Wednesday, November 30, 2011
ಮೌನ
ಅವರ ಉಪೇಕ್ಷೆಯಿಂದ
ನನ್ನ ಕವಿತೆ ಮೌನವಾಯಿತು
ಇಂದೂ ನನ್ನ ಮೌನವೇ
ನನ್ನ ಕವಿತೆ ಆಯಿತು......
_______________
ನಿನ್ನ ಕೋಪದಿಂದ
ನನಗಿಲ್ಲ ಬೇಜಾರ
ಆದರೆ ನಿನ್ನ ಮೌನದಿಂದ
ಮನಸಲ್ಲಿ ತಳಮಳ.....
____________
ಬರಹಗಾರನ ಬರಹವನ್ನು
ಕದ್ದು ಮಾಡಬೇಡಿ
ಅವನ ಕವಿತೆಯನ್ನು ಮೌನ
ಇದೇ ಅವನ ಸೊತ್ತು
ಇದೇ ಸಂಪತ್ತು ಅವನ......
__________
ಏನೂ ಉಳಿಯಲಿಲ್ಲ ನನ್ನ ಬಳಿ
ಅವಳು ಹೋದ ನಂತರ
ಜೀವನದ ಇಲ್ಲ ಗೋಚರ
ಈಗ ಮೌನವೇ ನನಗೆ ಆಧಾರ......
by ಹರೀಶ್ ಶೆಟ್ಟಿ, ಶಿರ್ವ
ನನ್ನ ಕವಿತೆ ಮೌನವಾಯಿತು
ಇಂದೂ ನನ್ನ ಮೌನವೇ
ನನ್ನ ಕವಿತೆ ಆಯಿತು......
_______________
ನಿನ್ನ ಕೋಪದಿಂದ
ನನಗಿಲ್ಲ ಬೇಜಾರ
ಆದರೆ ನಿನ್ನ ಮೌನದಿಂದ
ಮನಸಲ್ಲಿ ತಳಮಳ.....
____________
ಬರಹಗಾರನ ಬರಹವನ್ನು
ಕದ್ದು ಮಾಡಬೇಡಿ
ಅವನ ಕವಿತೆಯನ್ನು ಮೌನ
ಇದೇ ಅವನ ಸೊತ್ತು
ಇದೇ ಸಂಪತ್ತು ಅವನ......
__________
ಏನೂ ಉಳಿಯಲಿಲ್ಲ ನನ್ನ ಬಳಿ
ಅವಳು ಹೋದ ನಂತರ
ಜೀವನದ ಇಲ್ಲ ಗೋಚರ
ಈಗ ಮೌನವೇ ನನಗೆ ಆಧಾರ......
by ಹರೀಶ್ ಶೆಟ್ಟಿ, ಶಿರ್ವ
Tuesday, November 29, 2011
ನೀನಿಲ್ಲದೆ ಜೀವನದಿಂದ
ನೀನಿಲ್ಲದೆ ಜೀವನದಿಂದ
ಯಾವುದೇ ಅತೃಪ್ತಿ ಇಲ್ಲ
ಅತೃಪ್ತಿ ಇಲ್ಲ-೩
ನೀನಿಲ್ಲದೆ ಜೀವನ ಆದರೆ
ಜೀವನವೇ ಅಲ್ಲ-೪
ನೀನಿಲ್ಲದೆ ಜೀವನದಿಂದ...
ನಿನ್ನ ಹೆಜ್ಜೆಯಿಂದಲೇ
ನಾವು ನಮ್ಮ ಗಮ್ಯವನ್ನು ಪಡೆದು
ಎಲ್ಲೋ ದೂರ ಹೋಗಬಹುದಿತ್ತು
ಎಂದು ಬಯಸುತ್ತಿದ್ದೆ
ನೀನೊಂದು ವೇಳೆ
ಜೋತೆಯಲ್ಲಿರುತ್ತಿದ್ದರೆ
ಗಮ್ಯಗಳ ಕೊರತೆ ಏನಿಲ್ಲ
ನೀನಿಲ್ಲದೆ ಜೀವನದಿಂದ...
ಅದೇಕೋ
ನಿನ್ನ ಮಡಿಲಲ್ಲಿ ತಲೆಯನಿಟ್ಟು
ತುಂಬಾ ಅಳಬೇಕೆನ್ನಿಸುತ್ತಿದೆ
ನಿನ್ನದ್ದು ಕಂಗಳಲ್ಲಿ
ಆಶ್ರುಗಳ ಕೊರತೆ ಏನಿಲ್ಲ
ನೀನಿಲ್ಲದೆ ಜೀವನದಿಂದ...
ನೀನೊಂದು ವೇಳೆ ಹೇಳಿದರೆ
ಇಂದಿನ ಈ ರಾತ್ರಿ
ಚಂದ್ರ ತನ್ನ ಪ್ರವಾಸ ಮುಗಿಸುವುದಿಲ್ಲ
ಹೇಳಿ ಬಿಡು
ರಾತ್ರಿಯನ್ನು ನಿಲ್ಲಿಸು
ಕೇವಲ ಈ ರಾತ್ರಿಯಿದೆ ನಮ್ಮ ಜೊತೆ
ಮತ್ತೆ ಈ ಜೀವನದಲಿ ಏನೂ ಉಳಿದಿಲ್ಲ
ನೀನಿಲ್ಲದೆ ಜೀವನದಿಂದ...
ಮೂಲ : ಗುಲ್ಶಾರ್
ಅನುವಾದ : by ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್ , ಕಿಶೋರ್ ಕುಮಾರ್
ಸಂಗೀತ : ಆರ್ ಡೀ ಬರ್ಮನ್
ಚಿತ್ರ : ಆಂಧಿ
Tere bina zindagi se koyi, shikwa, to nahi,
shikwa nahi, shikwa nahi, shikwa nahi
Tere bina zindagi bhi lekin, zindagi, to nahi,
zindagi nahi, zindagi nahi, zindagi nahi
Tere bina zindagi se koyi, shikwa, to nahi
Kaash aisa ho tere qadmo se, chun ke manzil chale aur kahi door kahi - 2
Tum gar saath ho, manzilo ki kami to nahi
Tere bina zindagi se koyi, shikwa, to nahi
Jee mein aata hai, tere daaman mein, sar jhuka ke ham rote rahe, rote rahe - 2
Teri bhi aankho mein, aansuo ki nami to nahi
Tere bina zindagi se koyi, shikwa, to nahi,
shikwa nahi, shikwa nahi, shikwa nahi
Tere bina zindagi bhi lekin, zindagi, to nahi,
zindagi nahi, zindagi nahi, zindagi nahi
Tum jo keh do to aaj ki raat, chaand doobega nahi, raat ko rok lo -2
Raat ki baat hai, aur zindagi baaki to nahi
Tere bina zindagi se koyi, shikwa, to nahi,
shikwa nahi, shikwa nahi, shikwa nahi
Tere bina zindagi bhi lekin, zindagi, to nahi,
zindagi nahi, zindagi nahi, zindagi nahi
http://www.dailymotion.com/video/x93osy_lata-kishore-tere-bina-zindagi-se-m_music
Monday, November 28, 2011
ನೀರಿನ ಬೆಲೆ
ಶ್ರೀಹರಿ ಎಂಟನೆ ತರಗತಿಯಲ್ಲಿದ್ದಾಗ ನಡೆದ ಒಂದು ಘಟನೆ .
ಶ್ರೀಹರಿಗೆ ಮನೆಯಲ್ಲಿ ನೀರಿನ ಕೊರತೆ ಇದ್ದದ್ದೇ , ಆ ಸಮಯದಲ್ಲಿ ನೀರು ರಾತ್ರಿಗೆ ಒಂದೇ ಸಮಯ ಬರುತ್ತಿತ್ತು. ಆದರು ಶ್ರೀಹರಿಗೆ ನೀರನ್ನು ತ್ಯಾಜ್ಯ ಮಾಡುವುದು ಹವ್ಯಾಸ ಆಗಿ ಹೋಗಿತ್ತು, ಅವನ ಅಮ್ಮ ಎಷ್ಟು ಸಲ ಹೇಳಿದರು ಅವನು ತನ್ನನ್ನು ಸುಧಾರಿಸುತ್ತಿರಲಿಲ್ಲ.
ಹೀಗೆಯೇ ಶಾಲೆಯಲ್ಲಿ ಕರಾಡ್ಗೆ ಪಿಕ್ನಿಕ್ ಹೋಗಲಿಕ್ಕಿದೆ ಎಂಬ ಸುದ್ದಿ ಬಂತು, ಕರಾಡ್ ಮಹಾರಾಷ್ಟ್ರದ ಸತಾರ ಡಿಸ್ಟ್ರಿಕ್ಟ್ ಲ್ಲಿದ್ದ ಒಂದು ಪಟ್ಟಣ, ಇದು ಕೊಯನ ನದಿ ಮತ್ತು ಕೃಷ್ಣ ನದಿಯ ಸಂಗಮವಾಗುವ ಸ್ಥಾನದಲ್ಲಿ ನೆಲೆಸಿದೆ.
ಶ್ರೀಹರಿ ಹಾಗು ಅವನ ಸಹಪಾಟಿಯವರು ತುಂಬಾ ಉತ್ಸಾಹದಲ್ಲಿದ್ದರು, ಆ ದಿವಸ ಬೆಳ್ಳಿಗೆ ೬ ಗಂಟೆಗೆ ಎಲ್ಲರೂ ಶಾಲೆಗೆ ಮುಟ್ಟಿದರು, ದೊಡ್ಡದೊಂದು ಬಸ್ ಅಲ್ಲಿ ನಿಂತಿತ್ತು, ಶ್ರೀಹರಿಯ ೩ ಶಿಕ್ಷಕರು ಅಲ್ಲಿಗೆ ಬಂದು ಕೆಲವು ಹಿತ ವಚನ ಕೊಟ್ಟು ಎಲ್ಲರು ಬಸ್ಸಲ್ಲಿ ಹೋಗಲು ಸಿದ್ದರಾಗಿ ಎಂದು ಹೇಳಿದರು, ಎಲ್ಲರು ಬಸ್ ಹತ್ತಿ ಹೊರಡಲು ಸಿದ್ದರಾದರು.
ಮಧ್ಯಾಹ್ನದ 12 ಗಂಟೆ ಸಮಯ ಆಗುವಾಗ ಬಸ್ ಕರಾಡ್ ಬಂದು ನಿಂತಿತು, ಎಲ್ಲ ಮಕ್ಕಳು ಸೋತು ಹೋಗಿದ್ದರು, ಆದರೂ ಉತ್ಸಾಹದಲ್ಲಿದ್ದರು, ಅಲ್ಲಿ ನೋಡಲು ಏನು ವಿಶೇಷ ಇರಲಿಲ್ಲ, ಮಕ್ಕಳಿಗೆ ಅರ್ಥ ಆಗಲಿಲ್ಲ ಅವರಿಗೆ ಇಲ್ಲಿ ಏನು ತೋರಿಸಲು ಕರೆದು ಕೊಂಡು ಬಂದಿದ್ದಾರೆ ಎಂದು. ಆಗ ಶ್ರೀಹರಿಯ ಗಣಿತ ಟೀಚರ್ ದೇಶಪಾಂಡೆಯವರು ಬಂದು ಎದುರಿನ ಸಣ್ಣ ಬೆಟ್ಟ ತೋರಿಸಿ "ನಾವು ಈಗ ಈ ಬೆಟ್ಟ ಏರಿ ಅಲ್ಲಿ ಇದ್ದ ಒಂದು ಕೋಟೆ ನೋಡಲು ಹೋಗುತ್ತಿದ್ದೇವೆ, ಇಲ್ಲಿ ಛತ್ರಪತಿ ಶಿವಾಜಿ ಮಹಾರಾಜರವರು ಒಂದು ಸಮಯ ಬಂದು ತಂಗಿದ್ದರು ಎಂದು ಇತಿಹಾಸ ವರ್ಣಿಸಿ ಎಲ್ಲರು ನಮ್ಮ ಹಿಂದೆ ಸಾಲು ಸಾಲಾಗಿ ಬೆಟ್ಟವನ್ನು ಏರಬೇಕು." ಎಂದು ಹೇಳಿದರು.
ಎಲ್ಲ ಮಕ್ಕಳು ಶಿಕ್ಷಕರ ಹಿಂದೆ ಹಿಂದೆ ಬೆಟ್ಟ ಏರಲು ಪ್ರಾರಂಭಿಸಿದರು, ಮಧ್ಯಾಹ್ನದ ಸಮಯ, ಸೂರ್ಯ ನೆತ್ತಿಯ ಮೇಲೆ ಬಿಸಿಲು ತುಂಬಾ, ಅರ್ಧ ಗಂಟೆ ಬೆಟ್ಟ ಏರಿದ ಮೇಲೆ ಎಲ್ಲರಿಗೂ ಸಾಕು ಸಾಕಾಯಿತು, ಅದರ ಮೇಲೆ ಎಲ್ಲರಿಗೂ ಬಾಯಾರಿಕೆ, ಮಕ್ಕಳಲ್ಲಿದ್ದ ನೀರು ಮುಗಿದಿತ್ತು, ಆದರೂ ಮಕ್ಕಳು ಉತ್ಸಾಹದಿಂದ ಮುಂದೆ ಹೊರಟರು, ಈಗ ಶಿಕ್ಷಕರೆಲ್ಲ ಹಿಂದೆ ಉಳಿದರು, ಅವರ ತ್ರಾಣ ಮುಗಿದಿತ್ತು, ಅವರು ಮೆಲ್ಲ ಮೆಲ್ಲನೆ ಬೆಟ್ಟ ಏರುತ್ತಿದ್ದರು.
ಶ್ರೀಹರಿ ಹಾಗು ಅವನ ಮಿತ್ರ ದಿವಾಕರ್ ಅವರು ತುಂಬಾ ಮುಂದೆ ಇದ್ದರು, ದಿವಾಕರ "ಇನ್ನೂ ನನ್ನಿಂದ ಸಾದ್ಯವಿಲ್ಲ ನಡೆಯಲು" ಎಂದು ಹೇಳಿದ, ಶ್ರೀಹರಿಯು ಸುಸ್ತಾಗಿದ್ದ, ಅದರ ಮೇಲೆ ಬಾಯಾರಿಕೆ, ಒಣಗಿದ ಕಂಠ, ಏನು ಮಾಡುವುದೆಂದು ಅರ್ಥ ಆಗಲಿಲ್ಲ, ಶಿಕ್ಷಕರ ಮೇಲೆ ಕೋಪವು ಬಂತು "ಏಕೆ ಈ ಸ್ಥಾನದಲ್ಲಿ ಕರೆದು ಕೊಂಡು ಬಂದಿದ್ದಾರೆ ಎಂದು, ಅವರು ಒಂದು ಕಲ್ಲಿನ ಮೇಲೆ ಹೋಗಿ ಕುಳಿತುಕೊಂಡರು, ಸ್ವಲ್ಪ ಸಮಯದ ನಂತರ ಇನ್ನೂ ಹಲವು ಮಕ್ಕಳು ಬಂದರು, ಎಲ್ಲರೂ ದಣಿದಿದ್ದರು, ಅವರಿಂದ ನಡೆಯಲು ಸಾದ್ಯವಾಗುತ್ತಿರಲಿಲ್ಲ, ಅವರೂ ಅಲ್ಲೇ ಕೆಳಗೆ ಕೂತು ಕೊಂಡರು.
ಆಗ ಒಂದು ಹುಡುಗ ತಾರಾನಾಥ್ ಅಳಲು ಪ್ರಾರಂಭಿಸಿದ, ಎಲ್ಲರೂ ಅವನಿಗೆ "ಏನಾಯಿತು , ಏನಾಯಿತು "ಎಂದು ಕೇಳಿದರು. ಆಗ ಅವನು ಅವನಿಗೆ ಬಾಯಾರಿಕೆ ಆಗುತ್ತಿದೆ ನೀರು ಬೇಕೆಂದು ಹೇಳಿದ, ಯಾರಿಗೂ ಅರ್ಥ ಆಗಲಿಲ್ಲ ಈಗ ಏನೂ ಮಾಡುವುದೆಂದು, ಯಾರ ಹತ್ತಿರ ನೀರು ಇರಲಿಲ್ಲ, ಅವರು ಜೋರಿನಿಂದ ಶಿಕ್ಷಕರನ್ನು ಕರೆದರು ಆದರೆ ಅವರು ಇನ್ನೂ ತುಂಬಾ ದೂರದಲ್ಲಿದ್ದರು.
ಶ್ರೀಹರಿಗೆ ತಾರಾನಾಥನನ್ನು ನೋಡಿ ತುಂಬಾ ಬೇಜಾರವಾಗುತ್ತಿತ್ತು, ಅವನಿಗೂ ಬಾಯಾರಿಕೆ ಆಗುತ್ತಿತ್ತು, ಏನು ಮಾಡುವುದು ಎಂದು ಯೋಚಿಸುತ್ತಲೇ ಅವನಿಗೆ ಅಲ್ಲಿ ಇದ್ದ ಒಂದು ಗುಂಡಿಯಂತ ಸ್ಥಾನ ಕಂಡು ಬಂತು, ಅವನು ಅಲ್ಲಿ ಹೋಗಿ ನೋಡಿದರೆ ಅದರಲ್ಲಿ ನೀರು ಇತ್ತು, ಆದರೆ ಅದು ನಿಂತ ಚರಂಡಿ ನೀರು , ಶ್ರೀಹರಿ "ಇದ್ದನ್ನು ಕುಡಿಯುವುದೇ , ಚಿ ...ಇದನ್ನು ಹೇಗೆ ಕುಡಿಯುವುದು ", ಅವನಿಗೆ ಈಗ ನೀರಿನ ಬೆಲೆ ತಿಳಿದಿತ್ತು, ಅವನು ಎಷ್ಟು ನೀರು ತ್ಯಾಜ್ಯ ಮಾಡುತಿದ್ದ ಎಂದು ನೆನೆದು ಅವನಿಗೆ ಈಗ ಬೇಜಾರಾಯಿತು.
ಶ್ರೀಹರಿ ಜೋರಿನಿಂದ "ಗೆಳೆಯರೇ ಇಲ್ಲಿ ಬನ್ನಿ ಇಲ್ಲಿ ನೋಡಿ " ಎಂದು ಬೊಬ್ಬೆ ಹಾಕಿದ. ಎಲ್ಲರು ಅವನು ಇದ್ದಲ್ಲಿ ಧಾವಿಸಿದರು, ಆ ಚರಂಡಿ ನೀರನ್ನು ನೋಡಿ ಎಲ್ಲರ ಮುಖ ಸಪ್ಪಗಾಯಿತು, ತಾರಾನಾಥ್ "ಶ್ರೀಹರಿ ದಯಮಾಡಿ ಆ ನೀರು ತೆಗೆದು ಕೊಡು, ನನ್ನಿಂದ ಬಾಯಾರಿಕೆ ತಡೆಯಲು ಸಾದ್ಯವಿಲ್ಲ" ಎಂದು ಬೇಡಿದ, ಶ್ರೀಹರಿ ಅವನಲ್ಲಿದ್ದ ಬಾಟಲಿಯಿಂದ ಬಗ್ಗಿ ಆ ಚರಂಡಿ ನೀರನ್ನು ತೆಗೆದ, ಅದರ ಬಣ್ಣ ಕಂದು ಕಪ್ಪಾಗಿತ್ತು, ತಾರಾನಾಥ್ ಏನೂ ಯೋಚನೆ ಮಾಡದೆ ಶ್ರೀಹರಿಯ ಕೈಯಿಂದ ಬಾಟಲಿ ಕಿತ್ತು ಕಣ್ಣು ಮುಚ್ಚಿ ಆ ನೀರನ್ನು ಕುಡಿದ ಹಾಗು "ಅಯಪ್ಪ" ಎಂದು ಸಮಾಧಾನದಿಂದ ಅಲ್ಲೇ ಕೂತು ಕೊಂಡ, ಈಗ ಎಲ್ಲ ಮಕ್ಕಳು ಆ ನೀರು ತೆಗೆದು ತೆಗೆದು ಕಣ್ಣು ಮುಚ್ಚಿ ಆ ನೀರನ್ನು ಕುಡಿದರು, ಶ್ರೀಹರಿಯು ಕುಡಿದ, ಎಲ್ಲರಿಗೂ ಈಗ ಸಮಾಧಾನವಾಗಿತ್ತು.
ಹೇಗೋ ಸವಾರಿ ಮುಂದೆ ಸಾಗಿತ್ತು, ಕೋಟೆ ನೋಡಿದಾಯಿತು ಹಾಗು ಪಿಕ್ನಿಕ್ ಹೋಗಿ ಬಂದು ಆಯಿತು.
ಆದರೆ ಶ್ರೀಹರಿಯ ಜೀವನದಲ್ಲಿ ಈ ಪಿಕ್ನಿಕ್ ಒಂದು ಅದ್ಭುತ ಸ್ಮರಣೀಯ ಘಟನೆಯಾಗಿ ಉಳಿಯಿತು .

