Monday, November 21, 2011

ಅವನು ಯಾರು ?

ಅವನು ಯಾರು ?
ಅಪರಿಚಿತನಾಗಿದ್ದರು ಪರಿಚಿತನಾಗಿದ್ದ
ಹೀಗೆಯೇ ಒಂದು ದಿನ ಬೇಟಿ ಆಯಿತು
ಮಾತು ಮಾತಿನಿಂದ ಗೆಳೆತನ ಬೆಳೆಯಿತು

ಅವನು ಜ್ಞಾನಿ
ಕಂಡ ನನ್ನಲ್ಲಿದ್ದ ಕವಿಯನ್ನು
ಬರೆಯಲು ಪ್ರೋತ್ಸಾಹಿಸಿದ ನನ್ನನ್ನು
ಅವನಿಂದಲೇ ಹುಟ್ಟಿಸಿದೆ ನಾ ನನ್ನಲ್ಲಿದ್ದ ಕವಿಯನ್ನು

ನನ್ನ ಭಾವನೆಯನ್ನು ಮೆಚ್ಚಿದ
ನನ್ನ ಅಲ್ಪ ಅಕ್ಷರ ಜ್ಞಾನಕ್ಕೆ ಮುನಿಸಿದ
ಪದ್ಯ ಗದ್ಯದ ವ್ಯತ್ಯಾಸ ತಿಳಿಸಿದ
ಅವನಿಂದಲೇ ಕಲಿತೆ ನಾ ಬರೆಯಲು ಕವಿತೆಯನ್ನು

ಆದರೆ ಅವನು ಮುಂಗೋಪಿ
ಕೋಪ ಅವನ ಬ್ರಹ್ಮಾಸ್ತ್ರ
ಏನೋ ಮಾತಿಗೆ ಮಾತು ಬೆಳೆಯಿತು
ಕೋಪದಿಂದಲೇ ಗೆಳೆತನ ಅನಾಥವಾಯಿತು

ದೋಷವಿಲ್ಲದವರು ಈ ಜಗದಲ್ಲಿಲ್ಲ
ಮನುಜ ಮೂರ್ತಿ ಪ್ರಮಾದದ
ಈ ಕೋಪ ಕಾರಣವಿಲ್ಲದ
ನಾಲ್ಕು ದಿವಸದ ಜೀವನ ಎಂದು ಮರೆಯ ಬಾರದು
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...