Saturday, November 5, 2011

ಆಮೆ ಮರಿ

ಶ್ರೀಹರಿ ರಜೆಯಲ್ಲಿ ಊರಿಗೆ ಹೋಗಿದ್ದ,  ಆಗ ಅವನಿಗೆ ೧೧ ವರ್ಷದ ವಯಸ್ಸು, ಅವನಿಗೆ ಊರಿನ ವಾತಾವರಣ ತುಂಬಾ ಹಿಡಿಸಿತು. ಮಾವಿನ ಮರದ ಕೆಳಗೆ ಹಣ್ಣನ್ನು ಹೆಕ್ಕಿ ತರುವುದು, ಊರೆಲ್ಲ ಅಲೆಯುವುದು ಅವನಿಗೆ ಹಾಗು ಇತರ  ಮಕ್ಕಳಿಗೆ ಇಡಿ ದಿವಸ ಇದೇ  ಕೆಲಸ.

ಹೀಗೆಯೇ ಒಂದು ದಿವಸ ಮನೆ ತೋಟದಲಿ ಅಲೆಯುವಾಗ ಅವರಿಗೆ ಅಲ್ಲಿ ಒಂದು ಆಮೆ ಮರಿ ಸಿಕ್ಕಿತು. ಮಕ್ಕಳಿಗೆ ಖುಷಿಯೇ ಖುಷಿ, ಶ್ರೀಹರಿ ಮತ್ತು ಅವನ ಚಿಕ್ಕಮನ ಮಗ ಆನಂದ ಇಬ್ಬರು ಅದನ್ನು ಮನೆಗೆ ತಂದರು.

ಆಗ ಅಲ್ಲಿಯೇ ಮನೆಯಲ್ಲಿ ಬಂದ ಊರಿನ ಸೊಂತು ಪರ್ಬುಲು ನಮ್ಮ ಕೈಯಲ್ಲಿ ಅಮೇ ಮರಿಯನ್ನು ನೋಡಿ "ವಾಹ....ವೋಲ್ತು ಕಂತಿನಿಯ ನಿಗುಲ್ ಉಂದೆನ್ನ್  "(ಎಲ್ಲಿಂದ ತಂದಿರಿ ನೀವು ಇದನ್ನು).

ಶ್ರೀಹರಿ  "ಅವ್ವು ತೊಟೋಡು  ತಿಕ್ಕಿನಿ"(ಅದು ತೋಟದಲಿ ಸಿಕ್ಕಿತು) ಎಂದು ಹೇಳಿದ.

ಅದಕ್ಕೆ ಅವರು "ಯೇ ಉಂದೆನ್ನ್ ಎನ್ಕ್ ಕೊರ್ಲೆಯಾ , ಲಾಯಕ್ ಆಯ್ತಾ ಸಾರ್ ಮಲ್ಪುವೆ, ಉಂದು ಭಾರಿ ರುಚಿ ಆಪುಂಡು  " (ಯೇ ,ಇದನ್ನು ನನಗೆ ಕೊಡಿ ನಾನು ಇದರ ಸಾರ್ ಮಾಡುತ್ತೇನೆ, ಇದು ತುಂಬಾ ರುಚಿ ಆಗುತ್ತದೆ ).

ಅದಕ್ಕೆ ಅವರು  "ಇಜ್ಜಿ ಇಜ್ಜಿ ಯೆಂಕುಲ್ ಕೊರ್ಪಿಜಾ" (ಇಲ್ಲ ಇಲ್ಲ ನಾವು ಕೊಡುವುದಿಲ್ಲ) ಎಂದು ಹೇಳಿ ಓಡಿ ಹೋದರು.

ಈಗ ಅವರಿಬ್ಬರಿಗೆ  ಹೆದರಿಕೆ, ಸೊಂತು ಪರ್ಬುಲು ಇದನ್ನು ಕದ್ದು ತೆಗೊಂಡು ಹೋಗುತ್ತಾರೆ ಹಾಗು ಅದನ್ನು ತಿಂದು ಬಿಡುತ್ತಾರೆ ಎಂದು. ಏನೂ ಮಾಡುವುದು ಈಗ, ಎಲ್ಲಿ ಇದನ್ನು ಅಡಗಿಸಿ ಇಡುವುದು.

ಆಗ ಅವರಿಗೆ ಅಲ್ಲೇ ಇದ್ದ ದೊಡ್ಡ ಮಡಕೆ ಕಂಡಿತು, ಅದು ಅವರ ಸ್ನಾನ ಗೃಹದಲ್ಲಿ ಇತ್ತು , ಅದರಿಂದ ನೀರು ತೆಗೆದು ಎಲ್ಲರೂ ಸ್ನಾನ ಮಾಡುತ್ತಿದ್ದರು. ಅದರಲ್ಲಿ ನೀರು ತುಂಬಾ ಇತ್ತು. ಅಮೆ ಜಲಚರ ಪ್ರಾಣಿ ಎಂದು ಅವರಿಗೆ ಗೊತ್ತಿತ್ತು, ಅದರಿಂದ ಇದು ಒಳ್ಳೆ ಜಾಗ ಇದನ್ನು ಅಡಗಿಸುವದಕ್ಕೆ ಎಂದು ಅವರು ಆಮೆಯನ್ನು ಆ ಮಡಕೆಯ ಒಳಗೆ ಬಿಟ್ಟರು, ಆಮೆ ಮೆಲ್ಲ ಮೆಲ್ಲ ಈಜಲು ಆರಂಭಿಸಿತು. ಈಗ ಅವರಿಗೆ ಸಮಾಧಾನ ಇನ್ನು ಏನು ತೊಂದರೆ ಇಲ್ಲ, ರಾತ್ರಿ ಕಳೆದ ನಂತರ ಇದನ್ನು ಇಡಲಿಕ್ಕೆ  ಬೆಳ್ಳಿಗೆ  ಏನಾದರು ಬೇರೆ ಉಪಾಯ ಮಾಡಬಹುದು ಎಂದು ವಿಚಾರ ಮಾಡಿ ಅವರು ಅಲ್ಲಿಂದ ಮನೆಗೆ ಬಂದರು.