Sunday, November 27, 2011
ವ್ಯತ್ಯಾಸ
ಅವನಿಗೆ ಎಲ್ಲರೂ ಸ್ವಾರ್ಥಿ ಎಂದು ಹೇಳುತ್ತಿದ್ದರು
ಆದರೆ ಅವನು ತನ್ನ ಕುಟುಂಬಕ್ಕಾಗಿ ತನ್ನ ಸರ್ವವನ್ನೂ ತ್ಯಾಗ ಮಾಡಿದ ನಿಸ್ವಾರ್ಥಿ .....
ಅವನಿಗೆ ಎಲ್ಲರೂ ನಿಸ್ವಾರ್ಥಿ ಎಂದು ಹೇಳುತ್ತಿದ್ದರು
ಆದರೆ ಅವನು ತನ್ನದೇ ಲೋಕದಲ್ಲಿರಲು ತನ್ನ ಕುಟುಂಬ ತ್ಯಾಗ ಮಾಡಿದ ಸ್ವಾರ್ಥಿ ....
_____________________
ಅವನು ಹಲವು ಬಿದಿರಿಂದ
ಸುಂದರ ಗುಡಿಸಲು ಕಟ್ಟಿದ
ಅದರಲ್ಲಿ ಜೀವನವಿತ್ತು ಅವನ ವಾಸವಿತ್ತು....
ಅವನು ನಾಲ್ಕು ಗೋಡೆಯಿಂದ ಕೂಡಿದ
ದೊಡ್ಡ ಮನೆಯೊಂದು ಕಟ್ಟಿದ
ಆದರೆ ಅಲ್ಲಿ ಇರುವುದು ಅವನಲ್ಲ ಕೇವಲ ಏಕಾಂತ ......
________________________
ಅವನು ಭಿಕ್ಷುಕ
ಭಿಕ್ಷೆ ಬೇಡಿ ಹೊಟ್ಟೆ ತುಂಬುತ್ತಿದ್ದ
ಆದರೆ ಭಿಕ್ಷೆ ನೀಡಿದವರಲ್ಲಿ ಯಾರೂ ಅವನ ಜ್ಞಾಪಕದಲ್ಲಿರಲಿಲ್ಲ ...
ಅವನು ಜ್ಞಾನಿ
ಅವನಿಗೆ ಕೊಟ್ಟ ಜ್ಞಾನ ಅವನು ಮರೆಯಲಿಲ್ಲ
ಆದರೆ ಜ್ಞಾನ ಕೊಟ್ಟವರನ್ನು ಮರೆತು ಬಿಟ್ಟ.....

ದೇವರ ದರ್ಶನ
ಶ್ರೀಹರಿ ದೇವಸ್ಥಾನ ಹೋಗಿದ್ದ.
ಎಲ್ಲರೂ ದೇವರ ದರ್ಶನಗೋಸ್ಕರ ಸರದಿ ಸಾಲಿನಲ್ಲಿ ಕಾಯುತ್ತಿದ್ದರು, ಶ್ರೀಹರಿಯು ಸಾಲಿನಲ್ಲಿ ನಿಂತಿದ್ದ.
ಒಬ್ಬ ಶ್ರೀಮಂತ ತನ್ನ ಪರಿವಾರದೊಂದಿಗೆ ಬಂದು ಸರದಿ ಸಾಲನ್ನು ಕಡೆಗಣಿಸಿ ಸಾಲಲ್ಲಿ ನಿಲ್ಲದೆ ನೇರವಾಗಿ ದೇವರ ಗುಡಿಯಕಡೆ ಹೋದ.
ಇದನ್ನು ಗಮನಿಸಿದ ಒಬ್ಬ ವಯೋವೃದ್ಧ ಪೂಜಾರಿಯವರು ಶ್ರೀಮಂತರಿಗೆ "ತಾವು ದೇವರ ದರ್ಶನಕ್ಕಾಗಿ ಬಂದಿದ್ದಿರಿ ಅಲ್ಲವೇ " ಎಂದು ಕೇಳಿದರು.
ಶ್ರೀಮಂತರು " ಹೌದು ಪೂಜರಿಯವರೇ, ಬೇಗ ನಮ್ಮ ಪೂಜೆ ಸಲ್ಲಿಸಿ, ನಮಗೆ ಬೇರೆ ಕಡೆಯೂ ಹೋಗಲ್ಲಿಕ್ಕಿದೆ.
ಪೂಜಾರಿಯವರು "ಶ್ರೀಮಂತರೇ , ಬೇಜಾರ ಮಾಡಬೇಡಿ ,ಆದರೆ ನೀವು ಕೊಡುವ ಪೂಜೆ ಈಗ ದೇವರು ಸ್ವೀಕರಿಸಲಾರ ".
ಶ್ರೀಮಂತರು " ಪೂಜರಿಯವರೇ, ಯಾಕೆ ಹೀಗೆ ಹೇಳುತ್ತಿದ್ದೀರಿ".
ಪೂಜಾರಿಯವರು " ಶ್ರೀಮಂತರೇ, ಈಗ ದೇವರ ಗಮನ ಸರದಿ ಸಾಲಿನಲ್ಲಿ ಭಕ್ತಿ ಶ್ರದ್ಧೆಯಿಂದ ನಿಂತ ಭಕ್ತರ ಮೇಲೆ ಇದೆ, ನೀವು ಅವಸರವಾಗಿ ಕೊಡುವ ಪೂಜೆಯನ್ನು ಅವನು ಗಮನಿಸಲಾರ, ದೇವರಿಗೆ ಬೇಕಾದದ್ದು ಭಕ್ತಿ ಶ್ರದ್ಧೆ, ಅವಸರವಾಗಿ ಕೊಡುವ ಪೂಜೆ ಅಲ್ಲ" .
ಶ್ರೀಮಂತರು ಮರು ಮಾತನಾಡದೆ ತನ್ನ ಪರಿವಾರದೊಂದಿಗೆ ಸರದಿ ಸಾಲಿನಲ್ಲಿ ಹೋಗಿ ನಿಂತರು .
by ಹರೀಶ್ ಶೆಟ್ಟಿ, ಶಿರ್ವ
Saturday, November 26, 2011
ಮೋಕ್ಷ
ಕೇವಲ ಸತ್ಯ ಹೇಳಿದಕ್ಕೆ........
________________________
ಸತ್ಯದ ಶವ ಮಣ್ಣಲ್ಲಿ ಅಡಗಿತ್ತು
ಅದರ ಮೇಲೆ ಸುಳ್ಳು ಬೆತ್ತಲೆ ನರ್ತಿಸುತ್ತಿತ್ತು ........
_________________________
ಅವಳು"ನೀನು ಪ್ರಾಪಂಚಿಕತೆ ಕಲಿ"
ಎಂದು ಹೇಳಿ ನನ್ನನ್ನು ಬಿಟ್ಟು ಹೋದಳು......
_________________________
ಕೋಟಿ ಕೋಟಿ ಹಣ ಸಂಪಾದಿಸಿದೆ
ಮೋಹ ಮುಗಿಯುತ್ತಲೇ ಭಿಕ್ಷುಕನಾದೆ .....
__________________________
ನಾನೊಬ್ಬನೇ ಈ ಪ್ರಪಂಚದಲ್ಲಿ
ಈಗ ನಾನು "ಸನ್ಯಾಸಿ" ........
by ಹರೀಶ್ ಶೆಟ್ಟಿ, ಶಿರ್ವ
Thursday, November 24, 2011
Wednesday, November 23, 2011
ನನಗ್ಯಾರು?
ನಿಸ್ಸಹಾಯ ನಾನು
ನನಗ್ಯಾರು?
ಅಪಘಾತದಲ್ಲಿ ಸಿಲುಕಿ ಅಂಗ ವಿಕಲನಾದೆ
ದಿಕ್ಕಿಲ್ಲದೆ ಬದುಕಿ ಅನ್ಯರ ಅಶ್ರಿತನಾದೆ
ನಿಸ್ಸಹಾಯ ನಾನು
ನನಗ್ಯಾರು?
ತಂದೆಯ ರಕ್ಷಣೆ ಚಾವಣಿ ಇಲ್ಲ
ತಾಯಿಯ ಮಡಿಲ ಆಸರೆ ಇಲ್ಲ
ನಿಸ್ಸಹಾಯ ನಾನು
ನನಗ್ಯಾರು?
ಬಾಲ್ಯ ಮಿತ್ರರು ದೂರವಾದರು
ಹತ್ತಿರ ಬಾರದ ಸಂಬಂಧಿಕರು
ನಿಸ್ಸಹಾಯ ನಾನು
ನನಗ್ಯಾರು?
ಅರ್ಧಾಂಗಿಯ ವ್ಯಂಗ ಕಟಾಕ್ಷ
ಮಕ್ಕಳ ಉದಾಸೀನತೆ ನಿರ್ಲಕ್ಷ್ಯ
ನಿಸ್ಸಹಾಯ ನಾನು
ನನಗ್ಯಾರು?
ದುರ್ಬಲ ಜೀವನದಿಂದ ಉಂಟಾಗಿದೆ ಜಿಗುಪ್ಸೆ
ಮೃತ್ಯು ಬರುದಿಲ್ಲವೆಂದು ಹೇಳಿ ಕೊಡುತ್ತಿದೆ ಹಿಂಸೆ
ನನಗೆ ನಾನೇ ಸಹಾಯನಾಗುವೆ
ನಾನೇ ನನ್ನ ಜೀವನವನ್ನು ಸಾರ್ಥಕ ಮಾಡುವೆ
ಕುಗ್ಗಿಸ ಬೇಡಿ ನನ್ನ ಆತ್ಮ ವಿಶ್ವಾಸ
ನನಗೆ ಬೇಕು ಕೇವಲ ನಿಮ್ಮ ಪ್ರೀತಿಯ ಸಹವಾಸ

Tuesday, November 22, 2011
Monday, November 21, 2011
ಅವನು ಯಾರು ?
ಅವನು ಯಾರು ?
ಅಪರಿಚಿತನಾಗಿದ್ದರು ಪರಿಚಿತನಾಗಿದ್ದ
ಹೀಗೆಯೇ ಒಂದು ದಿನ ಬೇಟಿ ಆಯಿತು
ಮಾತು ಮಾತಿನಿಂದ ಗೆಳೆತನ ಬೆಳೆಯಿತು
ಅವನು ಜ್ಞಾನಿ
ಕಂಡ ನನ್ನಲ್ಲಿದ್ದ ಕವಿಯನ್ನು
ಬರೆಯಲು ಪ್ರೋತ್ಸಾಹಿಸಿದ ನನ್ನನ್ನು
ಅವನಿಂದಲೇ ಹುಟ್ಟಿಸಿದೆ ನಾ ನನ್ನಲ್ಲಿದ್ದ ಕವಿಯನ್ನು
ನನ್ನ ಭಾವನೆಯನ್ನು ಮೆಚ್ಚಿದ
ನನ್ನ ಅಲ್ಪ ಅಕ್ಷರ ಜ್ಞಾನಕ್ಕೆ ಮುನಿಸಿದ
ಪದ್ಯ ಗದ್ಯದ ವ್ಯತ್ಯಾಸ ತಿಳಿಸಿದ
ಅವನಿಂದಲೇ ಕಲಿತೆ ನಾ ಬರೆಯಲು ಕವಿತೆಯನ್ನು
ಆದರೆ ಅವನು ಮುಂಗೋಪಿ
ಕೋಪ ಅವನ ಬ್ರಹ್ಮಾಸ್ತ್ರ
ಏನೋ ಮಾತಿಗೆ ಮಾತು ಬೆಳೆಯಿತು
ಕೋಪದಿಂದಲೇ ಗೆಳೆತನ ಅನಾಥವಾಯಿತು
ದೋಷವಿಲ್ಲದವರು ಈ ಜಗದಲ್ಲಿಲ್ಲ
ಮನುಜ ಮೂರ್ತಿ ಪ್ರಮಾದದ
ಈ ಕೋಪ ಕಾರಣವಿಲ್ಲದ
ನಾಲ್ಕು ದಿವಸದ ಜೀವನ ಎಂದು ಮರೆಯ ಬಾರದು

