Wednesday, November 23, 2011

ನನಗ್ಯಾರು?

ನಿಸ್ಸಹಾಯ ನಾನು
ನನಗ್ಯಾರು?
ಅಪಘಾತದಲ್ಲಿ  ಸಿಲುಕಿ ಅಂಗ ವಿಕಲನಾದೆ
ದಿಕ್ಕಿಲ್ಲದೆ ಬದುಕಿ ಅನ್ಯರ ಅಶ್ರಿತನಾದೆ

ನಿಸ್ಸಹಾಯ ನಾನು
ನನಗ್ಯಾರು?
ತಂದೆಯ ರಕ್ಷಣೆ ಚಾವಣಿ ಇಲ್ಲ
ತಾಯಿಯ ಮಡಿಲ ಆಸರೆ ಇಲ್ಲ

ನಿಸ್ಸಹಾಯ ನಾನು
ನನಗ್ಯಾರು?
ಬಾಲ್ಯ ಮಿತ್ರರು ದೂರವಾದರು
ಹತ್ತಿರ ಬಾರದ ಸಂಬಂಧಿಕರು

ನಿಸ್ಸಹಾಯ ನಾನು
ನನಗ್ಯಾರು?
ಅರ್ಧಾಂಗಿಯ ವ್ಯಂಗ ಕಟಾಕ್ಷ
ಮಕ್ಕಳ ಉದಾಸೀನತೆ ನಿರ್ಲಕ್ಷ್ಯ

ನಿಸ್ಸಹಾಯ ನಾನು
ನನಗ್ಯಾರು?
ದುರ್ಬಲ ಜೀವನದಿಂದ ಉಂಟಾಗಿದೆ ಜಿಗುಪ್ಸೆ
ಮೃತ್ಯು ಬರುದಿಲ್ಲವೆಂದು ಹೇಳಿ ಕೊಡುತ್ತಿದೆ ಹಿಂಸೆ

ನನಗೆ ನಾನೇ ಸಹಾಯನಾಗುವೆ
ನಾನೇ ನನ್ನ ಜೀವನವನ್ನು ಸಾರ್ಥಕ ಮಾಡುವೆ
ಕುಗ್ಗಿಸ ಬೇಡಿ ನನ್ನ ಆತ್ಮ ವಿಶ್ವಾಸ
ನನಗೆ ಬೇಕು ಕೇವಲ ನಿಮ್ಮ ಪ್ರೀತಿಯ ಸಹವಾಸ
by ಹರೀಶ್ ಶೆಟ್ಟಿ, ಶಿರ್ವ

4 comments:

  1. ಗೆಳೆಯ ಅದ್ಭುತ ಅದ್ಭುತ ಅದ್ಭುತ
    ಓದಿ ಕಣ್ಣೀರು ಬಂತು ..
    ಮನ ಮುಟ್ಟುವಾ ಸಾಲುಗಳು ನಿಜಕ್ಕೂ ಒಂದು ಕ್ಷಣ ಮೌನವಾಗಿ ಬಿಟ್ಟೆ !!

    ReplyDelete
  2. ತುಂಬಾ ಧನ್ಯವಾದಗಳು ಪ್ರಕಾಶ್ ...

    ReplyDelete
  3. math illa nannali... namma yalara preethi nim jote ne iruvudhu sadha naguthire .......

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...