ಅವನ ಹೆಸರು ಸ್ವಾಮಿ ಅಂತ, ೬೦ರ ಹರೆಯದ ಅವನು ಎಲ್ಲಿಂದ ಬಂದನೋ, ಎಲ್ಲಿಯವನು ಎಂದು ಯಾರಿಗೂ ಗೊತ್ತಿರಲಿಲ್ಲ, ಸ್ವಾಮಿಗೆ ಸಂಬಂಧಿಕರು ಅಂತ ಯಾರೂ ಇರಲಿಲ್ಲ, ಕೆಲವರು ಅವನು ತಮಿಳ್ ನಾಡಿನವ ಅಂತ ಹೇಳುತ್ತಿದ್ದರು.
ಸ್ವಾಮಿ ಹೀಗೆಯೇ ಅಲ್ಲಿ ಇಲ್ಲಿ ಬಿದ್ದು ಇರುತ್ತಿದ್ದ, ಹರಕು ಬಟ್ಟೆ, ಕುರುಚಲು ಗಡ್ಡ, ಮನಸ್ಸು ಬಂದರೆ ಸ್ನಾನ ಇಲ್ಲಾದರೆ ಇಲ್ಲ, ಅವನಿಗೆ ಯಾವುದೂ ಚಿಂತೆ ಅಂತ ಇರಲಿಲ್ಲ, ಸಿಕ್ಕಿದರೆ ಉಂಡ ಇಲ್ಲದ್ರೆ ಹಾಗೆಯೇ ಮಲಗಿ ಬಿಟ್ಟ, ಸ್ವಾಮಿ ತುಂಬಾ ಸ್ವಾಭಿಮಾನಿ ಅಂತ ಹೇಳಬಹುದು, ಅವನು ಯಾವಾಗಲು ಯಾರ ಹತ್ತಿರ ಏನೂ ಕೇಳುತ್ತಿರಲಿಲ್ಲ.
ಶ್ರೀಹರಿಯ ತಂದೆ ಅವರ ಹೋಟೆಲಲ್ಲಿ ಸ್ವಾಮಿಗೆ ಏನಾದರೂ ಕೆಲಸ ಕೊಟ್ಟು ಅವನ ಹೊಟ್ಟೆ ಪಾಡಿಗಾಗಿ ವ್ಯವಸ್ತೆ ಮಾಡುತ್ತಿದ್ದರು, ಆದರೆ ಸ್ವಾಮಿಯ ಒಂದು ಕೆಟ್ಟ ಅವ್ಯಾಸ ಅಂದರೆ ಹೆಂಡ ಕುಡಿಯುವುದು, ಅವನ ಹತ್ತಿರ ಹಣ ಬಂದರೆ ಸರಿ ಅವನು ಹೆಂಡ ಕುಡಿದು ಬಂದು ಮೂರು ಮೂರು ನಾಲ್ಕು ನಾಲ್ಕು ದಿವಸ ಬಿದ್ದಿರುತ್ತಿದ್ದ, ಶ್ರೀಹರಿಯ ತಂದೆ ಅದಕ್ಕೆ ಅವನಿಗೆ ಹಣ ಕೊಡಲು ಹೆದರುತ್ತಿದ್ದರು.
ಸ್ವಾಮಿಗೆ ಶ್ರೀಹರಿ ಅಂದರೆ ತುಂಬಾ ಇಷ್ಟ, ಯಾವಾಗಲು ಶ್ರೀಹರಿಯನ್ನು ನೋಡಿ ಅವನು ಸಂತೋಷ ಪಡುತ್ತಿದ್ದ, ಶ್ರೀಹರಿಯ ತಂದೆ ಸ್ವಾಮಿಗೆ ಶ್ರೀಹರಿಯನ್ನು ಶಾಲೆಗೆ ಬಿಡಲು ಹಾಗು ಕರೆದು ಕೊಂಡು ಬರುವ ಜವಾಬ್ದಾರಿ ಕೊಟ್ಟಿದ್ದರು, ಈ ಒಂದು ಕೆಲಸ ಸ್ವಾಮಿ ತುಂಬಾ ಚೆನ್ನಾಗಿ ಮಾಡುತ್ತಿದ್ದ, ಶ್ರೀಹರಿಯ ಮೇಲೆ ಇದ್ದ ಅವನ ಪ್ರೀತಿಯೇ ಇದಕ್ಕೆ ಕಾರಣವಾಗಿರಬಹುದು, ಅವನು ಯಾವಗಲೋಮ್ಮೆ ಶ್ರೀಹರಿಗೆ ತಿನ್ನಲು ಏನಾದರೂ ಕೊಡುತಾ ಇದ್ದ, ಶ್ರೀಹರಿಗೂ ಸ್ವಾಮಿ ಅಂದರೆ ತುಂಬಾ ಇಷ್ಟ.
ಒಂದು ದಿವಸ ಸ್ವಾಮಿ ಶ್ರೀಹರಿಯ ತಂದೆಯ ಹತ್ತಿರ ಬಂದು ಹಣ ಕೇಳಿದ, ತಂದೆಯವರು ಇನ್ನೂ ಇವನಿಗೆ ಹಣ ಕೊಟ್ಟರೆ ಇವನು ಹೆಂಡ ಕುಡಿದು ಬಿದ್ದಿರುತ್ತಾನೆ ಎಂದು ಕೊಡಲು ನಿರಾಕರಿಸಿದರು, ಅದಕ್ಕೆ ಸ್ವಾಮಿ ಮೊದಲ ಸರಿ ತಂದೆ ಹತ್ತಿರ ಕೋಪದಿಂದ ಮಾತನಾಡಿದ, ಇದರಿಂದ ಶ್ರೀಹರಿಯ ತಂದೆಗೆ ಬೇಜಾರಾಗಿ ಅವನಿಗೆ ಅವನು ಕೆಲಸ ಮಾಡಿದ ಲೆಕ್ಕ ಮಾಡಿ ಅವನಿಗೆ ಸಂಬಳ ಕೊಟ್ಟರು.
ಇದರ ನಂತರ ಹಲವು ದಿನ ಸ್ವಾಮಿ ಕಾಣಲಿಲ್ಲ, ಜನರು ಅವನು ಎಲ್ಲೊ ಬಿದ್ದು ಸತ್ತಿರಬೇಕೆಂದು ಅನುಮಾನಿಸಿದರು, ಆದರೆ ತುಂಬಾ ದಿವಸದ ನಂತರ ಸ್ವಾಮಿ ಪುನಃ ಹಾಜರಾದ, ಈಗ ಅವನ ಅವಸ್ತೆ ಇನ್ನು ಹಾಳಗಿತ್ತು, ಹರಕು ಬಟ್ಟೆ ವಾಸನೆಯಿಂದ ಅವನ ಸಮೀಪ ಹೋಗಲಾಗುತ್ತಿರಲಿಲ್ಲ, ಈ ಸಲ ಬಂದವನು ಅವನು ಶ್ರೀಹರಿಯ ತಂದೆಯ ಹೋಟೆಲಿಗೂ ಹೋಗಲಿಲ್ಲ, ಆದರೆ ಅವನು ಶ್ರೀಹರಿ ಇರುವ ಬಿಲ್ಡಿಂಗಲ್ಲಿದ್ದ ಮೀಟರ್ ರೂಮಿನ ಬದಿಯಲ್ಲಿ ಬಂದು ಬಿದ್ದಿದ್ದ, ಶ್ರೀಹರಿಯ ತಂದೆಯೂ ಕೋಪದಲ್ಲಿದ್ದ ಕಾರಣ ಅವನ ಹತ್ತಿರ ಮಾತನಾಡಲು ಹೋಗಲಿಲ್ಲ, ಅವನೂ ಮಾತನಾಡಲಿಲ್ಲ.