ಆತ್ಮ ಚಿಂತನ
ಹಾಸಿಗೆಯ ಮೇಲೆ ಒಂದು ಶವ
ಪ್ರಾಣ ಇಲ್ಲದ ಶರೀರ
ಭಾವರಹಿತ ಶಾಂತಚಿತ್ತ
ಆದರೆ ಅವನ ಆತ್ಮ ಇನ್ನೂ ಸಕ್ರಿಯ
ನೋಡುತ್ತಿದೆ ಎಲ್ಲ
ದೂರ ಇದ್ದವರು ಇಂದು ಹತ್ತಿರ ಇದ್ದರು
ಅವನನ್ನು ವರ್ಷಗಟ್ಟಲೆ ನೋಡದವರೂ ಇಂದು ಬಂದಿದ್ದರು
ಯಾಕೆ ಇವರೆಲ್ಲರೂ ಬಂದಿದ್ದಾರೆ ?
ಜೀವ ಇರುವಾಗ ನಾನವರಿಗೆ ಬೇಡವಾದೆ
ಇಂದು ನಾನು ಸತ್ತ ನಂತರ ಕಾಟ ಮುಗಿಯಿತು ಎಂದೇ ಬಂದಿದ್ದಾರೆ ?
ಅದರ ಮೇಲೆ ಎಲ್ಲರೂ ಅಳುತ್ತಿದ್ದಾರೆ
ಆಶ್ಚರ್ಯ, ಸುಳ್ಳ ಕಣ್ಣೀರ ಹರಿಸಿ ಏನನ್ನೂ ಬಯಸುತ್ತಿದ್ದಾರೆ
ನನ್ನವಳೂ ಅಳುತ್ತಿದ್ದಾಳೆ
ಅವಳಿಗೆ ಈಗ ಅವಳ ಹಾಗು ಮಕ್ಕಳ ಮುಂದಿನ ಜೀವನದ ಚಿಂತೆ
ಹೇಗೋ ನಾನು ಸುಖದಿಂದ ಅವರನ್ನು ಇಡುತ್ತಿದೆ ಅಲ್ಲ
ಅವಳನ್ನು ,ಮಕ್ಕಳನ್ನು ನೋಡಿ ಸತ್ತ ನನಗೂ ಬೇಸರವಾಗುತಿದೆ
ಅವಳಿಗೆ ಈಗ ದಾರಿ ಕಾಣದಾಗಿದೆ ಅಲ್ಲ
ಅವಳಿಗೆ ಈಗ ನನ್ನ ಮೌಲ್ಯ ತಿಳಿಯಿತಲ್ಲ
ನನ್ನನ್ನು ಪ್ರಯೋಜನ ಇಲ್ಲದವ ಎಂದು ಹೀಯಾಳಿಸುವಾಗ ಗೊತ್ತಾಗಲಿಲ್ಲವಲ್ಲ
ಅಮ್ಮ ಅಳುತ್ತಿದ್ದಾಳೆ
ಅವಳ ಅಶ್ರು ಸತ್ಯವಾಗಿದೆ
ಅವಳ ಹೃದಯದ ತುಂಡು ಇಂದು ಮೌನವಾಗಿದ್ದಾನೆ ಅಲ್ಲ
ಅವಳ ದುಃಖ ಕಂಡು ಸತ್ತ ನಾನೂ ಅಳುತ್ತಿದ್ದೇನೆ
ಅಮ್ಮ ನೀನು ನನ್ನಿಂದ ಏನು ಬಯಸಲಿಲ್ಲ
ನಿನ್ನ ಮಮತೆಯ ನಾನು ಋಣಿ
ನಿನ್ನ ಋಣ ತೀರಿಸಲು ಆಗಲಿಲ್ಲವಲ್ಲ

Sunday, November 20, 2011
ಯಾಕೆ ?
ತುತ್ತು ಅನ್ನಕ್ಕಾಗಿ ಪರದಾಡುವ ನನಗೆ
ಮುಪ್ಪು ಬರುವ ಚಿಂತೆ ಯಾಕೆ ?
ಸಮುದ್ರ ತಟದಲ್ಲಿ ನಿವಾಸ ಇದ್ದ ನನಗೆ
ಸುನಾಮಿ ಬರುವ ಹೆದರಿಕೆ ಯಾಕೆ ?
ತುಂಡು ಜೋಪಡಿಯಲ್ಲಿರುವ ನನಗೆ
ಭೂಕಂಪ ಆಗುವ ಭಯ ಯಾಕೆ ?
ಆಕಾಶದಂತ ಚಾವಣಿ ಇದ್ದ ನನಗೆ
ಮಳೆ ನೀರಿನ ಭೀತಿ ಯಾಕೆ ?
ಹರಿದ ಅಂಗಿ ಧರಿಸುವ ನನಗೆ
ಚಳಿಗಾಲದ ದಿಗಿಲು ಯಾಕೆ ?
ದಿನಾಲೂ ಸಾವಿರಾರು ಸರಿ ಸಾಯುವ ನನಗೆ
ಮೃತ್ಯುವಿನ ಗಾಬರಿ ಯಾಕೆ ?
by ಹರೀಶ್ ಶೆಟ್ಟಿ, ಶಿರ್ವ
Friday, November 18, 2011
ಏನು ಪ್ರಯೋಜನ
ಮುಳ್ಳ ಹಾದಿಯಲಿ ನಡೆದವನು
ಸುಳ್ಳ ಕಾರ್ಯ ಮಾಡಿದರೆ
ಏನು ಪ್ರಯೋಜನ
ಒಳ್ಳೆ ವೃತ್ತಿ ಮಾಡುವವನು
ಕೊಳ್ಳೆ ಹೊಡೆಯಲು ಹೋದರೆ
ಏನು ಪ್ರಯೋಜನ
ಮೊಲೆ ಹಾಲು ಕುಡಿದವನು
ಹೆತ್ತ ತಾಯಿಗೆ ಕಷ್ಟ ಕೊಟ್ಟರೆ
ಏನು ಪ್ರಯೋಜನ
ಧರ್ಮದ ಮಾತು ನುಡಿಯುವವನು
ಅಧರ್ಮ ಮಾಡಿದರೆ
ಏನು ಪ್ರಯೋಜನ
ಸಂಸಾರ ಇದ್ದವನು
ಕರ್ತವ್ಯ ಮರೆತು ಸನ್ಯಾಸಿ ಆದರೆ
ಏನು ಪ್ರಯೋಜನ
ದೇವರನ್ನು ನಂಬುವವನು
ಜಾತಿ ಧರ್ಮ ವಿಂಗಡಿಸಿದರೆ
ಏನು ಪ್ರಯೋಜನ
by ಹರೀಶ್ ಶೆಟ್ಟಿ, ಶಿರ್ವ
ಸುಳ್ಳ ಕಾರ್ಯ ಮಾಡಿದರೆ
ಏನು ಪ್ರಯೋಜನ
ಒಳ್ಳೆ ವೃತ್ತಿ ಮಾಡುವವನು
ಕೊಳ್ಳೆ ಹೊಡೆಯಲು ಹೋದರೆ
ಏನು ಪ್ರಯೋಜನ
ಮೊಲೆ ಹಾಲು ಕುಡಿದವನು
ಹೆತ್ತ ತಾಯಿಗೆ ಕಷ್ಟ ಕೊಟ್ಟರೆ
ಏನು ಪ್ರಯೋಜನ
ಧರ್ಮದ ಮಾತು ನುಡಿಯುವವನು
ಅಧರ್ಮ ಮಾಡಿದರೆ
ಏನು ಪ್ರಯೋಜನ
ಸಂಸಾರ ಇದ್ದವನು
ಕರ್ತವ್ಯ ಮರೆತು ಸನ್ಯಾಸಿ ಆದರೆ
ಏನು ಪ್ರಯೋಜನ
ದೇವರನ್ನು ನಂಬುವವನು
ಜಾತಿ ಧರ್ಮ ವಿಂಗಡಿಸಿದರೆ
ಏನು ಪ್ರಯೋಜನ
by ಹರೀಶ್ ಶೆಟ್ಟಿ, ಶಿರ್ವ
Thursday, November 17, 2011
ಚುಟುಕು
ನನ್ನ ಪ್ರೇಯಸಿಯ ದೇಹ ತುಂಬಾ ಮೃದುವಾಗಿದೆ
ನಿನ್ನಿಂದ ಅವಳಿಗೆ ಪೆಟ್ಟಾಗಬಹುದು
by ಹರೀಶ್ ಶೆಟ್ಟಿ, ಶಿರ್ವ
ಗೆಳೆಯ ಕೊಟ್ಟ
ಕೊನೆಯ ಸಂದೇಶವನ್ನು
"ಸತ್ತ ನಂತರವು
ಬಿಡಲಾರೆ ನಿನ್ನ ಬೆನ್ನು"
by ಹರೀಶ್ ಶೆಟ್ಟಿ, ಶಿರ್ವ
ಜೀವನ
ಏರು ತಗ್ಗುವ ಸಾಗರ ಅಲೆ
ಮೃತ್ಯು
ಆ ಅಲೆಗಳ ಬಲೆ
by ಹರೀಶ್ ಶೆಟ್ಟಿ ,ಶಿರ್ವ
ಯಾರು ನನ್ನವರು ಯಾರು ಪರಕೀಯರು
ಯಾರು ನನ್ನವರು
ಯಾರು ಪರಕೀಯರು
ಗುರುತಿಸುವುದು ಹೇಗೆ ?
ಕ್ಷಣದಲ್ಲಿ ಅವರು ಒಳ್ಳೆಯವರು
ಕ್ಷಣದಲ್ಲಿ ಅವರು ದುಷ್ಟರು
ಯಾರೂ ನಮ್ಮವರೆಂದು ಅರಿಯುವುದು ಹೇಗೆ ?
ರಕ್ತ ಸಂಬಂಧದಲ್ಲೂ ಹೊಂದಾಣಿಕೆಯ ಕೊರತೆ
ಅಪರಿಚಿತರ ಮೇಲೆ ಮೂಡುತ್ತದೆ ನಂಬಿಕೆ
ಇದರ ಕಾರಣ ಹುಡುಕುವುದು ಹೇಗೆ ?
ಮಿತ್ರರಿಂದ ಜಗಳವಾಗಿ ಉಂಟಾಗುತ್ತದೆ ಶತ್ರುತ್ವ
ಶತ್ರುವಿಂದ ಉಪಕಾರವಾಗಿ ತಿಳಿಯುತ್ತದೆ ಮಿತ್ರತ್ವ
ಜನರ ಸತ್ಯ ಅಸತ್ಯ ಪರಿಗಣಿಸುವುದು ಹೇಗೆ ?

