Saturday, November 12, 2011

ಪ್ರೀತಿ ಸೋತ ನಂತರ

ಪ್ರೀತಿ ಸೋತ ನಂತರ
ಉಳಿಯಲಿಲ್ಲ ಏನೂ ಹತ್ತಿರ
ಕೇವಲ ತುಂಡು ಹೃದಯ
ದುಃಖ ಏರಿದೆ ಎತ್ತರ

ಮತಿಗೆಟ್ಟ ಅವಸ್ಥೆ
ಕಂಡು ಕಾಣದಾಗಿದೆ ರಸ್ತೆ
ತಾಣದ ಇಲ್ಲ ಗೋಚರ
ಹಗಲಲ್ಲಿಯು ಜೀವನ ನಿಶಾಚರ 

ನಿದ್ದೆ ಕೋಪದಲ್ಲಿದೆ
ಹಸಿವೆ ಮುಸ್ಕರದಲ್ಲಿದೆ
ಮನೆ ಕತ್ತಲೆಯಲ್ಲಿದೆ
ಮನಸ್ಸು ಅಮಲಲ್ಲಿದೆ

ಸುಪ್ತ ಭಾವನೆಗಳು
ಒಣಗಿದ ಕಣ್ಣೀರುಗಳು
ಆತ್ಮ ಇಲ್ಲದ ಶರೀರ
ಜೀವ ಮರಣದ ತೀರ
by ಹರೀಶ್ ಶೆಟ್ಟಿ, ಶಿರ್ವ

4 comments:

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...