ಆದರೆ ನನ್ನ ಮಗ ಒಳಗೆ ಹೋಗಿ ತನ್ನ ಭೂಗೋಳ ಪುಸ್ತಕ ತಂದು "ಸುಮ್ಮನೆ ಏನಾದರೂ ಹೇಳಬೇಡಿ "ಮೊಲ" ಅಂತೆ, ಮೊಲವು ಅಲ್ಲ ಹುಲಿಯು ಅಲ್ಲ, ನೋಡಿ ಇಲ್ಲಿ ಎಲ್ಲ ವಿವರವಾಗಿ ಬರೆದ್ದಿದ್ದಾರೆ, ನೀವೇನು ಸ್ಕೂಲಿಗೆ ಹೋಗಲೇ ಇಲ್ಲವ..." ಎಂದು ಕೋಪದಿಂದ ಹೇಳಿ ನನ್ನ ಎದುರು ತನ್ನ ಭೂಗೋಳ ಪುಸ್ತಕ ಇಟ್ಟು ಹೋದ .
ನನಗೆ ಪುಸ್ತಕದಲ್ಲಿದ್ದ ಚಂದ್ರ ನನ್ನನ್ನು ನೋಡಿ ನಗುತ "ಈಗ ನಾನು ಚಂದ ಮಾಮನಲ್ಲ, ಈಗ ನಾನು ಸೂಪರ್ ಮೂನ್, ಇಂದಿನ ಮಕ್ಕಳು ನಿನ್ನಂತೆ ಮೂರ್ಖ ಶಿರೋಮಣಿಯರಲ್ಲ, ಅವರು ತುಂಬಾ ಬುದ್ದಿವಂತರು " ಎಂದು ಹೇಳುತ್ತಿದ್ದಂತೆ ಬಾಸವಾಯಿತು.
No comments:
Post a Comment