Wednesday, November 16, 2011
ಜಾತ್ರೆಯಲ್ಲಿ ಜ್ಯೂಸ್
ಶ್ರೀಹರಿ ತನ್ನ ೧೧ ಮಿತ್ರರೊಂದಿಗೆ ಕಾರ್ಕಳದ ಜಾತ್ರೆ ನೋಡಲು ಹೋಗಿದ್ದ. ಅವನ ಮಿತ್ರರಲ್ಲಿ ಒಬ್ಬ ಸಾರನಾಥ್ ಎಂಬ ತುಂಟ ಹುಡುಗನಿದ್ದ.
ಹೀಗೆಯೇ ಎಲ್ಲರೂ ಜಾತ್ರೆಯಲ್ಲಿ ತಿರುಗುತ ಅಲ್ಲಿ ಇದ್ದ ಸಣ್ಣ ಸಣ್ಣ ಅಂಗಡಿಗಳನ್ನು ನೋಡುತ ಬರುವಾಗ, ಸಾರಾನಾಥ್ ಒಮ್ಮೆಲ್ಲೆ " ಬನ್ನಿ ಗೆಳೆಯರೇ, ಆ ಜ್ಯೂಸ್ ಅಂಗಡಿಯಲ್ಲಿ ಹೋಗಿ ಜ್ಯೂಸ್ ಕುಡಿಯೋಣ " .
ಇದಕ್ಕೆ ಸಾರನಾಥನ ಜಿಪುಣ ಸ್ವಭಾವ ಅರಿತ ಶ್ರೀಹರಿಯ ಇನ್ನೊಬ್ಬ ಮಿತ್ರ ಯೋಗೇಶ್ "ಹೇ ...ಕಣ್ಣಯ್ಯ ....ಎಲ್ಲರಿಗೆ ನೀನು ಜ್ಯೂಸ್ ಕುಡಿಸುತಿ ...ಏನೋ "
ಅದಕ್ಕೆ ಸಾರನಾಥ್ ನಗುತ " ಹುಂ....ಹೌದು ...ಬನ್ನಿ ಎಲ್ಲರೂ ಜ್ಯೂಸ್ ಕುಡಿಯಿರಿ, ನಾನು ಹಣ ಕೊಡುತ್ತೇನೆ, ಆದರೆ ಒಂದು ವಿಷಯ ಜ್ಯೂಸ್ ಕುಡಿದ ನಂತರ ನೀವು ಅಲ್ಲಿ ನಿಲ್ಲ ಬಾರದು, ಕೂಡಲೇ ಅಲ್ಲಿಂದ ಒಬ್ಬೊಬ್ಬರು ಕುಡಿದು ಅಲ್ಲಿಂದ ಹೋಗ ಬೇಕು "ಎಂದು ಹೇಳಿದ.
ಅವನು ಹೇಳಿದ ಮೇಲೆ ಎಲ್ಲ ಮಿತ್ರರು ಗುಂಪಾಗಿ ಹೋಗಿ ಜ್ಯೂಸ್ ಅಂಗಡಿಯವನಿಗೆ "ಜ್ಯೂಸ್ ಕೊಡಿ ಸ್ವಾಮಿ " ಎಂದು ಹೇಳಿ ಒಬ್ಬೊಬ್ಬರಾಗಿ ಜ್ಯೂಸ್ ಕುಡಿದು ಅಲ್ಲಿಂದ ಪಲಾಯನ ಮಾಡಿದರು.
ಕೊನೆಗೆ ಸಾರನಾಥ್ ಜ್ಯೂಸ್ ಕುಡಿದ ನಂತರ ಜ್ಯೂಸ್ ಅಂಗಡಿಯವನಿಗೆ "ಎಷ್ಟು ಹಣ ಸ್ವಾಮಿ" ಎಂದು ಕೇಳಿದ.
ಜ್ಯೂಸ್ ಅಂಗಡಿಯವ " ೧೨೦ ರೂಪಾಯಿ ಸಾರ್ "
ಅದಕ್ಕೆ ಸಾರನಾಥ್ "ಏನೋ ೧೨೦ ರೂಪಾಯಿ ಅಂತ ಹೇಳುತ್ತಿದ್ದಿಯಲ್ಲ, ನಾನು ಒಂದೇ ಜ್ಯೂಸ್ ಕುಡಿದದ್ದು ಮಹರಾಯ".
ಅದಕ್ಕೆ ಅಂಗಡಿಯವ "ಹೌದು ಸಾರ್, ಒಂದು ಜ್ಯೂಸ್ ಹತ್ತು ರೂಪಾಯಿ, ಒಟ್ಟಿಗೆ ಹನ್ನೆರಡು ಜ್ಯೂಸ್ ೧೨೦ ರೂಪಾಯಿ ಆಗುತ್ತದೆಯಲ್ಲ ಸಾರ್ ".
ಅದಕ್ಕೆ ಸಾರನಾಥ್ "ಏನೋ ಅವರ ಹಣ ನಾನೇಕೆ ಕೊಡಬೇಕು ಮಹರಾಯ, ಅವರೇನು ನನ್ನ ಮಾವನ ಮಕ್ಕಳ " ಎಂದು ಕೋಪದಿಂದ ನುಡಿದ.
ಅದಕ್ಕೆ ಜ್ಯೂಸ್ ಅಂಗಡಿಯವ "ಏನ್ ಸಾರ್, ಅವರು ನಿಮ್ಮೊಟ್ಟಿಗೆ ಬಂದದ್ದು ಅಲ್ಲವೇ "
ಸಾರನಾಥ್ " ನನ್ನೊಟ್ಟಿಗೆ ಬಂದದ್ದು ಅಂದರೆ ನಾನು ಹಣ ಕೊಡ ಬೇಕೇ, ಏನ್ ನೀವು ಹೇಳುವುದು ಸ್ವಾಮಿ " ಎಂದು ಬುಸುಗುಟ್ಟಿದ.
ಜ್ಯೂಸ್ ಅಂಗಡಿಯವ "ಆಗಲಿ ಸ್ವಾಮಿ , ನಿಮ್ ಹಣ ಕೊಡಿ, ಮೋಸ ಮಾಡಿ ಹೋದರು ಬೇವರ್ಸಿ ಹುಡುಗರು " ಎಂದು ಕೋಪದಿಂದ ನುಡಿದ.
ಸಾರನಾಥ ತನ್ನ ಒಬ್ಬನ ಹಣ ಕೊಟ್ಟು ನಗು ನಗುತ ಅಲ್ಲಿಂದ ಕಾಲು ತೆಗೆದ.
ಈ ಎಲ್ಲ ವಿಷಯ ಸಾರನಾಥ್ ನಂತರ ಶ್ರೀಹರಿ ಹಾಗು ಅನ್ಯ ಮಿತ್ರರಿಗೆ ಹೇಳಿದ್ದು., ಶ್ರೀಹರಿಗೆ ಏನೋ ಸಾರ ನಾಥ ಮಾಡಿದ್ದು ಸರಿ ಅಲ್ಲ ಎಂದು ಎನಿಸಿದರು ಅವನ ತುಟಿಯಲ್ಲಿ ಒಂದು ಕಿರು ನಗು ಮೂಡಿತು.
by ಹರೀಶ್ ಶೆಟ್ಟಿ, ಶಿರ್ವ
by ಹರೀಶ್ ಶೆಟ್ಟಿ, ಶಿರ್ವ
ಅವನಿಲ್ಲದೆ
ಅವನಿಲ್ಲದೆ...
ಈಗಲೂ
ಸೂರ್ಯೋದಯ ಆಗುತ್ತದೆ
ಮಂಜು ಮುಸುಕುತ್ತದೆ
ಹೂವು ಅರಳುತ್ತದೆ
ಹೇಗೋ ಹೊತ್ತು ಕಳೆಯುತ್ತದೆ
ಪಕ್ಷಿಗಳ ಸ್ವರ ಕೇಳುತ್ತದೆ
ಕೋಗಿಲೆ ಹಾಡುತ್ತದೆ
ಪಾತರಗಿತ್ತಿ ನಲಿಯುತ್ತದೆ
ಹೇಗೋ ದಿನ ಮುಗಿಯುತ್ತದೆ
ಆದರೆ ಅವನಿಲ್ಲದೆ....
ಜೀವನ ನೀರಸವಾಗಿದೆ
ಮನಸ್ಸಲ್ಲಿ ಉಲ್ಲಾಸ ಇಲ್ಲದಾಗಿದೆ
ನಿಸರ್ಗದ ಸೊಗಸು ಬಣ್ಣ ರಹಿತವಾಗಿದೆ
ಕಳೆಯುವ ಹೊತ್ತು ಭಾರಿಯಾಗಿದೆ
ಸ್ನೇಹಕ್ಕಿಂತ ಕೋಪ ಮೇಲಾಗಿದೆ
ಸತ್ಯಕ್ಕಿಂತ ಸುಳ್ಳು ಪ್ರಿಯವಾಗಿದೆ
ಪ್ರೀತಿಗಿಂತ ಅಹಂ ಬಿಗಿಯಾಗಿದೆ
ದಿನಗಳು ಹೀಗೆಯೇ ವ್ಯರ್ಥವಾಗುತ್ತಿದೆ
by ಹರೀಶ್ ಶೆಟ್ಟಿ, ಶಿರ್ವ
ಈಗಲೂ
ಸೂರ್ಯೋದಯ ಆಗುತ್ತದೆ
ಮಂಜು ಮುಸುಕುತ್ತದೆ
ಹೂವು ಅರಳುತ್ತದೆ
ಹೇಗೋ ಹೊತ್ತು ಕಳೆಯುತ್ತದೆ
ಪಕ್ಷಿಗಳ ಸ್ವರ ಕೇಳುತ್ತದೆ
ಕೋಗಿಲೆ ಹಾಡುತ್ತದೆ
ಪಾತರಗಿತ್ತಿ ನಲಿಯುತ್ತದೆ
ಹೇಗೋ ದಿನ ಮುಗಿಯುತ್ತದೆ
ಆದರೆ ಅವನಿಲ್ಲದೆ....
ಜೀವನ ನೀರಸವಾಗಿದೆ
ಮನಸ್ಸಲ್ಲಿ ಉಲ್ಲಾಸ ಇಲ್ಲದಾಗಿದೆ
ನಿಸರ್ಗದ ಸೊಗಸು ಬಣ್ಣ ರಹಿತವಾಗಿದೆ
ಕಳೆಯುವ ಹೊತ್ತು ಭಾರಿಯಾಗಿದೆ
ಸ್ನೇಹಕ್ಕಿಂತ ಕೋಪ ಮೇಲಾಗಿದೆ
ಸತ್ಯಕ್ಕಿಂತ ಸುಳ್ಳು ಪ್ರಿಯವಾಗಿದೆ
ಪ್ರೀತಿಗಿಂತ ಅಹಂ ಬಿಗಿಯಾಗಿದೆ
ದಿನಗಳು ಹೀಗೆಯೇ ವ್ಯರ್ಥವಾಗುತ್ತಿದೆ
by ಹರೀಶ್ ಶೆಟ್ಟಿ, ಶಿರ್ವ
Tuesday, November 15, 2011
ಬಯಕೆ
ನನಗೆ ಸೂರ್ಯನಾಗುವ ಬಯಕೆ
ಜಗತ್ತನ್ನು ಬೆಳಗಿಸುವ ಸೂರ್ಯನಂತೆ
ಪರೋಪಕಾರದ ಸಂಕಲ್ಪ ಮಾಡಿ
ನನ್ನ ಬಾಳ ಬೆಳಕನ್ನು ಎಲ್ಲರಲ್ಲೂ ಹಂಚುವೆ
ನನಗೆ ಚಂದ್ರನಾಗುವ ಬಯಕೆ
ತನ್ನ ಆಕಾರ ಬದಲಾಯಿಸುವ ಚಂದ್ರನಂತೆ
ನನ್ನ ಅಗತ್ಯಗಳನ್ನು ನಿರ್ಲಕ್ಷಿಸಿ ಕಡಿಮೆ ಮಾಡಿ
ಅನ್ಯರ ಜೀವನದ ಹುಣ್ಣಿಮೆಯ ಚಂದ್ರನಾಗುವೆ
ನನಗೆ ಮಲ್ಲಿಗೆ ಹೂವು ಆಗುವ ಬಯಕೆ
ಸುಗಂಧ ಹರಡುವ ಬಿಳಿ ಮಲ್ಲಿಗೆಯಂತೆ
ನಾನೂ ನನ್ನ ಹೃದಯ ನಿರ್ಮಲ ಮಾಡಿ
ಅನ್ಯರ ಜೀವನದಲಿ ಪರಿಮಳ ಬೀರುವೆ
ನನಗೆ ಗುಲಾಬಿ ಹೂವು ಆಗುವ ಬಯಕೆ
ಮುಳ್ಳ ಒಟ್ಟಿಗೆ ಬದುಕುವ ಗುಲಾಬಿಯಂತೆ
ನಾನೂ ನನ್ನ ದುಷ್ಟ ವಿಚಾರಗಳನ್ನು ಕಡೆಗಣಿಸಿ
ನನ್ನ ಒಳ್ಳೆಯ ಭಾವನೆಗಳನ್ನು ಚೆಲ್ಲುವೆ
by ಹರೀಶ್ ಶೆಟ್ಟಿ, ಶಿರ್ವ
Monday, November 14, 2011
ಸ್ವಾಮಿ
ಅವನ ಹೆಸರು ಸ್ವಾಮಿ ಅಂತ, ೬೦ರ ಹರೆಯದ ಅವನು ಎಲ್ಲಿಂದ ಬಂದನೋ, ಎಲ್ಲಿಯವನು ಎಂದು ಯಾರಿಗೂ ಗೊತ್ತಿರಲಿಲ್ಲ, ಸ್ವಾಮಿಗೆ ಸಂಬಂಧಿಕರು ಅಂತ ಯಾರೂ ಇರಲಿಲ್ಲ, ಕೆಲವರು ಅವನು ತಮಿಳ್ ನಾಡಿನವ ಅಂತ ಹೇಳುತ್ತಿದ್ದರು.
ಸ್ವಾಮಿ ಹೀಗೆಯೇ ಅಲ್ಲಿ ಇಲ್ಲಿ ಬಿದ್ದು ಇರುತ್ತಿದ್ದ, ಹರಕು ಬಟ್ಟೆ, ಕುರುಚಲು ಗಡ್ಡ, ಮನಸ್ಸು ಬಂದರೆ ಸ್ನಾನ ಇಲ್ಲಾದರೆ ಇಲ್ಲ, ಅವನಿಗೆ ಯಾವುದೂ ಚಿಂತೆ ಅಂತ ಇರಲಿಲ್ಲ, ಸಿಕ್ಕಿದರೆ ಉಂಡ ಇಲ್ಲದ್ರೆ ಹಾಗೆಯೇ ಮಲಗಿ ಬಿಟ್ಟ, ಸ್ವಾಮಿ ತುಂಬಾ ಸ್ವಾಭಿಮಾನಿ ಅಂತ ಹೇಳಬಹುದು, ಅವನು ಯಾವಾಗಲು ಯಾರ ಹತ್ತಿರ ಏನೂ ಕೇಳುತ್ತಿರಲಿಲ್ಲ.
ಶ್ರೀಹರಿಯ ತಂದೆ ಅವರ ಹೋಟೆಲಲ್ಲಿ ಸ್ವಾಮಿಗೆ ಏನಾದರೂ ಕೆಲಸ ಕೊಟ್ಟು ಅವನ ಹೊಟ್ಟೆ ಪಾಡಿಗಾಗಿ ವ್ಯವಸ್ತೆ ಮಾಡುತ್ತಿದ್ದರು, ಆದರೆ ಸ್ವಾಮಿಯ ಒಂದು ಕೆಟ್ಟ ಅವ್ಯಾಸ ಅಂದರೆ ಹೆಂಡ ಕುಡಿಯುವುದು, ಅವನ ಹತ್ತಿರ ಹಣ ಬಂದರೆ ಸರಿ ಅವನು ಹೆಂಡ ಕುಡಿದು ಬಂದು ಮೂರು ಮೂರು ನಾಲ್ಕು ನಾಲ್ಕು ದಿವಸ ಬಿದ್ದಿರುತ್ತಿದ್ದ, ಶ್ರೀಹರಿಯ ತಂದೆ ಅದಕ್ಕೆ ಅವನಿಗೆ ಹಣ ಕೊಡಲು ಹೆದರುತ್ತಿದ್ದರು.
ಸ್ವಾಮಿಗೆ ಶ್ರೀಹರಿ ಅಂದರೆ ತುಂಬಾ ಇಷ್ಟ, ಯಾವಾಗಲು ಶ್ರೀಹರಿಯನ್ನು ನೋಡಿ ಅವನು ಸಂತೋಷ ಪಡುತ್ತಿದ್ದ, ಶ್ರೀಹರಿಯ ತಂದೆ ಸ್ವಾಮಿಗೆ ಶ್ರೀಹರಿಯನ್ನು ಶಾಲೆಗೆ ಬಿಡಲು ಹಾಗು ಕರೆದು ಕೊಂಡು ಬರುವ ಜವಾಬ್ದಾರಿ ಕೊಟ್ಟಿದ್ದರು, ಈ ಒಂದು ಕೆಲಸ ಸ್ವಾಮಿ ತುಂಬಾ ಚೆನ್ನಾಗಿ ಮಾಡುತ್ತಿದ್ದ, ಶ್ರೀಹರಿಯ ಮೇಲೆ ಇದ್ದ ಅವನ ಪ್ರೀತಿಯೇ ಇದಕ್ಕೆ ಕಾರಣವಾಗಿರಬಹುದು, ಅವನು ಯಾವಗಲೋಮ್ಮೆ ಶ್ರೀಹರಿಗೆ ತಿನ್ನಲು ಏನಾದರೂ ಕೊಡುತಾ ಇದ್ದ, ಶ್ರೀಹರಿಗೂ ಸ್ವಾಮಿ ಅಂದರೆ ತುಂಬಾ ಇಷ್ಟ.
ಒಂದು ದಿವಸ ಸ್ವಾಮಿ ಶ್ರೀಹರಿಯ ತಂದೆಯ ಹತ್ತಿರ ಬಂದು ಹಣ ಕೇಳಿದ, ತಂದೆಯವರು ಇನ್ನೂ ಇವನಿಗೆ ಹಣ ಕೊಟ್ಟರೆ ಇವನು ಹೆಂಡ ಕುಡಿದು ಬಿದ್ದಿರುತ್ತಾನೆ ಎಂದು ಕೊಡಲು ನಿರಾಕರಿಸಿದರು, ಅದಕ್ಕೆ ಸ್ವಾಮಿ ಮೊದಲ ಸರಿ ತಂದೆ ಹತ್ತಿರ ಕೋಪದಿಂದ ಮಾತನಾಡಿದ, ಇದರಿಂದ ಶ್ರೀಹರಿಯ ತಂದೆಗೆ ಬೇಜಾರಾಗಿ ಅವನಿಗೆ ಅವನು ಕೆಲಸ ಮಾಡಿದ ಲೆಕ್ಕ ಮಾಡಿ ಅವನಿಗೆ ಸಂಬಳ ಕೊಟ್ಟರು.
ಇದರ ನಂತರ ಹಲವು ದಿನ ಸ್ವಾಮಿ ಕಾಣಲಿಲ್ಲ, ಜನರು ಅವನು ಎಲ್ಲೊ ಬಿದ್ದು ಸತ್ತಿರಬೇಕೆಂದು ಅನುಮಾನಿಸಿದರು, ಆದರೆ ತುಂಬಾ ದಿವಸದ ನಂತರ ಸ್ವಾಮಿ ಪುನಃ ಹಾಜರಾದ, ಈಗ ಅವನ ಅವಸ್ತೆ ಇನ್ನು ಹಾಳಗಿತ್ತು, ಹರಕು ಬಟ್ಟೆ ವಾಸನೆಯಿಂದ ಅವನ ಸಮೀಪ ಹೋಗಲಾಗುತ್ತಿರಲಿಲ್ಲ, ಈ ಸಲ ಬಂದವನು ಅವನು ಶ್ರೀಹರಿಯ ತಂದೆಯ ಹೋಟೆಲಿಗೂ ಹೋಗಲಿಲ್ಲ, ಆದರೆ ಅವನು ಶ್ರೀಹರಿ ಇರುವ ಬಿಲ್ಡಿಂಗಲ್ಲಿದ್ದ ಮೀಟರ್ ರೂಮಿನ ಬದಿಯಲ್ಲಿ ಬಂದು ಬಿದ್ದಿದ್ದ, ಶ್ರೀಹರಿಯ ತಂದೆಯೂ ಕೋಪದಲ್ಲಿದ್ದ ಕಾರಣ ಅವನ ಹತ್ತಿರ ಮಾತನಾಡಲು ಹೋಗಲಿಲ್ಲ, ಅವನೂ ಮಾತನಾಡಲಿಲ್ಲ.
ಆ ದಿವಸ ಶ್ರೀಹರಿ ಶಾಲೆಯಿಂದ ಬರುವಾಗ ಸ್ವಾಮಿಯನ್ನು ತನ್ನ ಬಿಲ್ಡಿಂಗನಲ್ಲಿ ನೋಡಿ, ಅವನನ್ನು ಕಂಡು ಸಂತೋಷ ಪಟ್ಟ ಹಾಗು ಸ್ವಾಮಿಯನ್ನು ಕುರಿತು " ಅರೆ ಸ್ವಾಮಿ....ತುಮ್ ಆ ಗಯಾ " (ಅರೆ ...ಸ್ವಾಮಿ ನೀ ಬಂದಿಯಾ ) ಎಂದು ಕೇಳಿದ. ವಿಚಿತ್ರ ಏನೆಂದರೆ ಸ್ವಾಮಿ ಶ್ರೀಹರಿಯನ್ನು ನೋಡಿಯು ಪ್ರತಿಕ್ರಿಯಿಸಲಿಲ್ಲ ಹಾಗು ಹೂಂ ಅಂತ ಅವನನ್ನು ಹೆದರಿಸಿ ಓಡಿಸಿಬಿಟ್ಟ, ಶ್ರೀಹರಿ ಸ್ವಾಮಿಯ ವ್ಯವಹಾರದಿಂದ ಆಹಾತನಾಗಿ ಅಳುತಲ್ಲೇ ಮನೆಗೆ ಬಂದ, ಮನೆಗೆ ಬಂದು ಅವನು ಅಮ್ಮನ ಹತ್ತಿರ ಎಲ್ಲ ವಿಷಯ ಹೇಳಿ ಅಳುತ್ತಲೇ ಕೇಳಿದ " ಅಮ್ಮ ಸ್ವಾಮಿ ದ್ಯಾಗ್ ಇಂಚ ಮಲ್ಪುನು (ಅಮ್ಮ ಸ್ವಾಮಿ ಏಕೆ ಹೀಗೆ ಮಾಡುತ್ತಾನೆ ), ಅಮ್ಮ ಅದಕ್ಕೆ "ಆಯೇ ಇತ್ತೇ ಬತ್ತಿನತಾ , ಆಯಾಗ್ ಬೊಕ್ಕ ಯಾನ್ ಕೇನುವೆ" (ಅವನು ಈಗ ಬಂದನಲ್ಲ ಅವನಿಗೆ ನಂತರ ನಾನು ಕೇಳುತ್ತೇನೆ ) ಎಂದು ಸಮಾಧಾನ ಹೇಳಿದರು.
ಆದರೆ ಶ್ರೀಹರಿಯ ಅಮ್ಮಳಿಗೆ ಸ್ವಾಮಿಗೆ ಕೇಳುವ ಅವಕಾಶ ಸಿಗಲಿಲ್ಲ, ಮಾರನೆ ದಿವಸ ಸ್ವಾಮಿ ಇಹಲೋಕ ತ್ಯಜಿಸಿ ಮೃತ್ಯುಗೆ ಶರಣಾಗಿದ್ದ, ಬಿಲ್ಡಿಂಗನವರು ಬಂದು ಶ್ರೀಹರಿಯ ತಂದೆಗೆ ಈ ಸುದ್ದಿ ಕೊಟ್ಟಿದರು ಹಾಗು ಈಗ ಏನೂ ಮಾಡುವುದು ಎಂದು ಕೇಳಿದರು, ಶ್ರೀಹರಿಯ ತಂದೆ "ಅವನ ಅಂತ್ಯ ಸಂಸ್ಕಾರದ ಎಲ್ಲ ಖರ್ಚು ನಾನು ಕೊಡುತ್ತೇನೆ, ನೀವು ಅದರ ಸ್ವಲ್ಪ ನೋಡಿ ಕೊಳ್ಳಿ" ಎಂದು ಅವರಿಗೆ ಹೇಳಿದರು, ಅಲ್ಲೇ ಇದ್ದ ಶ್ರೀಹರಿಗೆ ಈ ಸುದ್ದಿ ಕೇಳಿ ಕಣ್ಣಿನಿಂದ ನೀರು ಹರಿಯಿತು ಹಾಗು ಅಮ್ಮನನ್ನು ಅಪ್ಪಿ ಬಿಕ್ಕಿ ಬಿಕ್ಕಿ ಅತ್ತ .

ಮಗು ಶ್ರೀಹರಿಯ ಆಟ
ಶ್ರೀಹರಿ ಮುದ್ದು ಮಗುವಾಗಿದ್ದಾಗ ನಡೆದ ಒಂದು ಪ್ರಸಂಗ.
ಶ್ರೀಹರಿಯ ತಾಯಿಗೆ ಒಂದು ದಿವಸ ಮದುವೆಗೆ ಹೋಗಲಿಕ್ಕಿತ್ತು, ಬೆಳ್ಲಿಗೆಯಿಂದ ಬೇಗ ಬೇಗ ಕೆಲಸ ಮುಗಿಸಿ ಶ್ರೀಹರಿಯನ್ನು ಸ್ನಾನ ಮಾಡಿಸಿ ಪೌಡರ್ ಹಚ್ಚಿ ಅವರು ಅವನನ್ನು ಆಡಲು ಬಿಟ್ಟು, ಅವರು ಮದುವೆಗೆ ಹೋಗಲು ಸಿಧ್ಧರಾಗುತ್ತಿದ್ದರು.
ಅವರು ಮನೆಯಲ್ಲಿದ್ದ ದೊಡ್ಡ ಗೋದ್ರೇಜ್ ಕಂಪನಿಯ ಕಪಾಟಿನಿಂದ ಜರಿಯ ಸೀರೆ ತೆಗೆದು ಅದನ್ನು ಧರಿಸಿ, ತನ್ನ ಶೃಂಗಾರ ಮುಗಿಸಿ ಕಪಾಟು ಮುಚ್ಚಿದರು, ಸ್ವಲ್ಪ ಸಮಯ ಕನ್ನಡಿಯಲ್ಲಿ ತನ್ನನ್ನೇ ದಿಟ್ಟಿಸಿದ ನಂತರ ನೋಡಿದರೆ ಶ್ರೀಹರಿ ಕಾಣಿಸುತಾ ಇಲ್ಲ. ಅವರು ಮನೆ ಎಲ್ಲ ಮನೆ ಹುಡುಕಿದರು, "ಶ್ರೀಹರಿ, ಶ್ರೀಹರಿ " ಎಂದು ಕರೆದರೂ ಅವನು ಇಲ್ಲ .
ಅವರು ಮನೆಯ ಹೊರಗೆ ಹೋಗಿ ನೋಡಿದರು ಅಲ್ಲಿಯೂ ಇಲ್ಲ, ಈಗ ಅವರು ಅಳಲು ಶುರು ಮಾಡಿದರು, ಈಗ ಎಲ್ಲ ನೆರೆಹೊರೆಯವರು ಒಟ್ಟಾಗಿ ಬಂದು ಹುಡುಕಲು ಪ್ರಾರಂಬಿಸಿದರು, ಆದರೆ ಅವನ ಪತ್ತೆ ಇಲ್ಲ.
ಶ್ರೀಹರಿಯ ಅಮ್ಮ ಅಳುತ್ತಲೇ ಪುನಃ "ಶ್ರೀಹರಿ, ಶ್ರೀಹರಿ" ಎಂದು ಬೊಬ್ಬೆ ಹಾಕಲು ಶುರು ಮಾಡಿದರು, ಆಗ ಅವರಿಗೆ "ಅಮ್ಮ,ಅಮ್ಮ" ಎಂದು ಶ್ರೀಹರಿಯ ಕರೆಯುವ ಶಬ್ದ ಕೇಳಿ ಬಂತು, ಎಲ್ಲರಿಗೂ ಆಶ್ಚರ್ಯ ಎಲ್ಲಿಂದ ಶಬ್ದ ಬರುವುದೆಂದು, ಎಲ್ಲರೂ ಪುನಃ ಹುಡುಕಲು ಪ್ರಾರಂಬಿಸಿದರು, ಆದರೆ ಎಲ್ಲೂ ಇಲ್ಲ, "ಅಮ್ಮ,ಅಮ್ಮ" ಎಂಬ ಅವನು ಕರೆಯುವ ಸ್ವರ ಕೇಳಿ ಬರುತ್ತದೆ, ಆದರೆ ಅವನು ಎಲ್ಲಿಯೂ ಕಾಣುವುದಿಲ್ಲ.
ಎಲ್ಲರೂ ಚಿಂತೆಯಿಂದ ಜೋರು ಜೋರಿನಿಂದ ಅಳುತ್ತಿದ್ದ ಶ್ರೀಹರಿಯ ಅಮ್ಮಳಿಗೆ ಸಮಾಧಾನ ಹೇಳುತ್ತಿದ್ದರು, ಆಗ ಅವರಿಗೆ ಕಪಾಟನ್ನು ಬಡಿಯುವ ಶಬ್ದ ಕೇಳಿ ಬಂದು, "ಅಮ್ಮ,ಅಮ್ಮ" ಎಂಬ ಸ್ವರ ಪುನಃ ಕೇಳಿ ಬಂತು. ಶ್ರೀಹರಿಯ ಅಮ್ಮ ಓಡಿ ಹೋಗಿ ಕಪಾಟಿನ ಬಾಗಿಲು ತೆರೆದು ನೋಡಿದರೆ ಒಳಗೆ ಶ್ರೀಹರಿ ನಗುತ ಅಮ್ಮಳನ್ನು ನೋಡಿ " ಅಮ್ಮ ಉಳಾಯಿ ಮಜಾ (ಅಮ್ಮ ಒಳಗೆ ಮಜಾ)" ಎಂದು ಮುದ್ದಾಗಿ ಹೇಳಿದ, ಎಲ್ಲರು ಜೋರಾಗಿ ನಕ್ಕರು, ಅವಸರದಲ್ಲಿ ಶ್ರೀಹರಿಯ ಅಮ್ಮಳಿಗೆ ಯಾವಾಗ ಅವನು ಕಪಾಟಿನ ಒಳಗೆ ಹೋಗಿ ನುಗ್ಗಿದ ಎಂದು ತಿಳಿಯದೆ ಅವರು ಕಪಾಟನ್ನು ಮುಚ್ಚಿ ಕೊಂಡಿದ್ದರು, ಶ್ರೀಹರಿಯ ಅಮ್ಮ ಅಳುತ್ತಲೇ ಶ್ರೀಹರಿಯನ್ನು ಅಪ್ಪಿ ಮುದ್ದಿಸುತ್ತಿದ್ದರು.

Sunday, November 13, 2011
ಒಂದು ಅನೇಕ
ಒಂದು ಬದುಕು ಅನೇಕ ಆಸೆಗಳು
ಒಂದು ದೇವರು ಅನೇಕ ಹೆಸರುಗಳು
ಒಂದು ಮುಖ ಅನೇಕ ವೇಷಗಳು
ಒಂದು ಹೃದಯ ಅನೇಕ ಭಾವನೆಗಳು
ಒಂದು ಘಟನೆ ಅನೇಕ ಪ್ರತಿಕ್ರಿಯೆಗಳು
ಒಂದು ವಿಶ್ವ ಅನೇಕ ದೇಶಗಳು
ಒಂದು ವಾಣಿ ಅನೇಕ ಭಾಷೆಗಳು
ಒಂದು ರಕ್ತ ಅನೇಕ ಧರ್ಮ,ಜಾತಿಗಳು
ಒಂದು ಸಮುದ್ರ ಅನೇಕ ತಟಗಳು
ಒಂದು ಸೂರ್ಯ ಅನೇಕ ಕಿರಣಗಳು
ಒಂದು ಚಂದ್ರ ಅನೇಕ ರೂಪಗಳು
ಒಂದು ಅಮ್ಮ ಅನೇಕ ತ್ಯಾಗಗಳು
ಕಡೆಗೆ .....
ಒಂದು ಹರೀಶ್ ಅನೇಕ ಲೇಖನಗಳು :):):)
by ಹರೀಶ್ ಶೆಟ್ಟಿ, ಶಿರ್ವ
ಒಂದು ದೇವರು ಅನೇಕ ಹೆಸರುಗಳು
ಒಂದು ಮುಖ ಅನೇಕ ವೇಷಗಳು
ಒಂದು ಹೃದಯ ಅನೇಕ ಭಾವನೆಗಳು
ಒಂದು ಘಟನೆ ಅನೇಕ ಪ್ರತಿಕ್ರಿಯೆಗಳು
ಒಂದು ವಿಶ್ವ ಅನೇಕ ದೇಶಗಳು
ಒಂದು ವಾಣಿ ಅನೇಕ ಭಾಷೆಗಳು
ಒಂದು ರಕ್ತ ಅನೇಕ ಧರ್ಮ,ಜಾತಿಗಳು
ಒಂದು ಸಮುದ್ರ ಅನೇಕ ತಟಗಳು
ಒಂದು ಸೂರ್ಯ ಅನೇಕ ಕಿರಣಗಳು
ಒಂದು ಚಂದ್ರ ಅನೇಕ ರೂಪಗಳು
ಒಂದು ಅಮ್ಮ ಅನೇಕ ತ್ಯಾಗಗಳು
ಕಡೆಗೆ .....
ಒಂದು ಹರೀಶ್ ಅನೇಕ ಲೇಖನಗಳು :):):)
by ಹರೀಶ್ ಶೆಟ್ಟಿ, ಶಿರ್ವ
Saturday, November 12, 2011
ಪ್ರೀತಿ ಸೋತ ನಂತರ
ಪ್ರೀತಿ ಸೋತ ನಂತರ
ಉಳಿಯಲಿಲ್ಲ ಏನೂ ಹತ್ತಿರ
ಕೇವಲ ತುಂಡು ಹೃದಯ
ದುಃಖ ಏರಿದೆ ಎತ್ತರ
ಮತಿಗೆಟ್ಟ ಅವಸ್ಥೆ
ಕಂಡು ಕಾಣದಾಗಿದೆ ರಸ್ತೆ
ತಾಣದ ಇಲ್ಲ ಗೋಚರ
ಹಗಲಲ್ಲಿಯು ಜೀವನ ನಿಶಾಚರ
ನಿದ್ದೆ ಕೋಪದಲ್ಲಿದೆ
ಹಸಿವೆ ಮುಸ್ಕರದಲ್ಲಿದೆ
ಮನೆ ಕತ್ತಲೆಯಲ್ಲಿದೆ
ಮನಸ್ಸು ಅಮಲಲ್ಲಿದೆ
ಸುಪ್ತ ಭಾವನೆಗಳು
ಒಣಗಿದ ಕಣ್ಣೀರುಗಳು
ಆತ್ಮ ಇಲ್ಲದ ಶರೀರ
ಜೀವ ಮರಣದ ತೀರ
by ಹರೀಶ್ ಶೆಟ್ಟಿ, ಶಿರ್ವ
ಉಳಿಯಲಿಲ್ಲ ಏನೂ ಹತ್ತಿರ
ಕೇವಲ ತುಂಡು ಹೃದಯ
ದುಃಖ ಏರಿದೆ ಎತ್ತರ
ಮತಿಗೆಟ್ಟ ಅವಸ್ಥೆ
ಕಂಡು ಕಾಣದಾಗಿದೆ ರಸ್ತೆ
ತಾಣದ ಇಲ್ಲ ಗೋಚರ
ಹಗಲಲ್ಲಿಯು ಜೀವನ ನಿಶಾಚರ
ನಿದ್ದೆ ಕೋಪದಲ್ಲಿದೆ
ಹಸಿವೆ ಮುಸ್ಕರದಲ್ಲಿದೆ
ಮನೆ ಕತ್ತಲೆಯಲ್ಲಿದೆ
ಮನಸ್ಸು ಅಮಲಲ್ಲಿದೆ
ಸುಪ್ತ ಭಾವನೆಗಳು
ಒಣಗಿದ ಕಣ್ಣೀರುಗಳು
ಆತ್ಮ ಇಲ್ಲದ ಶರೀರ
ಜೀವ ಮರಣದ ತೀರ
by ಹರೀಶ್ ಶೆಟ್ಟಿ, ಶಿರ್ವ
ಮೊದಲ ಟೆಲಿಫೋನ್(ದೂರವಾಣಿ)
ಶ್ರೀಹರಿಯ ಊರಿನ ಸಾಹುಕಾರರ ಮನೆಯಲ್ಲಿ ಊರಿನ ಮೊದಲ ಟೆಲಿಫೋನ್(ದೂರವಾಣಿ) ಬಂದಿತ್ತು.
ಆ ದಿವಸ ಶ್ರೀಹರಿಯ ಶಾಲೆಯಲ್ಲಿ ವಿಜ್ಞಾನ ಮಾಷ್ಟ್ರು ಟೆಲಿಫೋನ್(ದೂರವಾಣಿ) ಬಗ್ಗೆ ಮಕ್ಕಳಿಗೆ ತಿಳಿಸಿ "ನಾಳೆ ನಾವು ಸಾಹುಕಾರರ ಮನೆಗೆ ನಿಮೆಗೆಲ್ಲರಿಗೆ ಫೋನ್ ನೋಡಲು ಕೊಂಡು ಹೋಗುತಾ ಇದ್ದೇವೆ, ಎಲ್ಲ ಮಕ್ಕಳು ತಪ್ಪದೆ ನಾಳೆ ಬೆಳ್ಳಿಗೆ ೧೦ ಗಂಟೆಗೆ ಹಾಜರಾಗಿ" ಎಂದು ಹೇಳಿದರು.
ಎಲ್ಲ ಮಕ್ಕಳಿಗೆ ಸಂತೋಷವೇ ಸಂತೋಷ, ಎಲ್ಲರು ಫೋನ್ ನೋಡಲು ಉತ್ಸುಕರಾಗಿದ್ದರು, ಶ್ರೀಹರಿಯು ತುಂಬಾ ಉತ್ಸುಕನಾಗಿದ್ದ.
ಮಾರನೆ ದಿವಸ ಎಲ್ಲ ಮಕ್ಕಳು ೧೦ ಗಂಟೆಗೆ ಶಾಲೆಯ ಗ್ರೌಂಡ್ ಲ್ಲಿ ಸೇರಿದರು. ವಿಜ್ಞಾನ ಮಾಷ್ಟ್ರು ಎಲ್ಲ ಮಕ್ಕಳನ್ನು ಸಾಲು ಸಾಲಾಗಿ ನಿಲ್ಲಿಸಿ ನಂತರ "ನೀವೆಲ್ಲರೂ ನನ್ನ ಹಿಂದೆ ಹಿಂದೆ ಬನ್ನಿ" ಎಂದು ಹೇಳಿದರು.
ಮಕ್ಕಳೆಲ್ಲರು ನಡೆಯುತ್ತಲೇ ಪಕ್ಕದ ಮೂಲೆಯಲ್ಲಿದ ಸಾಹುಕಾರರ ಮನೆಗೆ ಬಂದರು. ಸಾಹುಕಾರರು ಅವರ ಅಂಗಳದಲ್ಲಿ ಆರಾಮವಾಗಿ ಕೂತು ಕೊಂಡು ಚಹಾದ ಒಟ್ಟಿಗೆ ವಾರ್ತಾ ಪತ್ರಿಕೆ ಓದುತ್ತಿದ್ದರು.
ಅವರನ್ನು ಕಂಡು " ಒಹ್ ಮಾಷ್ಟ್ರೆ ...ಬನ್ನಿ ಬನ್ನಿ , ಈ ಫೋನ್ ಬಂದ ದಿವಸದಿಂದ ಒಂದು ಗಳಿಗೆ ಪುರುಸೊತ್ತು ಇಲ್ಲರಿ, ಯಾರದರೊಂದು ಬರುತ್ತಲೇ ಇದ್ದಾರೆ ಇದನ್ನು ನೋಡಲು, ನೀವೂ ಬನ್ನಿ , ಆದರೆ ಒಂದು ವಿಷಯ ಅದನ್ನು ಯಾರೂ ಮುಟ್ಟ ಬಾರದು, ಈ ಮಕ್ಕಳಿಗೆ ಮೊದಲೇ ಹೇಳಿ" ಎಂದು ಸಾಹುಕಾರರು ಮೊದಲೇ ಎಚ್ಚರಿಸಿದರು.
ಅದಕ್ಕೆ ಮಾಷ್ಟ್ರು "ಆಯಿತು ಸಾಹುಕಾರರೇ, ಆದರೆ ಒಂದು ನಿವೇಧನೆ ಈ ಮಕ್ಕಳ ನಾಯಕಲಾದ ಯಶೋದ ಅವಳಿಗೆ ಮಾತ್ರ ಸ್ವಲ್ಪ ರಿಸಿವರ್ ಎತ್ತಿ "ಹಲೋ " ಎಂದು ಹೇಳಲು ಬಿಡ ಬೇಕೆಂದು ವಿನಂತಿ " ಎಂದು ಕೇಳಿದರು.
ಅದಕ್ಕೆ ಸಾಹುಕಾರರು "ಆಗಲಿ ಆದರೆ ಬೇರೆ ಯಾರೂ ಮುಟ್ಟುವಂತಿಲ್ಲ, ಜಾಗ್ರತೆ ವಹಿಸಿ" ಎಂದು ಹೇಳಿದರು .
ಮಾಷ್ಟ್ರು ನಮಗೆ ನೋಡಿ "ನೀವು ಯಾರೂ ಫೋನ್ ಮುಟ್ಟ ಬಾರದು, ದೂರದಿಂದಲೇ ನೋಡಿ ಬರಬೇಕು , ಯಶೋದ ನಿನಗೆ ಕೇವಲ ಫೋನಿನ ರಿಸಿವರ್ ಎತ್ತಿ ನೀ "ಹಲೋ" ಎಂದು ಹೇಳ ಬಹುದು, ನೀ ಮುಂದೆ ಬಾ" ಎಂದು ಹೇಳಿದರು.
ಯಶೋದ ಸಾಲಿನ ಮುಂದೆಯೇ ಇದ್ದಳು, ಅವರೆಲ್ಲರೂ ಸಾಹುಕಾರರ ಮನೆಯ ಒಳಗೆ ಹೋದರು. ಮನೆ ತುಂಬಾ ಸುಂದರವಾಗಿತ್ತು, ಎಲ್ಲ ವಸ್ತುಗಳನ್ನು ಶಿಸ್ತಿನಿಂದ ಇಟ್ಟಿದರು, ಫೋನ್ ಒಂದು ಟೇಬಲ್ ಮೇಲೆ ಇಟ್ಟಿದರು, ಕಪ್ಪು ಬಣ್ಣದ ಫೋನಿನ ಮೇಲೆ ಬಹಳ ಸುಂದರವಾದ ಬಟ್ಟೆಯ ಕವರ್ ಹಾಕಿದರು.
ಮಾಷ್ಟ್ರು "ಯಶೋದ ಬಾ ಮುಂದೆ , ಯಶೋದ ಮುಂದೆ ಬಂದು ಟೆಲಿಫೋನ್ ಹತ್ತಿರ ಹೋಗಿ ಬಹಳ ಖುಷಿಯಿಂದ ಅದರ ರಿಸಿವರ್ ಎತ್ತಿ "ಹಲೋ" ಎಂದು ಹೇಳಿದಳು, ಅವಳಿಗೆ ಸಂತೋಷವೇ ಸಂತೋಷ, ಎಲ್ಲ ಮಕ್ಕಳು ಅವಳನ್ನು ಆಶ್ಚರ್ಯ ಹಾಗು ಮತ್ಸರದಿಂದ ನೋಡುತ್ತಿದ್ದರು, ಅವರಿಗೆ ಫೋನ್ ಮುಟ್ಟಲಿಕ್ಕೆ ಸಿಗುದಿಲ್ಲ ಎಂದೇನೋ, ಇದರ ನಂತರ ಇತರ ಮಕ್ಕಳೆಲ್ಲರೂ ಸಾಲು ಸಾಲಾಗಿ ಹೋಗಿ ಫೋನ್ ನೋಡಿ ನೋಡಿ ಬಂದರು, ಶ್ರೀಹರಿಯು ನೋಡಿ ಬಂದ.
ಮೊದಲ ಸಲ ಫೋನ್ ನೋಡಿ ಬಂದ ನಂತರ ಎಲ್ಲ ಮಕ್ಕಳಿಗೆ ಒಂದು ಹೊಸ ಅನುಭವ ಒಟ್ಟಿಗೆ ಸಂತೋಷ.

