Sunday, October 30, 2011

ಮನೆ ಖಾಲಿ ಇದೆ

ನೀನಿಲ್ಲ
ಮನಸಿಲ್ಲ
ಮುಂಜಾನೆಯ ಬೆಳಕಿನ ಸೊಗಸಿಲ್ಲ
ನಿದ್ದೆ ಬರದ್ದಿದ್ದರು ಏಳುವ ಶಕ್ತಿಯಿಲ್ಲ
ಮನೆ ಖಾಲಿ ಇದೆ

ಬಾಳಿಗೆ 
ಯಾವುದೇ ಅರ್ಥವಿಲ್ಲ
ಜೀವನದ ಸುಖ ಬಳಿಯಿಲ್ಲ
ಬದುಕು ಬಂಡಿಗೆ ಚಕ್ರವಿಲ್ಲ
ಮನೆ ಖಾಲಿ ಇದೆ

ನಿನ್ನ
ಗೈರುಹಾಜರಿಯಿಂದ
ನನ್ನ ನನ್ನಲ್ಲಿ ಉಪಸ್ಥಿತಿಯಿಲ್ಲ
ಸ್ವಂತ ಜೀವದ ಗೋಚರವಿಲ್ಲ
ಮನೆ ಖಾಲಿ ಇದೆ

ಅಡುಗೆ ಮನೆಯಲಿ
ಮೌನ ವಾಸ
ಒಲೆಗೂ ಏಕಾಂತದ ಆಭಾಸ
ಏನೂ ತಿನ್ನುವ ಆಸೆ ಇಲ್ಲ
ಮನೆ ಖಾಲಿ ಇದೆ

ಹೊರಗೆ
ನಿನ್ನದೇ ಸ್ಮೃತಿ
ಮನ ಮಂದಿರದಲಿ ನಿನ್ನದೇ ಮೂರ್ತಿ
ಕೆಲಸದಲ್ಲೂ ರುಚಿಯಿಲ್ಲ
ಮನೆ ಖಾಲಿ ಇದೆ
by ಹರೀಶ್ ಶೆಟ್ಟಿ, ಶಿರ್ವ


No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...