Thursday, October 6, 2011

ರಾಮ ರಾವಣ

ರಾಮ ರಾವಣ ಇಬ್ಬರು ತುಲಾ ರಾಶಿಯವರಂತೆ
ಇಬ್ಬರಲ್ಲಿ ಒಂದೇ ರಾಶಿಯ ಗುಣವಂತೆ 
ರಾಮ ಸತ್ಯ ಬ್ರಹ್ಮ,ನಂತೆ
ರಾವಣ ಮಾಯಾವಿಯಂತೆ

ರಾಮನ ಜೀವನ ವಾಸ್ತವಿಕವಂತೆ 
ಅವನು ಈಶ್ವರನಂತೆ
ರಾವಣನೂ ಈಶ್ವರ ಭಕ್ತನಂತೆ 
ಅವನು ಅಸುರನಂತೆ 

ರಾಮನ ಅಯೋಧ್ಯದ ಅರಮನೆ ಭವ್ಯವಂತೆ 
ಆದರೆ ರಾವಣನ ಲಂಕಾ ಅತಿ ಭವ್ಯವಂತೆ
ಅಯೋದ್ಯದ ಅರಮನೆ ಸತ್ಯ ಪ್ರತೀಕವಂತೆ  
ಸ್ವರ್ಣ ಲಂಕಾ ಒಂದು ಭ್ರಮೆ ಸತ್ಯ ಅಲ್ಲವಂತೆ

ರಾಮನ ಭಾವುಕ ಮನಸ್ಸಂತೆ 
ಕಾಡಲ್ಲಿ ಅಲೆದ ಸಾಧಾರಣ ಮನುಷ್ಯನಂತೆ 
ರಾವಣ ಅಹಂಕಾರಿಯಂತೆ 
ಐಶ್ವರ್ಯದಲ್ಲಿರುವ ದೊಡ್ಡ ಮನುಷ್ಯನಂತೆ 

ರಾವಣ ಮಾಡಿದ ಸೀತಾಹರಣ ಅಂತೆ
ರಾಮ ತುಂಬಾ ಅತ್ತನಂತೆ
ಆದರೆ ರಾಮ ಶುಭಕಾರಿಯಂತೆ
ರಾವಣ ದುರಹಂಕಾರಿಯಂತೆ

ಯುದ್ಧದಲಿ ರಾಮ ರಾವಣನನ್ನು ಸೋಲಿಸಿದನಂತೆ 
ರಾವಣನ ಅಲ್ಲಿಗೆ ಅಂತ್ಯವಾಯಿತಂತೆ
ಸುಳ್ಳು ಸತ್ಯಕ್ಕೆ ಶರಣಾಯಿತಂತೆ
ಸತ್ಯದ  ವಿಜಯವಾಯಿತಂತೆ  

ಸೀತೆಯ ಅಗಲಿಕೆ ರಾಮನ ರಾಜ ಪರೀಕ್ಷೆಯಂತೆ 
ಸೀತೆಯ ಅಗ್ನಿ ಪರೀಕ್ಷೆ ರಾಮನ ವಿರಹವಂತೆ
ರಾಮ ಮಾಡಿದ್ದು ತನ್ನ ಇಚ್ಛೆಯ ತ್ಯಾಗವಂತೆ 
ಮಾನವರಿಗೆ ಕೊಟ್ಟ ದಾಂಪತ್ಯ ಜೀವನದ ಇದೇ ಸಂದೇಶವಂತೆ
by ಹರೀಶ್ ಶೆಟ್ಟಿ, ಶಿರ್ವ
 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...