ಸತ್ಯ ಸುಳ್ಳು
ಯಾರನ್ನು ನಂಬುವುದು
ಯಾರನ್ನು ದೂರುವುದು
ಸತ್ಯ ಇಂದು ಇಲ್ಲದಿದ್ದರೆ
ನಾಳೆ ಹೊರ ಬೀಳುವುದು
ಕಟ್ಟಿದ ಮನೆಯಲ್ಲಿ ಹೋಗಿ ನೀ ಇರುವೆ
ತನ್ನ ಮನೆಯೆಂದು ನೀ ಹೆಮ್ಮೆಯಿಂದ ಹೇಳುವೆ
ಒಂದಲ್ಲ ಒಂದು ದಿವಸ ಈ ಮನೆ ಬಿಳಲಿದೆ
ಹೊಸ ಕಟ್ಟಡ ನಿರ್ಮಾಣ ಆಗಲಿದೆ
ನೀನೇಕೆ ಬೇರೆಯವರ ಮುಖವನ್ನು ಹೊರುವೆ
ಅವರ ನಂಬಿಕೆಯನ್ನು ಕಳೆಯುವೆ
ಸುಳ್ಳು ಸತ್ಯವನ್ನು ನುಂಗಲಾರದು
ಸತ್ಯದ ಪತಾಕೆ ಎಂದಿಗೂ ಬೀಳಲಾರದು
ಮನುಜನಿಂದ ತಪ್ಪು ಆಗುವುದು ಸಹಜ
ತಪ್ಪು ಮಾಡಿಯೂ ವಾದಿಸುವವನು ನಿರ್ಲಜ
ಮುಳ್ಳ ಸೇತುವೆಯಲ್ಲಿ ಯಾರೂ ನಡೆಯಲಾರರು
ಕೊಳೆತ ರಕ್ತ ಹರಿದ ನಂತರ ಗಾಯ ಒಣಗಲಾರದು
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment