Sunday, October 16, 2011

ಸಂಜೆ

ಸಂಜೆಯ ಸವಾರಿ ಹೊರಟಿತು ರಾತ್ರಿಯನ್ನು ಭೇಟಿ ಆಗಲು
ತನ್ನ ಮನದ ವ್ಯಥೆಯನ್ನು ಚಂದ್ರನಿಗೆ ಹೇಳಲು
ಹೃದಯದಲಿ ಆವರಿಸಿದೆ  ದುಃಖದ ಕತ್ತಲು
ಇನ್ನೂ ದೂರ ಇದೆ ಮುಂಜಾನೆಯ ಬೆಳಕ ಬಾಗಿಲು

ಈ ದಿನದಲಿ ಕಳೆದಿವೆ ಆಗು ಹೋಗುಗಳು
ಮನಸಲಿ ತುಂಬಿವೆ ಬಹು ತೊಡಕುಗಳು
ಹಿಂದೆ ಮುಂದೆ ಎಲ್ಲ ಕಡೆ ಮೌನ ವಾತಾವರಣಗಳು
ತಂಗಾಳಿ ಬೀಸುತ್ತಿದೆ ಶಾಂತವಾಗಿದೆ ಮರಗಳು

ರಾತ್ರಿ ನಿರತವಾಗಿತ್ತು ತನ್ನ ಪ್ರವಾಸ ಸಾಗಲು
ಕತ್ತಲು ಆರಂಭಿಸಿತು ರವಿಯ ಕಿರಣವನ್ನು ನುಂಗಲು
ತನ್ನ ರೂಪ ಹರಡಿತು ಸಂಜೆಯ ಸುತ್ತಲು
ಸಂಜೆಯ ಪ್ರತಾಪ ಆಯಿತು ಕ್ಷೀಣವಾಗಲು
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಸಿದ್ಧಿದಾತ್ರಿ