Monday, October 31, 2011

ಕನ್ನಡ ಭಾಷೆ

ಕನ್ನಡ ಭಾಷೆ ಬಿಟ್ಟು ಎಲ್ಲಿಗೆ ಹೋಗುವಿ
ಕರ್ನಾಟಕ ಮಲ್ಲಿಗೆಯ ಪರಿಮಳ ಹೇಗೆ ಮರೆಯುವಿ

ಇತರ ರಾಜ್ಯ ಇತರ ದೇಶಗಳಲ್ಲಿ ಇರುವುದರಲ್ಲಿಲ್ಲ ಏನೂ ತೊಂದರೆ
ಅಲ್ಲಿಯ ಭಾಷೆ ನುಡಿಯುವ ಆಸೆಯಲ್ಲಿಲ್ಲ ಏನೂ ತೊಂದರೆ
ಆದರೆ ಇತರ ಭಾಷೆಯನ್ನು ಎಲ್ಲಿಯ ತನಕ ನುಡಿಯುವಿ
ಕಡೆಗೆ ಮರಳಿ ಬಂದು ಕನ್ನಡ ಭಾಷೆಯನ್ನೇ ನುಡಿಯುವಿ

ಬೇರೆ ದೇಶದಿಂದ ಹಿಂತಿರುಗಿ ಬರುವಾಗ
ಕನ್ನಡ ಭಾಷೆ ನಿನಗೆ ಬರದಿದ್ದರೆ
ಹೇಗೆ ನೀ ಇಲ್ಲಿ ಜೀವನ ಕಳೆಯುವಿ
ಕಡೆಗೆ ಕನ್ನಡ ಭಾಷೆಯನ್ನೇ ನೀ ಕಲಿಯುವಿ

ಬನ್ನಿ ಕನ್ನಡದಲ್ಲಿ ಮಾತನಾಡೋಣ
ಕನ್ನಡ ಅಕ್ಷರ ಕಲಿಯೋಣ
ಕನ್ನಡದಲ್ಲಿ ಬರೆಯೋಣ
ಕನ್ನಡ ಬೆಳೆಸಲು ಒಟ್ಟಾಗಿ ಹೆಜ್ಜೆ ಇಡೋಣ
by ಹರೀಶ್ ಶೆಟ್ಟಿ, ಶಿರ್ವ

2 comments:

  1. ಚೆನ್ನಾಗಿದೆ ಕನ್ನಡ ಭಾಷಾಭಿಮಾನದ ಕವಿತೆ. ಕನ್ನಡ ಎದೆಯೊಳಗೆ ನುಗ್ಗಲಿ. ನಿಮಗೆ ಶುಭವಾಗಲಿ.

    ReplyDelete
  2. ತುಂಬಾ ಧನ್ಯವಾದಗಳು ಸರ್.....

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...