ತಂಬಿ
---------
ಶ್ರೀಹರಿಗೆ ಸಿನಿಮಾ ನೋಡುವ ತುಂಬಾ ಚಟ, ವಾರದಲ್ಲಿ ೨/೩ ಸಿನಿಮಾ ನೋಡದಿದ್ದರೆ ಅವನಿಗೆ ಏನೋ ಕಳೆದಂತೆ ಆಗುತ್ತಿತ್ತು.
ಶ್ರೀಹರಿಯ ತಂದೆ ಹೋಟೆಲ್ ನಡೆಸುತ್ತಿದ್ದರು, ಶ್ರೀಹರಿ ತಂದೆಯ ಒತ್ತಾಯಕ್ಕೆ ದಿವಸಕ್ಕೊಮ್ಮೆ ಅಲ್ಲಿ ಹೋಗಿ ಬಲು ಹಾಜರಿ ನೀಡಿ ಬರುತ್ತಿದ್ದ, ಶ್ರೀಹರಿಯ ತಂದೆಯ ಹೋಟೆಲಲ್ಲಿ ಒಬ್ಬ ಹೊಸ ತಮಿಳ್ ಹುಡುಗ ಚಹಾ ಮಾಡುವ ಕೆಲಸ್ಸಕ್ಕೆ ಸೇರಿದ, ಎಲ್ಲರೂ ಅವನನ್ನು ತಂಬಿ ಎಂದು ಕರೆಯುತ್ತಿದ್ದರು.
ಆ ಹುಡುಗನಿಗೂ ತಮಿಳ್ ಸಿನಿಮಾ ಅಂದರೆ ಪಂಚ ಪ್ರಾಣ, ಹಿಂದಿ ಸಿನಿಮಾವೂ ನೋಡುತ್ತಿದ್ದ, ಶ್ರೀಹರಿ ಬಂದ ಕೂಡಲೇ ಅವನಿಗೆ ಶ್ರೀಹರಿಯ ಹತ್ತಿರ ಸಿನಿಮಾದ ಬಗ್ಗೆ ಮಾತನಾಡುವುದೇ ಕೆಲಸ, ಆ ಹುಡುಗ ತಮಿಳ್ ನಟ ಎಂ.ಜಿ.ರಾಮಚಂದ್ರನ್ ಅವರ ಬಹಳ ದೊಡ್ಡ ಅಭಿಮಾನಿ, ಬಹಳ ದೊಡ್ಡ ಭಕ್ತನೆಂದು ಹೇಳ ಬಹುದು, ವಿಚಿತ್ರ ಏನೆಂದರೆ ಅವನು ಅವನ ಪೆಟ್ಟಿಗೆಯಲ್ಲಿ ಎಂ.ಜಿ.ರಾಮಚಂದ್ರನ್ ಅವರ ಫೋಟೋ ಇಟ್ಟು ಅವರಿಗೆ ದಿನಾಲೂ ನಾಲ್ಕಾಣೆಯ ಹೂವಿನ ಮಾಲೆ ಹಾಕಿ ಪೂಜಿಸುತ್ತಿದ್ದ.
ಅವಾಗ ಮಾಟುಂಗ ಮುಂಬೈಯಲ್ಲಿ ಸಿಟಿ ಲೈಟ್ ಎಂಬ ಹಳೆ ಸಿನಿಮಾ ಮಂದಿರ ಇತ್ತು, ಅಲ್ಲಿ ಬೆಳ್ಲಿಗೆಯ ಶೋ ದಲ್ಲಿ ಎಂ.ಜಿ.ರಾಮಚಂದ್ರನ್ ಅವರ ಸಿನಿಮಾ ಬಂದರೆ ವಾರದ ೭ ದಿವಸ ಅವನಿಗೆ ಬೆಳ್ಳಿಗೆ ಲೇಟ್ ಡ್ಯೂಟಿ ಕೊಡಬೇಕೆಂದು ತಂಬಿ ಕೆಲಸ ಸೇರುವ ಮುಂಚೆಯೇ ಶ್ರೀಹರಿಯ ತಂದೆ ಹತ್ತಿರ ಷರತ್ತು ಇಟ್ಟಿದ, ಶ್ರೀಹರಿಯ ತಂದೆ ಕೆಲಸಕ್ಕೆ ಜನ ಸಿಗದ ಕಾರಣ ಆ ಷರತ್ತಕ್ಕೆ ಒಪ್ಪಿದರು ಹಾಗು ಅವನ ಎಂ.ಜಿ.ರಾಮಚಂದ್ರನ್ ಮೇಲೆ ಇರುವ ಭಕ್ತಿಯನ್ನು ಅರಿತು ಎಂ.ಜಿ.ರಾಮಚಂದ್ರನ್ ಸಿನಿಮಾ ಬಂದರೆ ಹೇಗಾದರೂ ಹೊಂದಿಸಿ ನಡೆಯುತ್ತಿದ್ದರು.