ರಾತ್ರಿಗೆ ಶ್ರೀಹರಿಯ ಚಿಕ್ಕಮ ಸ್ನಾನಕ್ಕೆ ಎಂದು ಸ್ನಾನ ಗೃಹಕ್ಕೆ ಬಂದರು, ಅದು ಚಳಿಯ ಸಮಯ, ಅದರಿಂದ ಅವರು ಮಡಕೆಯಲ್ಲಿ ನೀರು ಮುಟ್ಟಿ ನೋಡಿದರು ತುಂಬಾ ತಂಪಾಗಿತ್ತು, ಅವರು  ಆ ನೀರು ಕುದಿಸಲು ಮಡಕೆಯ ಕೆಳಗೆ ಕಟ್ಟಿಗೆ ಇಟ್ಟು ಅದಕ್ಕೆ ಬೆಂಕಿ ಹಚ್ಚಿದ್ದರು, ಇದು ಮಕ್ಕಳಿಗೆ ತಿಳಿಯದ ವಿಷಯ, ಅವರು ನೀರು ಬಿಸಿ ಮಾಡಿ ಚೆನ್ನಾಗಿ ಸ್ನಾನ ಮಾಡಿ ಬಂದರು.

ಮಾರನೆ ದಿವಸ ಶ್ರೀಹರಿ ಮತ್ತು ಆನಂದ ಮುಂಜಾನೆ ಎದ್ದ ಕೂಡಲೇ ಸ್ನಾನ ಗೃಹಕ್ಕೆ ಬಂದು ನೋಡಿದರೆ, ಪಾಪ ಮೂಕ ಜೀವಿಯ ಜೀವನ ಮುಗಿದಿತ್ತು, ಅವರಿಗೆ ಆದ ದುಃಖಕ್ಕೆ ಮಿತಿಯೇ  ಇರಲಿಲ್ಲ, ಅವರು ಅಳುತ್ತಲೇ ಮನೆಗೆ  ಬಂದು ಈ ವಿಷಯ ಎಲ್ಲರ ಮುಂದೆ ಹೇಳಿದರು, ಆಗ ಚಿಕ್ಕಮ್ಮ ತಾನು ಗೊತ್ತಿಲ್ಲದೇ ಮಾಡಿದ ಆಮೆ ಹತ್ಯೆಗೆ ನೊಂದು ಕೊಂಡರು ಹಾಗು "ಅವ್ವೆ ನೀರ್ ವಾಸನೆ ಬರೊಂದು ಇತ್ತಂಡ್"(ಅದಕ್ಕೆ ನೀರು ವಾಸನೆ ಬರುತ್ತಿತ್ತು). ಆಗ ಎಲ್ಲರೂ ನಕ್ಕಿದೆ ನಕ್ಕಿದು, ಆದರೆ ಶ್ರೀಹರಿ ಹಾಗು ಆನಂದನ ಮುಖ ದುಃಖದಿಂದ ತುಂಬಿತ್ತು.

by ಹರೀಶ್ ಶೆಟ್ಟಿ, ಶಿರ್ವ

5 comments:

  1. ಅಚಾರ್ತುರ್ಯದಿಂದ ಒಂದು ಜೀವಿಯ ಸಾವು...ಮತ್ತು ರಕ್ಷಿಸಲು ಹೋಗಿ ಆಮೆ ಸಿಗದ ಶ್ರೀ ಹರಿ ಮತ್ತು ಆನಂದನ ಅಸಹಾಯಕತೆಯ ಕಣ್ಣೀರು...ಚೆನ್ನಾಗಿ ಮೂಡಿ ಬಂದಿದೆ..

    ಸೊಂತು ಪೋರ್ಬುಲೆಗ್ ವಿಷಯ ಗೊತ್ತತುಂಡ ಮಸ್ತ್ ಬೇಜಾರುತುವೆರಾ ದನ್ನಾ...
    ಅಂಚಿ ಆಮೆ ಜೋಕುಲೆಗ್ಲ ತಿಕ್ಕಿಜಿ...ಇಂಚಿ ಎನ್ನ ಬಂಜಿಗ್ಲ ಬತ್ತಿಜಿ ಪಂದ್...!!

    ಒಳ್ಳೆಯ ನಿರೂಪಣೆ ಹರೀಶ್ ಸರ್...

    ReplyDelete
  2. ತುಳು ಭಾಷೆಯ ನ್ನು ಈ ಬ್ಲಾಗ್ ಲೋಕದಲ್ಲಿ ನೋಡಿ ಬಹಳ ಸಂತೋಷವಾಯಿತು...
    ಧನ್ಯವಾದಗಳು...

    ReplyDelete
  3. papa ame!! nanu chikkavaliddaga nammane bhavili ame ittu..adu sattu hodaga nange bejaragittu.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...