Thursday, November 3, 2011

ಕವನ

ಹೀಗೊಮ್ಮೆ ಒಂದು ದಿವಸ
ಚಂಚಲವಾಯಿತು ಮನ
ಕುಳಿತೆ ಬರೆಯಲು ಕವನ

ಪ್ರೀತಿಯ ಕಲ್ಪನೆಗಳ ಭ್ರಮಣ
ನಿಸರ್ಗ ಪ್ರೇಮದ ಉಲ್ಲೇಖನ
ಕಷ್ಟ ಸುಖಗಳ ವ್ಯವಹಾರಜ್ಞಾನ

ಜೋಡಿಸಿದೆ ಪದಗಳ ಕಣ ಕಣ
ನೆನಪಿಸಿದೆ ಆ ಎಲ್ಲ ಮಧುರ ಕ್ಷಣ
ಮಾಡಿದೆ ಭಾವನೆಗಳ ಸಂಯೋಜನ

ಮೂಡಿತು ಒಂದು ಸುಂದರ ಕವನ
ಆದರು ಮನಸ್ಸಲಿ ಅನುಮಾನ
ಹೇಗಿರಬಹುದು ಓದುಗರ ವಿಶ್ಲೇಷಣ
by  ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...