Thursday, November 10, 2011
ಸತ್ಯ ಸುಳ್ಳು
ಯಾರನ್ನು ನಂಬುವುದು
ಯಾರನ್ನು ದೂರುವುದು
ಸತ್ಯ ಇಂದು ಇಲ್ಲದಿದ್ದರೆ
ನಾಳೆ ಹೊರ ಬೀಳುವುದು
ಕಟ್ಟಿದ ಮನೆಯಲ್ಲಿ ಹೋಗಿ ನೀ ಇರುವೆ
ತನ್ನ ಮನೆಯೆಂದು ನೀ ಹೆಮ್ಮೆಯಿಂದ ಹೇಳುವೆ
ಒಂದಲ್ಲ ಒಂದು ದಿವಸ ಈ ಮನೆ ಬಿಳಲಿದೆ
ಹೊಸ ಕಟ್ಟಡ ನಿರ್ಮಾಣ ಆಗಲಿದೆ
ನೀನೇಕೆ ಬೇರೆಯವರ ಮುಖವನ್ನು ಹೊರುವೆ
ಅವರ ನಂಬಿಕೆಯನ್ನು ಕಳೆಯುವೆ
ಸುಳ್ಳು ಸತ್ಯವನ್ನು ನುಂಗಲಾರದು
ಸತ್ಯದ ಪತಾಕೆ ಎಂದಿಗೂ ಬೀಳಲಾರದು
ಮನುಜನಿಂದ ತಪ್ಪು ಆಗುವುದು ಸಹಜ
ತಪ್ಪು ಮಾಡಿಯೂ ವಾದಿಸುವವನು ನಿರ್ಲಜ
ಮುಳ್ಳ ಸೇತುವೆಯಲ್ಲಿ ಯಾರೂ ನಡೆಯಲಾರರು
ಕೊಳೆತ ರಕ್ತ ಹರಿದ ನಂತರ ಗಾಯ ಒಣಗಲಾರದು
by ಹರೀಶ್ ಶೆಟ್ಟಿ, ಶಿರ್ವ
Wednesday, November 9, 2011
ನೀನು ಬಿಟ್ಟು ಹೋದ ನಂತರ
ನೀನು ಬಿಟ್ಟು ಹೋದ ನಂತರ
ನಾನು ಕವಿಯಾದೆ
ಪ್ರೀತಿಸುವೆ ನಿನ್ನನ್ನು ಎಂದು ಹೇಳಲು
ವರುಷ ವರುಷ ನಾ ಕಳೆದೆ
ಇಂದು ನಾ ಪದಗಳ ದಾಸನಾದೆ
ಮಳೆಯ ಹನಿಯಲಿ ನೆನೆದು
ನಿನ್ನ ಒಟ್ಟಿಗೆ ನದಿಯನ್ನು ದಾಟಿದ ನೆನಪು
ಇಂದು ಸ್ವತಹ ಕಣ್ಣೀರ ಕಡಲಾದೆ
ಹಸಿರು ಬಯಲಲ್ಲಿ ಅಳೆದು
ನಿನ್ನ ಒಟ್ಟಿಗೆ ಮರದ ಅಡಿಯಲ್ಲಿ ಸಮಯ ಕಳೆದು
ಇಂದು ನಾನು ಒಣಗಿದ ಬಯಲಾದೆ
ನಿನ್ನ ರೂಪ ಗುಣವನ್ನು ಮೆಚ್ಚಿ ನಾ ನನ್ನನ್ನೇ ಮರೆತೆ
ಮಧ್ಯೆ ಹಾದಿಯಲಿ ನೀನು ನನ್ನನ್ನು ಬಿಟ್ಟು ಹೋದೆ
ಇಂದು ನೀನು ಕೇವಲ ನನ್ನ ಕವಿತೆಯಲ್ಲಿಯೇ ಉಳಿದೆ

Tuesday, November 8, 2011
ತಂಬಿ
ತಂಬಿ
---------
ಶ್ರೀಹರಿಗೆ ಸಿನಿಮಾ ನೋಡುವ ತುಂಬಾ ಚಟ, ವಾರದಲ್ಲಿ ೨/೩ ಸಿನಿಮಾ ನೋಡದಿದ್ದರೆ ಅವನಿಗೆ ಏನೋ ಕಳೆದಂತೆ ಆಗುತ್ತಿತ್ತು.
ಶ್ರೀಹರಿಯ ತಂದೆ ಹೋಟೆಲ್ ನಡೆಸುತ್ತಿದ್ದರು, ಶ್ರೀಹರಿ ತಂದೆಯ ಒತ್ತಾಯಕ್ಕೆ ದಿವಸಕ್ಕೊಮ್ಮೆ ಅಲ್ಲಿ ಹೋಗಿ ಬಲು ಹಾಜರಿ ನೀಡಿ ಬರುತ್ತಿದ್ದ, ಶ್ರೀಹರಿಯ ತಂದೆಯ ಹೋಟೆಲಲ್ಲಿ ಒಬ್ಬ ಹೊಸ ತಮಿಳ್ ಹುಡುಗ ಚಹಾ ಮಾಡುವ ಕೆಲಸ್ಸಕ್ಕೆ ಸೇರಿದ, ಎಲ್ಲರೂ ಅವನನ್ನು ತಂಬಿ ಎಂದು ಕರೆಯುತ್ತಿದ್ದರು.
ಆ ಹುಡುಗನಿಗೂ ತಮಿಳ್ ಸಿನಿಮಾ ಅಂದರೆ ಪಂಚ ಪ್ರಾಣ, ಹಿಂದಿ ಸಿನಿಮಾವೂ ನೋಡುತ್ತಿದ್ದ, ಶ್ರೀಹರಿ ಬಂದ ಕೂಡಲೇ ಅವನಿಗೆ ಶ್ರೀಹರಿಯ ಹತ್ತಿರ ಸಿನಿಮಾದ ಬಗ್ಗೆ ಮಾತನಾಡುವುದೇ ಕೆಲಸ, ಆ ಹುಡುಗ ತಮಿಳ್ ನಟ ಎಂ.ಜಿ.ರಾಮಚಂದ್ರನ್ ಅವರ ಬಹಳ ದೊಡ್ಡ ಅಭಿಮಾನಿ, ಬಹಳ ದೊಡ್ಡ ಭಕ್ತನೆಂದು ಹೇಳ ಬಹುದು, ವಿಚಿತ್ರ ಏನೆಂದರೆ ಅವನು ಅವನ ಪೆಟ್ಟಿಗೆಯಲ್ಲಿ ಎಂ.ಜಿ.ರಾಮಚಂದ್ರನ್ ಅವರ ಫೋಟೋ ಇಟ್ಟು ಅವರಿಗೆ ದಿನಾಲೂ ನಾಲ್ಕಾಣೆಯ ಹೂವಿನ ಮಾಲೆ ಹಾಕಿ ಪೂಜಿಸುತ್ತಿದ್ದ.
ಅವಾಗ ಮಾಟುಂಗ ಮುಂಬೈಯಲ್ಲಿ ಸಿಟಿ ಲೈಟ್ ಎಂಬ ಹಳೆ ಸಿನಿಮಾ ಮಂದಿರ ಇತ್ತು, ಅಲ್ಲಿ ಬೆಳ್ಲಿಗೆಯ ಶೋ ದಲ್ಲಿ ಎಂ.ಜಿ.ರಾಮಚಂದ್ರನ್ ಅವರ ಸಿನಿಮಾ ಬಂದರೆ ವಾರದ ೭ ದಿವಸ ಅವನಿಗೆ ಬೆಳ್ಳಿಗೆ ಲೇಟ್ ಡ್ಯೂಟಿ ಕೊಡಬೇಕೆಂದು ತಂಬಿ ಕೆಲಸ ಸೇರುವ ಮುಂಚೆಯೇ ಶ್ರೀಹರಿಯ ತಂದೆ ಹತ್ತಿರ ಷರತ್ತು ಇಟ್ಟಿದ, ಶ್ರೀಹರಿಯ ತಂದೆ ಕೆಲಸಕ್ಕೆ ಜನ ಸಿಗದ ಕಾರಣ ಆ ಷರತ್ತಕ್ಕೆ ಒಪ್ಪಿದರು ಹಾಗು ಅವನ ಎಂ.ಜಿ.ರಾಮಚಂದ್ರನ್ ಮೇಲೆ ಇರುವ ಭಕ್ತಿಯನ್ನು ಅರಿತು ಎಂ.ಜಿ.ರಾಮಚಂದ್ರನ್ ಸಿನಿಮಾ ಬಂದರೆ ಹೇಗಾದರೂ ಹೊಂದಿಸಿ ನಡೆಯುತ್ತಿದ್ದರು.
ಹೀಗೆಯೇ ಒಂದು ದಿವಸ ಶಾಲೆಯಿಂದ ಬಂದ ನಂತರ ಶ್ರೀಹರಿ ಹೋಟೆಲಿಗೆ ಹೋದ, ಅಲ್ಲಿ ಡ್ಯೂಟಿ'ಯಲ್ಲಿ ತಂಬಿ ಇರಲಿಲ್ಲ, ಅವನು ಅವನ ತಂದೆ ಹತ್ತಿರ ತಂಬಿಯ ಬಗ್ಗೆ ಕೇಳಿದ, ತಂದೆ "ಆಯೇ ಡ್ಯೂಟಿ'ಡ್ ಇಜ್ಜೆ, ಉಳಯಿ ಬುಲ್ಪೊಂದು ಉಲ್ಲೇ "(ಅವನು ಡ್ಯೂಟಿಯಲ್ಲಿಲ್ಲ, ಒಳಗೆ ಅಳುತ್ತಿದ್ದಾನೆ ).
ಶ್ರೀಹರಿ ಆಶ್ಚರ್ಯದಿಂದ "ದ್ಯಾಗ್'? (ಯಾಕೆ?). ಅದಕ್ಕೆ ಅವನ ತಂದೆ "ಆಯೇ ಎಂ.ಜಿ.ರಾಮಚಂದ್ರನ್ ತೀರ್ ಪೋಯೇತಾ...ಆಯ್ಕ " (ಅವ ಎಂ.ಜಿ.ರಾಮಚಂದ್ರನ್ ಸತ್ತನಲ್ಲ, ಅದಕ್ಕೆ ).
ಅವರ ಮಾತು ಕೇಳಿ ಶ್ರೀಹರಿ ಒಳಗೆ ಸ್ಟಾಫ್ ರೂಂಗೆ ಓಡಿದ, ಅಲ್ಲಿ ತಂಬಿ ಎಂ.ಜಿ.ರಾಮಚಂದ್ರನ್ ಅವರ ಫೋಟೋ ಎದುರಲ್ಲಿ ಕೂತುಕೊಂಡು ದುಃಖಿ ದುಃಖಿಸಿ ಅಳುತ್ತಿದ್ದ, ಶ್ರೀಹರಿಯನ್ನು ನೋಡಿ ಇನ್ನು ಜೋರು ಜೋರಲ್ಲಿ ಅಳಲಾರಂಭಿಸಿದ, ಶ್ರೀಹರಿಗೆ ಅವನಿಗೆ ಹೇಗೆ ಸಮಾಧಾನ ಹೇಳಲಿ ಎಂದು ತೋಚಲಿಲ್ಲ, ಆದರೂ ಅವನು ಸ್ವಲ್ಪ ಸಮಯ ಅವನ ಬದಿಯಲ್ಲಿ ಕುಳಿತು ಹಿಂತಿರುಗಿದ.
ಇದರ ನಂತರ ೧೫ ದಿವಸ ತಂಬಿ ಕೆಲಸ ಮಾಡದೆ ಹೀಗೆಯೇ ದುಃಖದಲ್ಲಿ ಬಿದ್ದಿದ್ದ , ಶ್ರೀಹರಿಯ ತಂದೆ ಕಡೆಗೆ ಸೋತು ಅವನನ್ನು ಅವನ ಊರಿಗೆ ಕಳುಹಿಸಿದರು.

