Saturday, November 12, 2011

ಮೊದಲ ಟೆಲಿಫೋನ್(ದೂರವಾಣಿ)

ಶ್ರೀಹರಿಯ ಊರಿನ ಸಾಹುಕಾರರ ಮನೆಯಲ್ಲಿ ಊರಿನ ಮೊದಲ ಟೆಲಿಫೋನ್(ದೂರವಾಣಿ) ಬಂದಿತ್ತು.

ಆ ದಿವಸ ಶ್ರೀಹರಿಯ ಶಾಲೆಯಲ್ಲಿ ವಿಜ್ಞಾನ ಮಾಷ್ಟ್ರು ಟೆಲಿಫೋನ್(ದೂರವಾಣಿ) ಬಗ್ಗೆ ಮಕ್ಕಳಿಗೆ ತಿಳಿಸಿ "ನಾಳೆ ನಾವು ಸಾಹುಕಾರರ ಮನೆಗೆ ನಿಮೆಗೆಲ್ಲರಿಗೆ ಫೋನ್ ನೋಡಲು ಕೊಂಡು ಹೋಗುತಾ ಇದ್ದೇವೆ, ಎಲ್ಲ ಮಕ್ಕಳು ತಪ್ಪದೆ ನಾಳೆ ಬೆಳ್ಳಿಗೆ ೧೦ ಗಂಟೆಗೆ ಹಾಜರಾಗಿ" ಎಂದು ಹೇಳಿದರು.

ಎಲ್ಲ ಮಕ್ಕಳಿಗೆ ಸಂತೋಷವೇ ಸಂತೋಷ, ಎಲ್ಲರು ಫೋನ್ ನೋಡಲು ಉತ್ಸುಕರಾಗಿದ್ದರು,  ಶ್ರೀಹರಿಯು ತುಂಬಾ ಉತ್ಸುಕನಾಗಿದ್ದ.

ಮಾರನೆ ದಿವಸ ಎಲ್ಲ ಮಕ್ಕಳು ೧೦ ಗಂಟೆಗೆ ಶಾಲೆಯ ಗ್ರೌಂಡ್ ಲ್ಲಿ ಸೇರಿದರು. ವಿಜ್ಞಾನ ಮಾಷ್ಟ್ರು ಎಲ್ಲ ಮಕ್ಕಳನ್ನು ಸಾಲು ಸಾಲಾಗಿ ನಿಲ್ಲಿಸಿ ನಂತರ "ನೀವೆಲ್ಲರೂ ನನ್ನ  ಹಿಂದೆ ಹಿಂದೆ ಬನ್ನಿ" ಎಂದು ಹೇಳಿದರು.

ಮಕ್ಕಳೆಲ್ಲರು ನಡೆಯುತ್ತಲೇ ಪಕ್ಕದ ಮೂಲೆಯಲ್ಲಿದ ಸಾಹುಕಾರರ ಮನೆಗೆ ಬಂದರು. ಸಾಹುಕಾರರು ಅವರ ಅಂಗಳದಲ್ಲಿ ಆರಾಮವಾಗಿ ಕೂತು ಕೊಂಡು ಚಹಾದ ಒಟ್ಟಿಗೆ ವಾರ್ತಾ ಪತ್ರಿಕೆ ಓದುತ್ತಿದ್ದರು.

ಅವರನ್ನು  ಕಂಡು " ಒಹ್ ಮಾಷ್ಟ್ರೆ ...ಬನ್ನಿ ಬನ್ನಿ , ಈ ಫೋನ್ ಬಂದ ದಿವಸದಿಂದ ಒಂದು ಗಳಿಗೆ ಪುರುಸೊತ್ತು ಇಲ್ಲರಿ, ಯಾರದರೊಂದು ಬರುತ್ತಲೇ ಇದ್ದಾರೆ ಇದನ್ನು ನೋಡಲು, ನೀವೂ ಬನ್ನಿ , ಆದರೆ ಒಂದು ವಿಷಯ ಅದನ್ನು ಯಾರೂ ಮುಟ್ಟ ಬಾರದು, ಈ ಮಕ್ಕಳಿಗೆ ಮೊದಲೇ ಹೇಳಿ" ಎಂದು ಸಾಹುಕಾರರು ಮೊದಲೇ ಎಚ್ಚರಿಸಿದರು.

