ಹಾಸಿಗೆಯ ಮೇಲೆ ಒಂದು ಶವ
ಪ್ರಾಣ ಇಲ್ಲದ ಶರೀರ
ಭಾವರಹಿತ ಶಾಂತಚಿತ್ತ
ಆದರೆ ಅವನ ಆತ್ಮ ಇನ್ನೂ ಸಕ್ರಿಯ
ನೋಡುತ್ತಿದೆ ಎಲ್ಲ
ದೂರ ಇದ್ದವರು ಇಂದು ಹತ್ತಿರ ಇದ್ದರು
ಅವನನ್ನು ವರ್ಷಗಟ್ಟಲೆ ನೋಡದವರೂ ಇಂದು ಬಂದಿದ್ದರು
ಯಾಕೆ ಇವರೆಲ್ಲರೂ ಬಂದಿದ್ದಾರೆ ?
ಜೀವ ಇರುವಾಗ ನಾನವರಿಗೆ ಬೇಡವಾದೆ
ಇಂದು ನಾನು ಸತ್ತ ನಂತರ ಕಾಟ ಮುಗಿಯಿತು ಎಂದೇ ಬಂದಿದ್ದಾರೆ ?
ಅದರ ಮೇಲೆ ಎಲ್ಲರೂ ಅಳುತ್ತಿದ್ದಾರೆ
ಆಶ್ಚರ್ಯ, ಸುಳ್ಳ ಕಣ್ಣೀರ ಹರಿಸಿ ಏನನ್ನೂ ಬಯಸುತ್ತಿದ್ದಾರೆ
ನನ್ನವಳೂ ಅಳುತ್ತಿದ್ದಾಳೆ
ಅವಳಿಗೆ ಈಗ ಅವಳ ಹಾಗು ಮಕ್ಕಳ ಮುಂದಿನ ಜೀವನದ ಚಿಂತೆ
ಹೇಗೋ ನಾನು ಸುಖದಿಂದ ಅವರನ್ನು ಇಡುತ್ತಿದೆ ಅಲ್ಲ
ಅವಳನ್ನು ,ಮಕ್ಕಳನ್ನು ನೋಡಿ ಸತ್ತ ನನಗೂ ಬೇಸರವಾಗುತಿದೆ
ಅವಳಿಗೆ ಈಗ ದಾರಿ ಕಾಣದಾಗಿದೆ ಅಲ್ಲ
ಅವಳಿಗೆ ಈಗ ನನ್ನ ಮೌಲ್ಯ ತಿಳಿಯಿತಲ್ಲ
ನನ್ನನ್ನು ಪ್ರಯೋಜನ ಇಲ್ಲದವ ಎಂದು ಹೀಯಾಳಿಸುವಾಗ ಗೊತ್ತಾಗಲಿಲ್ಲವಲ್ಲ
ಅಮ್ಮ ಅಳುತ್ತಿದ್ದಾಳೆ
ಅವಳ ಅಶ್ರು ಸತ್ಯವಾಗಿದೆ
ಅವಳ ಹೃದಯದ ತುಂಡು ಇಂದು ಮೌನವಾಗಿದ್ದಾನೆ ಅಲ್ಲ
ಅವಳ ದುಃಖ ಕಂಡು ಸತ್ತ ನಾನೂ ಅಳುತ್ತಿದ್ದೇನೆ
ಅಮ್ಮ ನೀನು ನನ್ನಿಂದ ಏನು ಬಯಸಲಿಲ್ಲ
ನಿನ್ನ ಮಮತೆಯ ನಾನು ಋಣಿ
ನಿನ್ನ ಋಣ ತೀರಿಸಲು ಆಗಲಿಲ್ಲವಲ್ಲ
by ಹರೀಶ್ ಶೆಟ್ಟಿ, ಶಿರ್ವ

No comments:
Post a Comment