ಹುಲ್ಲು ಮಂಜಿನ ಮಿಲನ
ಹಸಿರು ಹುಲ್ಲ ಮೇಲೆ
ಮಂಜಿನ ಹನಿಗಳ ನರ್ತನ
ಆದರೆ ಅವುಗಳ ಬಾಳು ಕೆಲವೇ ಕ್ಷಣ
ಭಾಗ್ಯದ ಅನನ್ಯ ಪ್ರೇಮ ಬಂಧನ
ಹುಲ್ಲಿಗೆ ಕೊಡುತಿವೆ ಜೀವನ
ಸುಂದರ ಅದ್ಭುತ ವಿಲಕ್ಷಣ
ಹುಲ್ಲಿಗೆ ಆನಂದ ಉಲ್ಲಾಸ ಉತ್ತೇಕನ
ಮಂಜಿನ ಅಲ್ಪಾವಧಿಯ ಮಿಲನ
ಅಪ್ಪಿ ತಬ್ಬಿ ಹೆಚ್ಚು ಗಳಿಗೆ ಒಟ್ಟಿಗೆ ಇರುವ ಮನ
ಸೂರ್ಯನ ಬಿಸಿಲ ತ್ವರೆತನ
ಹುಲ್ಲು ಮಂಜಿಗೆ ಕಂಪನ
ಎಷ್ಟು ಕಷ್ಟದಾಯಕ ಈ ವಿಚ್ಛೇದನ

Monday, November 7, 2011
ಸಾಧಾರಣ ಪ್ರೇಮಿ
ನಾನು ರಾಮನಲ್ಲ
ಆದರೂ ಸೀತೆಯಂತೆ ನಿನ್ನಿಂದ ಅಗ್ನಿ ಪರೀಕ್ಷೆ ಮಾಡಿಸಲಾರೆ
ನಾನು ಕೃಷ್ಣನಲ್ಲ
ಆದರೂ ರಾಧೆಯಂತೆ ನಿನ್ನನ್ನು ವಿರಹ ಅಗ್ನಿಯಲ್ಲಿ ಸುಡಲು ಬಿಡಲಾರೆ
ನಾನು ಯುಧಿಷ್ಟರನಲ್ಲ
ಆದರೂ ದ್ರೌಪದಿಯನ್ನು ಜೂಜಿನಲ್ಲಿ ಸೋತಂತೆ ನಾ ನಿನ್ನನ್ನು ಸೋಲಲಾರೆ
ನಾನೊಬ್ಬ ಸಾಧಾರಣ ಪ್ರೇಮಿ
ನಿನ್ನ ಪ್ರೀತಿಗಾಗಿ ನಾ ಯಾವುದೂ ಪರೀಕ್ಷೆ ಕೊಡಲು ಸಿದ್ಧ
ನಿನ್ನ ಪ್ರೀತಿಯ ಜಾಲದಲಿ ಇಡಿ ಜೀವನ ನಿನ್ನ ವಶದಲ್ಲಿರಲು ಸಿದ್ಧ
ನಿನ್ನ ಪ್ರೀತಿಯಲಿ ತನ್ನನ್ನು ತಾನೇ ಸೋಲಲು ಸಿದ್ದ

Saturday, November 5, 2011
ಆಮೆ ಮರಿ
ಶ್ರೀಹರಿ ರಜೆಯಲ್ಲಿ ಊರಿಗೆ ಹೋಗಿದ್ದ, ಆಗ ಅವನಿಗೆ ೧೧ ವರ್ಷದ ವಯಸ್ಸು, ಅವನಿಗೆ ಊರಿನ ವಾತಾವರಣ ತುಂಬಾ ಹಿಡಿಸಿತು. ಮಾವಿನ ಮರದ ಕೆಳಗೆ ಹಣ್ಣನ್ನು ಹೆಕ್ಕಿ ತರುವುದು, ಊರೆಲ್ಲ ಅಲೆಯುವುದು ಅವನಿಗೆ ಹಾಗು ಇತರ ಮಕ್ಕಳಿಗೆ ಇಡಿ ದಿವಸ ಇದೇ ಕೆಲಸ.
ಹೀಗೆಯೇ ಒಂದು ದಿವಸ ಮನೆ ತೋಟದಲಿ ಅಲೆಯುವಾಗ ಅವರಿಗೆ ಅಲ್ಲಿ ಒಂದು ಆಮೆ ಮರಿ ಸಿಕ್ಕಿತು. ಮಕ್ಕಳಿಗೆ ಖುಷಿಯೇ ಖುಷಿ, ಶ್ರೀಹರಿ ಮತ್ತು ಅವನ ಚಿಕ್ಕಮನ ಮಗ ಆನಂದ ಇಬ್ಬರು ಅದನ್ನು ಮನೆಗೆ ತಂದರು.
ಆಗ ಅಲ್ಲಿಯೇ ಮನೆಯಲ್ಲಿ ಬಂದ ಊರಿನ ಸೊಂತು ಪರ್ಬುಲು ನಮ್ಮ ಕೈಯಲ್ಲಿ ಅಮೇ ಮರಿಯನ್ನು ನೋಡಿ "ವಾಹ....ವೋಲ್ತು ಕಂತಿನಿಯ ನಿಗುಲ್ ಉಂದೆನ್ನ್ "(ಎಲ್ಲಿಂದ ತಂದಿರಿ ನೀವು ಇದನ್ನು).
ಶ್ರೀಹರಿ "ಅವ್ವು ತೊಟೋಡು ತಿಕ್ಕಿನಿ"(ಅದು ತೋಟದಲಿ ಸಿಕ್ಕಿತು) ಎಂದು ಹೇಳಿದ.
ಅದಕ್ಕೆ ಅವರು "ಯೇ ಉಂದೆನ್ನ್ ಎನ್ಕ್ ಕೊರ್ಲೆಯಾ , ಲಾಯಕ್ ಆಯ್ತಾ ಸಾರ್ ಮಲ್ಪುವೆ, ಉಂದು ಭಾರಿ ರುಚಿ ಆಪುಂಡು " (ಯೇ ,ಇದನ್ನು ನನಗೆ ಕೊಡಿ ನಾನು ಇದರ ಸಾರ್ ಮಾಡುತ್ತೇನೆ, ಇದು ತುಂಬಾ ರುಚಿ ಆಗುತ್ತದೆ ).
ಅದಕ್ಕೆ ಅವರು "ಇಜ್ಜಿ ಇಜ್ಜಿ ಯೆಂಕುಲ್ ಕೊರ್ಪಿಜಾ" (ಇಲ್ಲ ಇಲ್ಲ ನಾವು ಕೊಡುವುದಿಲ್ಲ) ಎಂದು ಹೇಳಿ ಓಡಿ ಹೋದರು.
ಈಗ ಅವರಿಬ್ಬರಿಗೆ ಹೆದರಿಕೆ, ಸೊಂತು ಪರ್ಬುಲು ಇದನ್ನು ಕದ್ದು ತೆಗೊಂಡು ಹೋಗುತ್ತಾರೆ ಹಾಗು ಅದನ್ನು ತಿಂದು ಬಿಡುತ್ತಾರೆ ಎಂದು. ಏನೂ ಮಾಡುವುದು ಈಗ, ಎಲ್ಲಿ ಇದನ್ನು ಅಡಗಿಸಿ ಇಡುವುದು.
ಆಗ ಅವರಿಗೆ ಅಲ್ಲೇ ಇದ್ದ ದೊಡ್ಡ ಮಡಕೆ ಕಂಡಿತು, ಅದು ಅವರ ಸ್ನಾನ ಗೃಹದಲ್ಲಿ ಇತ್ತು , ಅದರಿಂದ ನೀರು ತೆಗೆದು ಎಲ್ಲರೂ ಸ್ನಾನ ಮಾಡುತ್ತಿದ್ದರು. ಅದರಲ್ಲಿ ನೀರು ತುಂಬಾ ಇತ್ತು. ಅಮೆ ಜಲಚರ ಪ್ರಾಣಿ ಎಂದು ಅವರಿಗೆ ಗೊತ್ತಿತ್ತು, ಅದರಿಂದ ಇದು ಒಳ್ಳೆ ಜಾಗ ಇದನ್ನು ಅಡಗಿಸುವದಕ್ಕೆ ಎಂದು ಅವರು ಆಮೆಯನ್ನು ಆ ಮಡಕೆಯ ಒಳಗೆ ಬಿಟ್ಟರು, ಆಮೆ ಮೆಲ್ಲ ಮೆಲ್ಲ ಈಜಲು ಆರಂಭಿಸಿತು. ಈಗ ಅವರಿಗೆ ಸಮಾಧಾನ ಇನ್ನು ಏನು ತೊಂದರೆ ಇಲ್ಲ, ರಾತ್ರಿ ಕಳೆದ ನಂತರ ಇದನ್ನು ಇಡಲಿಕ್ಕೆ ಬೆಳ್ಳಿಗೆ ಏನಾದರು ಬೇರೆ ಉಪಾಯ ಮಾಡಬಹುದು ಎಂದು ವಿಚಾರ ಮಾಡಿ ಅವರು ಅಲ್ಲಿಂದ ಮನೆಗೆ ಬಂದರು.
ರಾತ್ರಿಗೆ ಶ್ರೀಹರಿಯ ಚಿಕ್ಕಮ ಸ್ನಾನಕ್ಕೆ ಎಂದು ಸ್ನಾನ ಗೃಹಕ್ಕೆ ಬಂದರು, ಅದು ಚಳಿಯ ಸಮಯ, ಅದರಿಂದ ಅವರು ಮಡಕೆಯಲ್ಲಿ ನೀರು ಮುಟ್ಟಿ ನೋಡಿದರು ತುಂಬಾ ತಂಪಾಗಿತ್ತು, ಅವರು ಆ ನೀರು ಕುದಿಸಲು ಮಡಕೆಯ ಕೆಳಗೆ ಕಟ್ಟಿಗೆ ಇಟ್ಟು ಅದಕ್ಕೆ ಬೆಂಕಿ ಹಚ್ಚಿದ್ದರು, ಇದು ಮಕ್ಕಳಿಗೆ ತಿಳಿಯದ ವಿಷಯ, ಅವರು ನೀರು ಬಿಸಿ ಮಾಡಿ ಚೆನ್ನಾಗಿ ಸ್ನಾನ ಮಾಡಿ ಬಂದರು.
ಮಾರನೆ ದಿವಸ ಶ್ರೀಹರಿ ಮತ್ತು ಆನಂದ ಮುಂಜಾನೆ ಎದ್ದ ಕೂಡಲೇ ಸ್ನಾನ ಗೃಹಕ್ಕೆ ಬಂದು ನೋಡಿದರೆ, ಪಾಪ ಮೂಕ ಜೀವಿಯ ಜೀವನ ಮುಗಿದಿತ್ತು, ಅವರಿಗೆ ಆದ ದುಃಖಕ್ಕೆ ಮಿತಿಯೇ ಇರಲಿಲ್ಲ, ಅವರು ಅಳುತ್ತಲೇ ಮನೆಗೆ ಬಂದು ಈ ವಿಷಯ ಎಲ್ಲರ ಮುಂದೆ ಹೇಳಿದರು, ಆಗ ಚಿಕ್ಕಮ್ಮ ತಾನು ಗೊತ್ತಿಲ್ಲದೇ ಮಾಡಿದ ಆಮೆ ಹತ್ಯೆಗೆ ನೊಂದು ಕೊಂಡರು ಹಾಗು "ಅವ್ವೆ ನೀರ್ ವಾಸನೆ ಬರೊಂದು ಇತ್ತಂಡ್"(ಅದಕ್ಕೆ ನೀರು ವಾಸನೆ ಬರುತ್ತಿತ್ತು). ಆಗ ಎಲ್ಲರೂ ನಕ್ಕಿದೆ ನಕ್ಕಿದು, ಆದರೆ ಶ್ರೀಹರಿ ಹಾಗು ಆನಂದನ ಮುಖ ದುಃಖದಿಂದ ತುಂಬಿತ್ತು.