ಅದಕ್ಕೆ ಮಾಷ್ಟ್ರು "ಆಯಿತು ಸಾಹುಕಾರರೇ, ಆದರೆ ಒಂದು ನಿವೇಧನೆ ಈ ಮಕ್ಕಳ ನಾಯಕಲಾದ ಯಶೋದ ಅವಳಿಗೆ ಮಾತ್ರ ಸ್ವಲ್ಪ ರಿಸಿವರ್ ಎತ್ತಿ "ಹಲೋ " ಎಂದು ಹೇಳಲು ಬಿಡ ಬೇಕೆಂದು ವಿನಂತಿ " ಎಂದು ಕೇಳಿದರು.

ಅದಕ್ಕೆ ಸಾಹುಕಾರರು "ಆಗಲಿ ಆದರೆ ಬೇರೆ ಯಾರೂ ಮುಟ್ಟುವಂತಿಲ್ಲ, ಜಾಗ್ರತೆ ವಹಿಸಿ" ಎಂದು ಹೇಳಿದರು .

ಮಾಷ್ಟ್ರು ನಮಗೆ ನೋಡಿ "ನೀವು ಯಾರೂ ಫೋನ್ ಮುಟ್ಟ ಬಾರದು, ದೂರದಿಂದಲೇ ನೋಡಿ ಬರಬೇಕು , ಯಶೋದ ನಿನಗೆ ಕೇವಲ ಫೋನಿನ ರಿಸಿವರ್ ಎತ್ತಿ  ನೀ "ಹಲೋ" ಎಂದು ಹೇಳ ಬಹುದು, ನೀ ಮುಂದೆ ಬಾ" ಎಂದು ಹೇಳಿದರು.

ಯಶೋದ ಸಾಲಿನ ಮುಂದೆಯೇ ಇದ್ದಳು,  ಅವರೆಲ್ಲರೂ ಸಾಹುಕಾರರ ಮನೆಯ ಒಳಗೆ ಹೋದರು. ಮನೆ ತುಂಬಾ ಸುಂದರವಾಗಿತ್ತು, ಎಲ್ಲ ವಸ್ತುಗಳನ್ನು ಶಿಸ್ತಿನಿಂದ  ಇಟ್ಟಿದರು, ಫೋನ್ ಒಂದು ಟೇಬಲ್ ಮೇಲೆ ಇಟ್ಟಿದರು, ಕಪ್ಪು ಬಣ್ಣದ ಫೋನಿನ ಮೇಲೆ ಬಹಳ ಸುಂದರವಾದ ಬಟ್ಟೆಯ ಕವರ್ ಹಾಕಿದರು.

ಮಾಷ್ಟ್ರು "ಯಶೋದ ಬಾ ಮುಂದೆ , ಯಶೋದ ಮುಂದೆ ಬಂದು ಟೆಲಿಫೋನ್ ಹತ್ತಿರ ಹೋಗಿ  ಬಹಳ ಖುಷಿಯಿಂದ ಅದರ ರಿಸಿವರ್ ಎತ್ತಿ "ಹಲೋ" ಎಂದು ಹೇಳಿದಳು, ಅವಳಿಗೆ ಸಂತೋಷವೇ ಸಂತೋಷ, ಎಲ್ಲ ಮಕ್ಕಳು ಅವಳನ್ನು ಆಶ್ಚರ್ಯ ಹಾಗು ಮತ್ಸರದಿಂದ ನೋಡುತ್ತಿದ್ದರು, ಅವರಿಗೆ ಫೋನ್ ಮುಟ್ಟಲಿಕ್ಕೆ ಸಿಗುದಿಲ್ಲ ಎಂದೇನೋ, ಇದರ ನಂತರ ಇತರ ಮಕ್ಕಳೆಲ್ಲರೂ ಸಾಲು ಸಾಲಾಗಿ ಹೋಗಿ ಫೋನ್ ನೋಡಿ ನೋಡಿ ಬಂದರು, ಶ್ರೀಹರಿಯು ನೋಡಿ ಬಂದ.

ಮೊದಲ ಸಲ ಫೋನ್ ನೋಡಿ ಬಂದ ನಂತರ ಎಲ್ಲ ಮಕ್ಕಳಿಗೆ ಒಂದು ಹೊಸ ಅನುಭವ ಒಟ್ಟಿಗೆ ಸಂತೋಷ.

by  ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...