ಹೀಗೆಯೇ ಒಂದು ದಿವಸ ಶಾಲೆಯಿಂದ ಬಂದ ನಂತರ ಶ್ರೀಹರಿ ಹೋಟೆಲಿಗೆ ಹೋದ, ಅಲ್ಲಿ ಡ್ಯೂಟಿ'ಯಲ್ಲಿ ತಂಬಿ ಇರಲಿಲ್ಲ, ಅವನು ಅವನ ತಂದೆ ಹತ್ತಿರ ತಂಬಿಯ ಬಗ್ಗೆ ಕೇಳಿದ, ತಂದೆ "ಆಯೇ ಡ್ಯೂಟಿ'ಡ್ ಇಜ್ಜೆ, ಉಳಯಿ ಬುಲ್ಪೊಂದು ಉಲ್ಲೇ "(ಅವನು ಡ್ಯೂಟಿಯಲ್ಲಿಲ್ಲ, ಒಳಗೆ ಅಳುತ್ತಿದ್ದಾನೆ ).
ಶ್ರೀಹರಿ ಆಶ್ಚರ್ಯದಿಂದ "ದ್ಯಾಗ್'? (ಯಾಕೆ?). ಅದಕ್ಕೆ ಅವನ ತಂದೆ "ಆಯೇ ಎಂ.ಜಿ.ರಾಮಚಂದ್ರನ್ ತೀರ್ ಪೋಯೇತಾ...ಆಯ್ಕ " (ಅವ ಎಂ.ಜಿ.ರಾಮಚಂದ್ರನ್ ಸತ್ತನಲ್ಲ, ಅದಕ್ಕೆ ).
ಅವರ ಮಾತು ಕೇಳಿ ಶ್ರೀಹರಿ ಒಳಗೆ ಸ್ಟಾಫ್ ರೂಂಗೆ ಓಡಿದ, ಅಲ್ಲಿ ತಂಬಿ ಎಂ.ಜಿ.ರಾಮಚಂದ್ರನ್ ಅವರ ಫೋಟೋ ಎದುರಲ್ಲಿ ಕೂತುಕೊಂಡು ದುಃಖಿ ದುಃಖಿಸಿ ಅಳುತ್ತಿದ್ದ, ಶ್ರೀಹರಿಯನ್ನು ನೋಡಿ ಇನ್ನು ಜೋರು ಜೋರಲ್ಲಿ ಅಳಲಾರಂಭಿಸಿದ, ಶ್ರೀಹರಿಗೆ ಅವನಿಗೆ ಹೇಗೆ ಸಮಾಧಾನ ಹೇಳಲಿ ಎಂದು ತೋಚಲಿಲ್ಲ, ಆದರೂ ಅವನು ಸ್ವಲ್ಪ ಸಮಯ ಅವನ ಬದಿಯಲ್ಲಿ ಕುಳಿತು ಹಿಂತಿರುಗಿದ.
ಇದರ ನಂತರ ೧೫ ದಿವಸ ತಂಬಿ ಕೆಲಸ ಮಾಡದೆ ಹೀಗೆಯೇ ದುಃಖದಲ್ಲಿ ಬಿದ್ದಿದ್ದ , ಶ್ರೀಹರಿಯ ತಂದೆ ಕಡೆಗೆ ಸೋತು ಅವನನ್ನು ಅವನ ಊರಿಗೆ ಕಳುಹಿಸಿದರು.
by ಹರೀಶ್ ಶೆಟ್ಟಿ, ಶಿರ್ವ

hmm...Mundenaayitu?
ReplyDeleteಕಥೆಯನ್ನು ಪೂರ್ಣಗೊಳಿಸಿದ್ದೇನೆ :) ತಾವು ನೀಡುವ ಪ್ರೋತ್ಸಾಹ ಕ್ಕೆ ತುಂಬಾ ತುಂಬಾ ಧನ್ಯವಾದಗಳು .....
ReplyDelete