Friday, November 4, 2011

ಸತ್ತ ಕೋಳಿ

ಇವತ್ತು ಶ್ರೀಹರಿಯ ಜನ್ಮ ದಿವಸ. ಆಫೀಸ್ ಗೆ ಹೊರಟುವಾಗ ಅವನ ಅಮ್ಮ "ಸಂಜೆಗೆ ಬರುವಾಗ ಮಾರ್ಕೆಟ್ ಹೋಗಿ ಕೋಳಿ ತಾ, ಇವತ್ತು ನಿನ್ನ ಜನ್ಮ ದಿವಸ ಅಲ್ಲವೇ" ಎಂದು ಹೇಳಿದರು.

ಶ್ರೀಹರಿ "ಆಯಿತು ಅಮ್ಮ " ಎಂದು ಹೇಳಿ ಹೊರಟ.

ಶ್ರೀಹರಿ ಒಂದು ಸಣ್ಣ ಆಫೀಸ್ ಲಿ ಸಾಧಾರಣ ಕ್ಲಾರ್ಕ್ ಆಗಿದ, ಹೆಚ್ಚೇನೂ ಸಂಬಳ ಬರುತ್ತಿರಲಿಲ್ಲ, ಹೇಗೋ ಮನೆ ಖರ್ಚು ತೆಗೆದು ದಿನ ದೂಡುತಿದ್ದ.

ಸಂಜೆ ಆಫೀಸ್ ಮುಗಿದ ಮೇಲೆ ಶ್ರೀಹರಿ ಅಮ್ಮ ಹೇಳಿದ ಹಾಗೆ ಕೋಳಿ ತರಲು ಮಾರ್ಕೆಟ್ ಗೆ ಹೋದ. ಕೋಳಿಯ ಅಂಗಡಿಯಲಿ ಕೋಳಿಯ ಕ್ರಯ ನೋಡಿ ಶ್ರೀಹರಿಗೆ ದಿಗಿಲು ಬಡಿದಂತಾಯಿತು, ೧೨೦ ರೂಪಾಯಿ ಒಂದು ಕೆ. ಜಿ. ಶ್ರೀಹರಿ ಮೆಲ್ಲನೆ ತನ್ನ ಕಿಸೆ ತಪಾಸಿದ, ಕೇವಲ ೭೫ ರೂಪಾಯಿ ಇತ್ತು ಅವನ ಹತ್ತಿರ, ತಿಂಗಳಿನ ಕೊನೆ ದಿವಸ ಹಣ ಮುಗಿಯುತ್ತಾ ಬಂದಿತ್ತು, ಆದರೆ ಕೋಳಿ ತೆಗೊಂಡು ಹೋಗದಿದ್ದರೆ ಅಮ್ಮನ ತಾಯಿ ಮನಸ್ಸಿಗೆ ನೋವಾಗುದಿಲ್ಲವೇ ಎಂದು ಎನಿಸಿ ಕೋಳಿ ಅಂಗಡಿಯವನ ಹತ್ತಿರ "ಏನು ಸ್ವಾಮಿ , ಇವತ್ತು  ಇಷ್ಟು ರೇಟ್"?

"ಏನು ಮಾಡುವುದು ಸರ್, ಕೋಳಿಯ ಶೋರ್ಟೇಜ್ ನಡೆಯುತ್ತ  ಇದೆ,  ಸಪ್ಲೈ  ಕಮ್ಮಿ ಆಗಿದೆ" ಎಂದು ಹೇಳಿದ. 

ಇನ್ನು ಏನು ಮಾಡುವುದು ಎಂದು ವಿಚಾರ ಮಾಡುತ್ತಲೇ ಶ್ರೀಹರಿಯ ಧ್ಯಾನ ಅಲ್ಲೇ ಅಂಗಡಿಯ ಒಳಗೆ ಬಿದ್ದಿದ ಒಂದು ಕೋಳಿಯ ಮೇಲೆ ಹೋಯಿತು, ಅವನು ಅಂಗಡಿಯವನಿಗೆ "ಇದೇನು ಸ್ವಾಮಿ ಆ ಕೋಳಿ ಹೀಗೆಯೇ ಬಿದ್ದಿದೆ".

ಅದಕ್ಕೆ ಅವನು " ಅದು ಸತ್ತ ಕೋಳಿ ಸರ್ ಅದನ್ನು ಕಡಿಮೆ ಕ್ರಯದಲ್ಲಿ ಕೂಲಿ ಕೆಲಸ ಮಾಡುವವರು ತೆಗೊಂಡು ಹೋಗುತ್ತಾರೆ, ಏನು ಮಾಡುದು ಸರ್ , ಈಗ ವ್ಯಾಪಾರದಲ್ಲಿ  ಏನೂ ಲಾಭ ಇಲ್ಲ ಸರ್".

ಶ್ರೀಹರಿ "ಒಹ್ ...ಹಾಗೆಯೇ " ಎಂದು ವಿಚಾರ ಮಾಡುತಾ, ಸತ್ತ ಕೋಳಿಯನ್ನು ತಿನ್ನುತ್ತಾರೆಯೇ " ಎಂದು ಕೇಳಿದ.