ಆ ದಿವಸ ಶ್ರೀಹರಿ ಶಾಲೆಯಿಂದ ಬರುವಾಗ ಸ್ವಾಮಿಯನ್ನು ತನ್ನ ಬಿಲ್ಡಿಂಗನಲ್ಲಿ ನೋಡಿ, ಅವನನ್ನು ಕಂಡು ಸಂತೋಷ ಪಟ್ಟ ಹಾಗು ಸ್ವಾಮಿಯನ್ನು ಕುರಿತು " ಅರೆ ಸ್ವಾಮಿ....ತುಮ್ ಆ ಗಯಾ " (ಅರೆ ...ಸ್ವಾಮಿ ನೀ ಬಂದಿಯಾ ) ಎಂದು ಕೇಳಿದ. ವಿಚಿತ್ರ ಏನೆಂದರೆ ಸ್ವಾಮಿ ಶ್ರೀಹರಿಯನ್ನು ನೋಡಿಯು ಪ್ರತಿಕ್ರಿಯಿಸಲಿಲ್ಲ ಹಾಗು ಹೂಂ ಅಂತ ಅವನನ್ನು ಹೆದರಿಸಿ ಓಡಿಸಿಬಿಟ್ಟ, ಶ್ರೀಹರಿ ಸ್ವಾಮಿಯ ವ್ಯವಹಾರದಿಂದ ಆಹಾತನಾಗಿ ಅಳುತಲ್ಲೇ ಮನೆಗೆ ಬಂದ, ಮನೆಗೆ ಬಂದು ಅವನು ಅಮ್ಮನ ಹತ್ತಿರ ಎಲ್ಲ ವಿಷಯ ಹೇಳಿ ಅಳುತ್ತಲೇ ಕೇಳಿದ " ಅಮ್ಮ ಸ್ವಾಮಿ ದ್ಯಾಗ್ ಇಂಚ ಮಲ್ಪುನು (ಅಮ್ಮ ಸ್ವಾಮಿ ಏಕೆ ಹೀಗೆ ಮಾಡುತ್ತಾನೆ ), ಅಮ್ಮ ಅದಕ್ಕೆ "ಆಯೇ ಇತ್ತೇ ಬತ್ತಿನತಾ , ಆಯಾಗ್ ಬೊಕ್ಕ ಯಾನ್ ಕೇನುವೆ" (ಅವನು ಈಗ ಬಂದನಲ್ಲ ಅವನಿಗೆ ನಂತರ ನಾನು ಕೇಳುತ್ತೇನೆ ) ಎಂದು ಸಮಾಧಾನ ಹೇಳಿದರು.
ಆದರೆ ಶ್ರೀಹರಿಯ ಅಮ್ಮಳಿಗೆ ಸ್ವಾಮಿಗೆ ಕೇಳುವ ಅವಕಾಶ ಸಿಗಲಿಲ್ಲ, ಮಾರನೆ ದಿವಸ ಸ್ವಾಮಿ ಇಹಲೋಕ ತ್ಯಜಿಸಿ ಮೃತ್ಯುಗೆ ಶರಣಾಗಿದ್ದ, ಬಿಲ್ಡಿಂಗನವರು ಬಂದು ಶ್ರೀಹರಿಯ ತಂದೆಗೆ ಈ ಸುದ್ದಿ ಕೊಟ್ಟಿದರು ಹಾಗು ಈಗ ಏನೂ ಮಾಡುವುದು ಎಂದು ಕೇಳಿದರು, ಶ್ರೀಹರಿಯ ತಂದೆ "ಅವನ ಅಂತ್ಯ ಸಂಸ್ಕಾರದ ಎಲ್ಲ ಖರ್ಚು ನಾನು ಕೊಡುತ್ತೇನೆ, ನೀವು ಅದರ ಸ್ವಲ್ಪ ನೋಡಿ ಕೊಳ್ಳಿ" ಎಂದು ಅವರಿಗೆ ಹೇಳಿದರು, ಅಲ್ಲೇ ಇದ್ದ ಶ್ರೀಹರಿಗೆ ಈ ಸುದ್ದಿ ಕೇಳಿ ಕಣ್ಣಿನಿಂದ ನೀರು ಹರಿಯಿತು ಹಾಗು ಅಮ್ಮನನ್ನು ಅಪ್ಪಿ ಬಿಕ್ಕಿ ಬಿಕ್ಕಿ ಅತ್ತ .
by ಹರೀಶ್ ಶೆಟ್ಟಿ, ಶಿರ್ವ

No comments:
Post a Comment