Monday, October 24, 2011

ತುಂಡು ಗುಲಾಬಿ

ತುಂಡು ಗುಲಾಬಿ ಒಂದು ಬಿದ್ದಿತ್ತು
ನಿಸ್ಸಹಾಯ ಏಕಾಂತದಲಿ
ಮಳೆಯ ಹನಿಗಳ
ಹೊಡೆತ ಸಹಿಸುತ

ರಾತ್ರಿಯ ನಿಶ್ಯಬ್ದ ಕತ್ತಲೆ ಕವಿದಿತ್ತು
ಬೀದಿಯ ಪ್ರಕಾಶ ಕಂಬ ಕಿರು ಬೆಳಕು ಬೀರುತ್ತಿತ್ತು
ಗುಲಾಬಿ ಹೂವು ಅಲ್ಲೇ ಬಿದ್ದಿತ್ತು
ಆ ಪ್ರಕಾಶದಲಿ ಜೀವನದ ಅಂಶ ಹುಡುಕುತ

ಇದು ಯಾವುದೋ ಭಗ್ನ ಪ್ರೇಮಿ ಎಸೆದ ಹೂವೇ
ಅಲ್ಲದೆ ಯಾವುದೋ ಶವ ಯಾತ್ರೆಯಿಂದ ಬಿದ್ದು ಹೋದ ಹೂವೇ
ಗುಲಾಬಿ ಹೂವು ಅಲ್ಲೇ ಬಿದ್ದಿತ್ತು
ಕೊನೆ ಉಸಿರು ಎಳೆಯುತ

ಚಂದ್ರ ನಕ್ಷತ್ರಗಳ ಸವಾರಿ ಮುಗಿಯಲು ಇನ್ನೂ ಹೊತ್ತು ಇತ್ತು
ಮುಂಜಾನೆಯ ಸೂರ್ಯ ಉದಯವಾಗಳು ಇನ್ನೂ ತುಂಬಾ ಸಮಯವಿತ್ತು
ಗುಲಾಬಿ ಹೂವು ಈಗಲೂ ಅಲ್ಲೇ ಬಿದ್ದಿತ್ತು
ತನ್ನ ಪ್ರಾಣ ತೊರೆಯಲು ಸೂರ್ಯ ಬಿಸಿಲನ್ನು ಕಾಯುತ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...