ಅದಕ್ಕೆ ಅಂಗಡಿಯವನು "ಅದರಲ್ಲೇನಿದೆ ಸರ್, ಈ ಬಡ ಕೂಲಿ ಕೆಲಸ ಮಾಡುವವರ ಹತ್ತಿರ ಹಣ ಎಲ್ಲಿ, ಹೆಂಡ ಕುಡಿದ ನಂತರ ಎಲ್ಲವೂ ನಡೆಯುತ್ತದೆ "

ಅವನ ಮಾತು ಕೇಳಿ ಶ್ರೀಹರಿ ವಿಚಾರದಲ್ಲಿ ಬಿದ್ದ "ನಾನೇಕೆ ಈ ಕೋಳಿಯನ್ನು ತೆಗೆದು ಕೊಂಡು ಹೋಗ ಬಾರದು, ನಾನೂ ಬಡವನೇ ಅಲ್ಲವೇ ".

ಶ್ರೀಹರಿ ಸ್ವಲ್ಪ ನಾಚಿಗೆಯಿಂದಲೇ ಅಂಗಡಿಯವನಿಗೆ "ಸ್ವಾಮಿ ಈ ಕೋಳಿ ನನಗೆ ಕೊಡುತ್ತೀರಾ, ಎಷ್ಟು ಹಣ ಕೊಡ ಬೇಕು?

ಅಂಗಡಿಯವ "ಸರ್, ನಿಮಗೆಯೇ ? ಎಂದು ಆಶ್ಚರ್ಯದಿಂದ ಕೇಳಿದ .

ಶ್ರೀಹರಿ ಅದಕ್ಕೆ "ಅದೇನಂದರೆ ನಮ್ಮ ಮನೆಯಲ್ಲೂ ಕೂಲಿ ಕೆಲಸ ಮಾಡುವವರು ಬಂದಿದ್ದಾರೆ, ಅವರಿಗೆ ಕೊಡುತ್ತೇನೆ? ಎಂದು ಸುಳ್ಳು ಹೇಳಿದ.

ಅಂಗಡಿಯವ "ಅಗಲಿ ಸರ್, ೩೦ ರೂಪಾಯಿ ಕೊಡಿ , ಹೇಗೋ ನಷ್ಟ".

ಶ್ರೀಹರಿಗೆ ಖುಷಿ ಆಯಿತು "ಹಾಗಾದರೆ ಅದನ್ನು ಕಟ್ ಮಾಡಿ ಕೊಡಿ ಸ್ವಾಮಿ".

ಅಂಗಡಿಯವ ಆ ಸತ್ತ ಕೋಳಿ ಕಟ್ ಮಾಡಿ ಕೊಟ್ಟ.

ಶ್ರೀಹರಿ ವಿಚಾರ ಮಾಡಿದ "ಕೆಲಸವೂ ಆಯಿತು, ಲಾಭವೂ ಆಯಿತು".

ಶ್ರೀಹರಿ ಬೇಗನೆ ಮನೆ ತಲುಪಲೆಂದು ಬೇಗ ಬೇಗನೆ ಹೆಜ್ಜೆ ತೆಗೆದ, ನಡೆಯುತ್ತಲೇ ಹೋಗುತ್ತಿದ್ದಂತೆ ಅವನ ಮನಸ್ಸಲ್ಲಿ ತಳಮಳ ಉಂಟಾಯಿತು "ನಾನು ಇದು ಮಾಡುವುದು ಸರಿಯೇ , ಪಾಪ ಸತ್ತ ಕೋಳಿಯನ್ನು ತಿನ್ನುವುದು ಪಾಪವಲ್ಲವೇ, ಅಮ್ಮನಿಗೆ ಹೇಳಿದರೆ ಅವಳು ಏನೂ ಹೇಳಬಹುದು. ಅವಳಿಗೆ ಎಷ್ಟು ದುಃಖವಾಗ ಬಹುದು, ಅವಳಿಗೆ ಹೇಳದೆ ಅವಳು ಇದನ್ನು ತಿಂದರೆ ನನಗೂ ಪಾಪ ಅಲ್ಲವೇ, ಬೇಡ ನಾನು ಇದು ಮಾಡುವುದು ಸರಿಯಲ್ಲ" ಎಂದು ಆ ಕೋಳಿಯ ಚೀಲವನ್ನು ರಸ್ತೆಯಲ್ಲಿದ್ದ ಒಂದು ಮರದ ಅಡಿಯಲ್ಲಿ ಸ್ವಲ್ಪ ಮಣ್ಣು ಅಗೆದು ಅದನ್ನು ಇಟ್ಟು ಮಣ್ಣು ಮುಚ್ಚಿದ.

ಅವನು ಹೋದ ನಂತರ ಎಲ್ಲಿಂದಲ್ಲೊ ಹಲವು ನಾಯಿ ಬಂದು ಮಣ್ಣು ಅಗೆದು ಚೀಲ ತೆಗೆದು ಅದರಲ್ಲಿದ್ದ ತುಂಡುಗಳನ್ನು ತಿಂದು ತನ್ನ ಹಸಿವೆ ನೀಗಿಸಿದವು.

by ಹರೀಶ್ ಶೆಟ್ಟಿ,ಶಿರ್ವ

2 comments:

  1. satta koli tinnuvudu paapa. Adre badukidda koliyannu sayisi adannu tinnuvudu paapavalla. Allave?

    ReplyDelete
  2. ಪ್ರಶಶ್ತಿ ಅದೂ ಪಾಪವೇ.......ಆದರೆ ಇಲ್ಲಿ ನಾನು ಒಂದು ಮಾಂಸಹಾರಿ ಮನುಜನ ವ್ಯಥೆ ವಿವರಿಸಿದ್ದೇನೆ. ಸ್ವತಹ ಸತ್ತ ಕೋಳಿಯನ್ನು ತಿನ್ನ ಬಾರದೆಂಬ ರೂಡಿ ನಮ್ಮ ಕಡೆಯಲ್ಲಿ ....

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...