ಒಂದು ಕವಿತೆ ಬರೆ ಪ್ರಿಯೆ
ಸ್ವಪ್ನದಲಿ ನಾ ಬರುವೆ
ಒಂದು ಕವಿತೆ ಬರೆ ಪ್ರಿಯೆ
ನಿನಗಾಗಿ ನಾ ಹೂವು ಆಗುವೆ
ಒಂದು ಕವಿತೆ ಬರೆ ಪ್ರಿಯೆ
ನಿಸರ್ಗದಲಿ ನಾ ಬೆರೆಯುವೆ
ಒಂದು ಕವಿತೆ ಬರೆ ಪ್ರಿಯೆ
ಬಾನಲ್ಲಿ ಸೂರ್ಯ ಚಂದ್ರನಂತೆ ನಾ ಕಾಣುವೆ
ಒಂದು ಕವಿತೆ ಬರೆ ಪ್ರಿಯೆ
ಏಕಾಂತದಲಿ ನಾ ಹೋಗುವೆ
ಒಂದು ಕವಿತೆ ಬರೆ ಪ್ರಿಯೆ
ನಿನ್ನ ಹಾಡಿನ ಸಂಗೀತವಾಗುವೆ
ಒಂದು ಕವಿತೆ ಬರೆ ಪ್ರಿಯೆ
ಕಲ್ಲಿನ ಪ್ರತಿಮೆಯಾಗುವೆ
ಒಂದು ಕವಿತೆ ಬರೆ ಪ್ರಿಯೆ
ನದಿ ಕೆರೆ ಕಡಲಾಗುವೆ
ಒಂದು ಕವಿತೆ ಬರೆ ಪ್ರಿಯೆ
ನಿನ್ನ ಭಾವನೆಯಲಿ ನಾ ಅಲೆಯುವೆ
ಒಂದು ಕವಿತೆ ಬರೆ ಪ್ರಿಯೆ
ನಿನ್ನ ಹೃದಯದಲಿ ನಾ ವಾಸವಾಗುವೆ
ಒಂದು ಕವಿತೆ ಬರೆ ಪ್ರಿಯೆ
by ಹರೀಶ್ ಶೆಟ್ಟಿ, ಶಿರ್ವ
ನೀವಿಷ್ಟೆಲ್ಲಾ ಹೇಳಿದ ಮೇಲೆ ಬರೆಯಲು ಪ್ರಯತ್ನಿಸುತ್ತೇನೆ...!!:-))
ReplyDeleteಅಯ್ಯೋ..!! ಲೇಖನಿಯೇ ಕಳೆದು ಹೋಯಿತಲ್ಲ..!! :((
ಧನ್ಯವಾದಗಳು ಸರ್ :)
ReplyDelete