ಶ್ರೀಹರಿ ಮುದ್ದು ಮಗುವಾಗಿದ್ದಾಗ ನಡೆದ ಒಂದು ಪ್ರಸಂಗ.
ಶ್ರೀಹರಿಯ ತಾಯಿಗೆ ಒಂದು ದಿವಸ ಮದುವೆಗೆ ಹೋಗಲಿಕ್ಕಿತ್ತು, ಬೆಳ್ಲಿಗೆಯಿಂದ ಬೇಗ ಬೇಗ ಕೆಲಸ ಮುಗಿಸಿ ಶ್ರೀಹರಿಯನ್ನು ಸ್ನಾನ ಮಾಡಿಸಿ ಪೌಡರ್ ಹಚ್ಚಿ ಅವರು ಅವನನ್ನು ಆಡಲು ಬಿಟ್ಟು, ಅವರು ಮದುವೆಗೆ ಹೋಗಲು ಸಿಧ್ಧರಾಗುತ್ತಿದ್ದರು.
ಅವರು ಮನೆಯಲ್ಲಿದ್ದ ದೊಡ್ಡ ಗೋದ್ರೇಜ್ ಕಂಪನಿಯ ಕಪಾಟಿನಿಂದ ಜರಿಯ ಸೀರೆ ತೆಗೆದು ಅದನ್ನು ಧರಿಸಿ, ತನ್ನ ಶೃಂಗಾರ ಮುಗಿಸಿ ಕಪಾಟು ಮುಚ್ಚಿದರು, ಸ್ವಲ್ಪ ಸಮಯ ಕನ್ನಡಿಯಲ್ಲಿ ತನ್ನನ್ನೇ ದಿಟ್ಟಿಸಿದ ನಂತರ ನೋಡಿದರೆ ಶ್ರೀಹರಿ ಕಾಣಿಸುತಾ ಇಲ್ಲ. ಅವರು ಮನೆ ಎಲ್ಲ ಮನೆ ಹುಡುಕಿದರು, "ಶ್ರೀಹರಿ, ಶ್ರೀಹರಿ " ಎಂದು ಕರೆದರೂ ಅವನು ಇಲ್ಲ .
ಅವರು ಮನೆಯ ಹೊರಗೆ ಹೋಗಿ ನೋಡಿದರು ಅಲ್ಲಿಯೂ ಇಲ್ಲ, ಈಗ ಅವರು ಅಳಲು ಶುರು ಮಾಡಿದರು, ಈಗ ಎಲ್ಲ ನೆರೆಹೊರೆಯವರು ಒಟ್ಟಾಗಿ ಬಂದು ಹುಡುಕಲು ಪ್ರಾರಂಬಿಸಿದರು, ಆದರೆ ಅವನ ಪತ್ತೆ ಇಲ್ಲ.
ಶ್ರೀಹರಿಯ ಅಮ್ಮ ಅಳುತ್ತಲೇ ಪುನಃ "ಶ್ರೀಹರಿ, ಶ್ರೀಹರಿ" ಎಂದು ಬೊಬ್ಬೆ ಹಾಕಲು ಶುರು ಮಾಡಿದರು, ಆಗ ಅವರಿಗೆ "ಅಮ್ಮ,ಅಮ್ಮ" ಎಂದು ಶ್ರೀಹರಿಯ ಕರೆಯುವ ಶಬ್ದ ಕೇಳಿ ಬಂತು, ಎಲ್ಲರಿಗೂ ಆಶ್ಚರ್ಯ ಎಲ್ಲಿಂದ ಶಬ್ದ ಬರುವುದೆಂದು, ಎಲ್ಲರೂ ಪುನಃ ಹುಡುಕಲು ಪ್ರಾರಂಬಿಸಿದರು, ಆದರೆ ಎಲ್ಲೂ ಇಲ್ಲ, "ಅಮ್ಮ,ಅಮ್ಮ" ಎಂಬ ಅವನು ಕರೆಯುವ ಸ್ವರ ಕೇಳಿ ಬರುತ್ತದೆ, ಆದರೆ ಅವನು ಎಲ್ಲಿಯೂ ಕಾಣುವುದಿಲ್ಲ.
ಎಲ್ಲರೂ ಚಿಂತೆಯಿಂದ ಜೋರು ಜೋರಿನಿಂದ ಅಳುತ್ತಿದ್ದ ಶ್ರೀಹರಿಯ ಅಮ್ಮಳಿಗೆ ಸಮಾಧಾನ ಹೇಳುತ್ತಿದ್ದರು, ಆಗ ಅವರಿಗೆ ಕಪಾಟನ್ನು ಬಡಿಯುವ ಶಬ್ದ ಕೇಳಿ ಬಂದು, "ಅಮ್ಮ,ಅಮ್ಮ" ಎಂಬ ಸ್ವರ ಪುನಃ ಕೇಳಿ ಬಂತು. ಶ್ರೀಹರಿಯ ಅಮ್ಮ ಓಡಿ ಹೋಗಿ ಕಪಾಟಿನ ಬಾಗಿಲು ತೆರೆದು ನೋಡಿದರೆ ಒಳಗೆ ಶ್ರೀಹರಿ ನಗುತ ಅಮ್ಮಳನ್ನು ನೋಡಿ " ಅಮ್ಮ ಉಳಾಯಿ ಮಜಾ (ಅಮ್ಮ ಒಳಗೆ ಮಜಾ)" ಎಂದು ಮುದ್ದಾಗಿ ಹೇಳಿದ, ಎಲ್ಲರು ಜೋರಾಗಿ ನಕ್ಕರು, ಅವಸರದಲ್ಲಿ ಶ್ರೀಹರಿಯ ಅಮ್ಮಳಿಗೆ ಯಾವಾಗ ಅವನು ಕಪಾಟಿನ ಒಳಗೆ ಹೋಗಿ ನುಗ್ಗಿದ ಎಂದು ತಿಳಿಯದೆ ಅವರು ಕಪಾಟನ್ನು ಮುಚ್ಚಿ ಕೊಂಡಿದ್ದರು, ಶ್ರೀಹರಿಯ ಅಮ್ಮ ಅಳುತ್ತಲೇ ಶ್ರೀಹರಿಯನ್ನು ಅಪ್ಪಿ ಮುದ್ದಿಸುತ್ತಿದ್ದರು.
by ಹರೀಶ್ ಶೆಟ್ಟಿ, ಶಿರ್ವ

olle tamasheya prasanga..
ReplyDelete:):):)...ತುಂಬಾ ಧನ್ಯವಾದಗಳು .....
ReplyDelete