವಾಗ ತೆರಳುವಾಗ

ತೆರಳುವಾಗ ತೆರಳುವಾಗ
ನನ್ನ ಈ ಗೀತೆ ನೆನಪಿನಲ್ಲಿಡು
ಎಂದೂ ವಿದಾಯ ಹೇಳದಿರು
ಎಂದೂ ವಿದಾಯ ಹೇಳದಿರು
ಅಳುವಾಗ ನಗುವಾಗ
ಹೀಗೆಯೇ ನೀನು
ಗುನುಗುನಿಸುತ್ತಿರು
ಎಂದೂ ವಿದಾಯ ಹೇಳದಿರು

ಪ್ರೀತಿ ಮಾಡುತ್ತಲೇ ಹೀಗೆಯೇ
ನಾವೆಲ್ಲಿಯೋ ಮರೆಯಾಗುವ
ನಿಸರ್ಗದ ಮಡಿಲಲಿ ಹೀಗೆಯೇ
ಅಡಗಿಕೊಂಡು ಮಲಗುವ
ಕನಸಿನ ಜಗತ್ತಲ್ಲಿ
ನನಗೆ ಹೀಗೆಯೇ ಕರೆಯುತ್ತಿರು
ಎಂದೂ ವಿದಾಯ ಹೇಳದಿರು...

ಮಧ್ಯೆ ಹಾದಿಯಲಿ ಪ್ರೇಯಸಿ
ನಾವೆಲ್ಲಿಯೋ ಅಗಲಿದರೆ
ಏಕಾಂತ ಜೀವನದ ಆ ಕ್ಷಣಗಳು
ನಿನಗೆ ಭಾರವಾದರೆ
ನಾನು ಹಿಂತಿರುಗಿ ಬರುವೆ
ನೀನು ಕರೆಯಲು ಮರೆಯದಿರು
ಎಂದೂ ವಿದಾಯ ಹೇಳದಿರು...

ಮೂಲ: ಅಮಿತ್ ಖನ್ನ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಬಪ್ಪಿ ಲಹರಿ
ಚಿತ್ರ : ಚಲ್ತೆ ಚಲ್ತೆ

Chalte Chalte Mere Yeh Geet Yaad Rakhna
Kabhi Alvida Na Kahna (2)
Rote Hanste Bas Yunhi Tum
Gungunate Rahna
Kabhi Alvida Na Kehna (2)

Pyar Karte Karte Hum Tum Kahin Kho Jayenge
Yunhi Baharon Ke Aanchal Mein Chhup Ke So Jayenge
Sapno Ki Duniya Mein Tum Yunhi Bulate Rahna
Kabhi Alvida Na Kehna (2)

Chalte Chalte...

Beech Rah Mein Dilbar Bichhad Jaye Kahin Hum Agar
Aur Sooni Si Lagey Tumhe Jeevan Ki Yeh Dagar
Hum Laut Ayenge Tum Yunhi Bulate Rehna
Kabhi Alvida Na Kehna (2)

Chalte Chalte..
www.youtube.com/watch?v=8fMHFLD6NFU

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...