Friday, November 4, 2011
ಸತ್ತ ಕೋಳಿ
ಇವತ್ತು ಶ್ರೀಹರಿಯ ಜನ್ಮ ದಿವಸ. ಆಫೀಸ್ ಗೆ ಹೊರಟುವಾಗ ಅವನ ಅಮ್ಮ "ಸಂಜೆಗೆ ಬರುವಾಗ ಮಾರ್ಕೆಟ್ ಹೋಗಿ ಕೋಳಿ ತಾ, ಇವತ್ತು ನಿನ್ನ ಜನ್ಮ ದಿವಸ ಅಲ್ಲವೇ" ಎಂದು ಹೇಳಿದರು.
ಶ್ರೀಹರಿ "ಆಯಿತು ಅಮ್ಮ " ಎಂದು ಹೇಳಿ ಹೊರಟ.
ಶ್ರೀಹರಿ ಒಂದು ಸಣ್ಣ ಆಫೀಸ್ ಲಿ ಸಾಧಾರಣ ಕ್ಲಾರ್ಕ್ ಆಗಿದ, ಹೆಚ್ಚೇನೂ ಸಂಬಳ ಬರುತ್ತಿರಲಿಲ್ಲ, ಹೇಗೋ ಮನೆ ಖರ್ಚು ತೆಗೆದು ದಿನ ದೂಡುತಿದ್ದ.
ಸಂಜೆ ಆಫೀಸ್ ಮುಗಿದ ಮೇಲೆ ಶ್ರೀಹರಿ ಅಮ್ಮ ಹೇಳಿದ ಹಾಗೆ ಕೋಳಿ ತರಲು ಮಾರ್ಕೆಟ್ ಗೆ ಹೋದ. ಕೋಳಿಯ ಅಂಗಡಿಯಲಿ ಕೋಳಿಯ ಕ್ರಯ ನೋಡಿ ಶ್ರೀಹರಿಗೆ ದಿಗಿಲು ಬಡಿದಂತಾಯಿತು, ೧೨೦ ರೂಪಾಯಿ ಒಂದು ಕೆ. ಜಿ. ಶ್ರೀಹರಿ ಮೆಲ್ಲನೆ ತನ್ನ ಕಿಸೆ ತಪಾಸಿದ, ಕೇವಲ ೭೫ ರೂಪಾಯಿ ಇತ್ತು ಅವನ ಹತ್ತಿರ, ತಿಂಗಳಿನ ಕೊನೆ ದಿವಸ ಹಣ ಮುಗಿಯುತ್ತಾ ಬಂದಿತ್ತು, ಆದರೆ ಕೋಳಿ ತೆಗೊಂಡು ಹೋಗದಿದ್ದರೆ ಅಮ್ಮನ ತಾಯಿ ಮನಸ್ಸಿಗೆ ನೋವಾಗುದಿಲ್ಲವೇ ಎಂದು ಎನಿಸಿ ಕೋಳಿ ಅಂಗಡಿಯವನ ಹತ್ತಿರ "ಏನು ಸ್ವಾಮಿ , ಇವತ್ತು ಇಷ್ಟು ರೇಟ್"?
"ಏನು ಮಾಡುವುದು ಸರ್, ಕೋಳಿಯ ಶೋರ್ಟೇಜ್ ನಡೆಯುತ್ತ ಇದೆ, ಸಪ್ಲೈ ಕಮ್ಮಿ ಆಗಿದೆ" ಎಂದು ಹೇಳಿದ.
ಇನ್ನು ಏನು ಮಾಡುವುದು ಎಂದು ವಿಚಾರ ಮಾಡುತ್ತಲೇ ಶ್ರೀಹರಿಯ ಧ್ಯಾನ ಅಲ್ಲೇ ಅಂಗಡಿಯ ಒಳಗೆ ಬಿದ್ದಿದ ಒಂದು ಕೋಳಿಯ ಮೇಲೆ ಹೋಯಿತು, ಅವನು ಅಂಗಡಿಯವನಿಗೆ "ಇದೇನು ಸ್ವಾಮಿ ಆ ಕೋಳಿ ಹೀಗೆಯೇ ಬಿದ್ದಿದೆ".
ಅದಕ್ಕೆ ಅವನು " ಅದು ಸತ್ತ ಕೋಳಿ ಸರ್ ಅದನ್ನು ಕಡಿಮೆ ಕ್ರಯದಲ್ಲಿ ಕೂಲಿ ಕೆಲಸ ಮಾಡುವವರು ತೆಗೊಂಡು ಹೋಗುತ್ತಾರೆ, ಏನು ಮಾಡುದು ಸರ್ , ಈಗ ವ್ಯಾಪಾರದಲ್ಲಿ ಏನೂ ಲಾಭ ಇಲ್ಲ ಸರ್".
ಶ್ರೀಹರಿ "ಒಹ್ ...ಹಾಗೆಯೇ " ಎಂದು ವಿಚಾರ ಮಾಡುತಾ, ಸತ್ತ ಕೋಳಿಯನ್ನು ತಿನ್ನುತ್ತಾರೆಯೇ " ಎಂದು ಕೇಳಿದ.
ಅದಕ್ಕೆ ಅಂಗಡಿಯವನು "ಅದರಲ್ಲೇನಿದೆ ಸರ್, ಈ ಬಡ ಕೂಲಿ ಕೆಲಸ ಮಾಡುವವರ ಹತ್ತಿರ ಹಣ ಎಲ್ಲಿ, ಹೆಂಡ ಕುಡಿದ ನಂತರ ಎಲ್ಲವೂ ನಡೆಯುತ್ತದೆ "
ಅವನ ಮಾತು ಕೇಳಿ ಶ್ರೀಹರಿ ವಿಚಾರದಲ್ಲಿ ಬಿದ್ದ "ನಾನೇಕೆ ಈ ಕೋಳಿಯನ್ನು ತೆಗೆದು ಕೊಂಡು ಹೋಗ ಬಾರದು, ನಾನೂ ಬಡವನೇ ಅಲ್ಲವೇ ".
ಶ್ರೀಹರಿ ಸ್ವಲ್ಪ ನಾಚಿಗೆಯಿಂದಲೇ ಅಂಗಡಿಯವನಿಗೆ "ಸ್ವಾಮಿ ಈ ಕೋಳಿ ನನಗೆ ಕೊಡುತ್ತೀರಾ, ಎಷ್ಟು ಹಣ ಕೊಡ ಬೇಕು?
ಅಂಗಡಿಯವ "ಸರ್, ನಿಮಗೆಯೇ ? ಎಂದು ಆಶ್ಚರ್ಯದಿಂದ ಕೇಳಿದ .
ಶ್ರೀಹರಿ ಅದಕ್ಕೆ "ಅದೇನಂದರೆ ನಮ್ಮ ಮನೆಯಲ್ಲೂ ಕೂಲಿ ಕೆಲಸ ಮಾಡುವವರು ಬಂದಿದ್ದಾರೆ, ಅವರಿಗೆ ಕೊಡುತ್ತೇನೆ? ಎಂದು ಸುಳ್ಳು ಹೇಳಿದ.
ಅಂಗಡಿಯವ "ಅಗಲಿ ಸರ್, ೩೦ ರೂಪಾಯಿ ಕೊಡಿ , ಹೇಗೋ ನಷ್ಟ".
ಶ್ರೀಹರಿಗೆ ಖುಷಿ ಆಯಿತು "ಹಾಗಾದರೆ ಅದನ್ನು ಕಟ್ ಮಾಡಿ ಕೊಡಿ ಸ್ವಾಮಿ".
ಅಂಗಡಿಯವ ಆ ಸತ್ತ ಕೋಳಿ ಕಟ್ ಮಾಡಿ ಕೊಟ್ಟ.
ಶ್ರೀಹರಿ ವಿಚಾರ ಮಾಡಿದ "ಕೆಲಸವೂ ಆಯಿತು, ಲಾಭವೂ ಆಯಿತು".
ಶ್ರೀಹರಿ ಬೇಗನೆ ಮನೆ ತಲುಪಲೆಂದು ಬೇಗ ಬೇಗನೆ ಹೆಜ್ಜೆ ತೆಗೆದ, ನಡೆಯುತ್ತಲೇ ಹೋಗುತ್ತಿದ್ದಂತೆ ಅವನ ಮನಸ್ಸಲ್ಲಿ ತಳಮಳ ಉಂಟಾಯಿತು "ನಾನು ಇದು ಮಾಡುವುದು ಸರಿಯೇ , ಪಾಪ ಸತ್ತ ಕೋಳಿಯನ್ನು ತಿನ್ನುವುದು ಪಾಪವಲ್ಲವೇ, ಅಮ್ಮನಿಗೆ ಹೇಳಿದರೆ ಅವಳು ಏನೂ ಹೇಳಬಹುದು. ಅವಳಿಗೆ ಎಷ್ಟು ದುಃಖವಾಗ ಬಹುದು, ಅವಳಿಗೆ ಹೇಳದೆ ಅವಳು ಇದನ್ನು ತಿಂದರೆ ನನಗೂ ಪಾಪ ಅಲ್ಲವೇ, ಬೇಡ ನಾನು ಇದು ಮಾಡುವುದು ಸರಿಯಲ್ಲ" ಎಂದು ಆ ಕೋಳಿಯ ಚೀಲವನ್ನು ರಸ್ತೆಯಲ್ಲಿದ್ದ ಒಂದು ಮರದ ಅಡಿಯಲ್ಲಿ ಸ್ವಲ್ಪ ಮಣ್ಣು ಅಗೆದು ಅದನ್ನು ಇಟ್ಟು ಮಣ್ಣು ಮುಚ್ಚಿದ.

ಅವನು ಹೋದ ನಂತರ ಎಲ್ಲಿಂದಲ್ಲೊ ಹಲವು ನಾಯಿ ಬಂದು ಮಣ್ಣು ಅಗೆದು ಚೀಲ ತೆಗೆದು ಅದರಲ್ಲಿದ್ದ ತುಂಡುಗಳನ್ನು ತಿಂದು ತನ್ನ ಹಸಿವೆ ನೀಗಿಸಿದವು.
by ಹರೀಶ್ ಶೆಟ್ಟಿ,ಶಿರ್ವ
by ಹರೀಶ್ ಶೆಟ್ಟಿ,ಶಿರ್ವ
Thursday, November 3, 2011
ಮೊದಲ ಕಾದಂಬರಿ
ಏನೋ ಕುತೂಹಲ, ಏನು ಹೇಳಬಹುದು? ಅವರಿಗೆ ಮೆಚ್ಚುಗೆಯಾಗಬಹುದೇ ನಾ ಬರೆದ ಮೊದಲ ಕಾದಂಬರಿ?ಅವರು ಏನು ಹೇಳಬಹುದು? ನನ್ನ ಕಾದಂಬರಿ ಮೆಚ್ಚಿ ಪ್ರಕಟಿಸಬಹುದೆ? ಇದೆಲ್ಲ ವಿಚಾರ ಮಾಡುತ ಶ್ರೀಹರಿ ನಡೆಯುತ್ತ ಹೋಗುತ್ತಿದ್ದ, ಹೇಗೋ ಅರ್ದ ಗಂಟೆ ನಂತರ ಅವನು ಯಾವುದೋ ಒಂದು ಪುಸ್ತಕ ಪ್ರಕಟಣೆಯ ಆಫೀಸ್ ಗೆ ಬಂದು ಮುಟ್ಟಿದ.
ಆಫೀಸ್ ಒಳಗೆ ಬಂದು ಸಂಪಾದಕರನ್ನು ಬೇಟಿಯಾಗಲಿದೆ ಎಂದು ಹೇಳಿ, ಅಲ್ಲೇ ಇದ್ದ ಒಂದು ಸೋಫಾದಲ್ಲಿ ಕೂತು ಕೊಂಡ.
ಒಂದು ೪೫ ನಿಮಿಷದ ನಂತರ ಸಂಪಾದಕರು ಅವನನ್ನು ಒಳಗೆ ಕರೆದರು.
"ಬನ್ನಿ ಬನ್ನಿ ಶ್ರೀಹರಿಯವರೇ, ರಾಮಕೃಷ್ಣನವರು ಫೋನ್ ಮಾಡಿದರು, ಕೂತು ಕೊಳ್ಳಿ" ಎಂದು ಸಂಪಾದಕರು ಅವ್ಹಾನಿಸಿದರು.
"ನಮಸ್ಕಾರ ಸರ್" ಎಂದು ನಾಜೂಕಾಗಿ ಹೇಳಿ ಕೂತು ಕೊಂಡ.
"ಸರ್ ಇದು ನಾನು ಬರೆದ ಕಾದಂಬರಿ" .
"ಹೌದೆ ಏನು ಇದರ ವಿಷಯ "
"ಸರ್ ...ಇದು ಒಂದು ಕೌಟುಂಬಿಕ ಕಥೆ, ದಯಮಾಡಿ ನೀವು ಇದನ್ನು ಓದಿ ಮುದ್ರಿಸ ಬೇಕು"
"ಆಯಿತು ರಾಮಕೃಷ್ಣರು ನಿಮಗೆ ಕಳಿಸಿದರು ಅಂದರೆ ಓದದೆ ಆಗುತ್ತದೆಯೇ, ನಾನು ಓದಿ ನಿಮಗೆ ತಿಳಿಸುತ್ತೇನೆ , ಆಗಬಹುದೇ ?
"ಖಂಡಿತವಾಗಿ ಸರ್ " ಎಂದು ಹೇಳಿ ಶ್ರೀಹರಿ ಸಂತೋಷದಿಂದ ಅಲ್ಲಿಂದ ಹೊರಟೆ.
ಹಲವು ದಿವಸದ ನಂತರ ಹೀಗೆಯೇ ಹಳೆ ವಾರ್ತಾ ಪತ್ರಿಕೆಯ ಗಂಟು ಮಾಡಿ ಗುಜರಿ ಅಂಗಡಿಯಲಿ ಮಾರಲಿಕ್ಕೆಂದು ಶ್ರೀಹರಿ ಹೋದ, ಗುಜರಿ ಅಂಗಡಿಯಲಿ ಗಂಟನ್ನು ಕೊಟ್ಟು ಹಣ ತೆಗೊಂಡು ಹೋಗುವಾಗ, ಹಾಗೆಯೇ ಅಂಗಡಿಯ ಮೂಲೆಯಲಿ ಅವನ ದೃಷ್ಟಿ ಬಿತ್ತು. ಆ ಮೂಲೆಯಲಿ ಅವನು ಪರಿಶ್ರಮ ಪಟ್ಟು ಬರೆದ ಕಾದಂಬರಿಯ ಹಾಳೆಗಳು ಬಿದ್ದು ಅವನನ್ನು ದಯನೀಯ ದೃಷ್ಟಿಯಿಂದ ನೋಡುತ್ತಿತ್ತು, ಶ್ರೀಹರಿಯ ಹೃದಯ ಭಾರವಾಯಿತು ಕಣ್ಣಿನಿಂದ ಕಣ್ಣೀರು ಹರಿದು ಬಂತು, ಮೆಲ್ಲನೆ ಅವನು ಅಲ್ಲಿಂದ ಕಾಲು ತೆಗೆದ.

Wednesday, November 2, 2011
ಏಕೆ ಈ ರೀತಿ ಸ್ವಾಮಿ ?
ಏಕೆ ಈ ರೀತಿ ಸ್ವಾಮಿ ?
ಏಕೆ ಈ ರೀತಿ ?
ನಿಮ್ಮ ಕಣ್ಣೀರು ಕಣ್ಣೀರು
ನಮ್ಮ ಕಣ್ಣೀರು ನೀರು
ನೀವು ಹೂವು ಅಂದರೆ
ಅದು ಹೂವು
ನಾವು ಹೂವು ಅಂದರೆ
ಅದು ಹಾವು
ನೀವು ನದಿ ಅಂದರೆ
ಅದು ನದಿ
ನಾವು ನದಿ ಅಂದರೆ
ಅದು ಹಳ್ಳ
ನೀವು ಚಳಿ ಅಂದರೆ
ತುಂಬಾ ಚಳಿ
ನಾವು ಚಳಿ ಅಂದರೆ
ನಿಮಗೆ ಸೆಕೆ
ನೀವು ದೂರ ಅಂದರೆ
ಅದು ದೂರ
ನಾವು ದೂರ ಅಂದರೆ
ಅದು ಸಮೀಪ
ಏಕೆ ಈ ರೀತಿ ಸ್ವಾಮಿ ?
ಏಕೆ ಈ ರೀತಿ ?
ನಿಮ್ಮ ಕಣ್ಣೀರು ಕಣ್ಣೀರು
ನಮ್ಮ ಕಣ್ಣೀರು ನೀರು
by ಹರೀಶ್ ಶೆಟ್ಟಿ, ಶಿರ್ವ
ಏಕೆ ಈ ರೀತಿ ?
ನಿಮ್ಮ ಕಣ್ಣೀರು ಕಣ್ಣೀರು
ನಮ್ಮ ಕಣ್ಣೀರು ನೀರು
ನೀವು ಹೂವು ಅಂದರೆ
ಅದು ಹೂವು
ನಾವು ಹೂವು ಅಂದರೆ
ಅದು ಹಾವು
ನೀವು ನದಿ ಅಂದರೆ
ಅದು ನದಿ
ನಾವು ನದಿ ಅಂದರೆ
ಅದು ಹಳ್ಳ
ನೀವು ಚಳಿ ಅಂದರೆ
ತುಂಬಾ ಚಳಿ
ನಾವು ಚಳಿ ಅಂದರೆ
ನಿಮಗೆ ಸೆಕೆ
ನೀವು ದೂರ ಅಂದರೆ
ಅದು ದೂರ
ನಾವು ದೂರ ಅಂದರೆ
ಅದು ಸಮೀಪ
ಏಕೆ ಈ ರೀತಿ ಸ್ವಾಮಿ ?
ಏಕೆ ಈ ರೀತಿ ?
ನಿಮ್ಮ ಕಣ್ಣೀರು ಕಣ್ಣೀರು
ನಮ್ಮ ಕಣ್ಣೀರು ನೀರು
by ಹರೀಶ್ ಶೆಟ್ಟಿ, ಶಿರ್ವ
ತೆರಳುವಾಗ ತೆರಳುವಾಗ
ತೆರಳುವಾಗ ತೆರಳುವಾಗ
ನನ್ನ ಈ ಗೀತೆ ನೆನಪಿನಲ್ಲಿಡು
ಎಂದೂ ವಿದಾಯ ಹೇಳದಿರು
ಎಂದೂ ವಿದಾಯ ಹೇಳದಿರು
ಅಳುವಾಗ ನಗುವಾಗ
ಹೀಗೆಯೇ ನೀನು
ಗುನುಗುನಿಸುತ್ತಿರು
ಎಂದೂ ವಿದಾಯ ಹೇಳದಿರು
ಪ್ರೀತಿ ಮಾಡುತ್ತಲೇ ಹೀಗೆಯೇ
ನಾವೆಲ್ಲಿಯೋ ಮರೆಯಾಗುವ
ನಿಸರ್ಗದ ಮಡಿಲಲಿ ಹೀಗೆಯೇ
ಅಡಗಿಕೊಂಡು ಮಲಗುವ
ಕನಸಿನ ಜಗತ್ತಲ್ಲಿ
ನನಗೆ ಹೀಗೆಯೇ ಕರೆಯುತ್ತಿರು
ಎಂದೂ ವಿದಾಯ ಹೇಳದಿರು...
ಮಧ್ಯೆ ಹಾದಿಯಲಿ ಪ್ರೇಯಸಿ
ನಾವೆಲ್ಲಿಯೋ ಅಗಲಿದರೆ
ಏಕಾಂತ ಜೀವನದ ಆ ಕ್ಷಣಗಳು
ನಿನಗೆ ಭಾರವಾದರೆ
ನಾನು ಹಿಂತಿರುಗಿ ಬರುವೆ
ನೀನು ಕರೆಯಲು ಮರೆಯದಿರು
ಎಂದೂ ವಿದಾಯ ಹೇಳದಿರು...
ಮೂಲ: ಅಮಿತ್ ಖನ್ನ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಬಪ್ಪಿ ಲಹರಿ
ಚಿತ್ರ : ಚಲ್ತೆ ಚಲ್ತೆ
ನನ್ನ ಈ ಗೀತೆ ನೆನಪಿನಲ್ಲಿಡು
ಎಂದೂ ವಿದಾಯ ಹೇಳದಿರು
ಎಂದೂ ವಿದಾಯ ಹೇಳದಿರು
ಅಳುವಾಗ ನಗುವಾಗ
ಹೀಗೆಯೇ ನೀನು
ಗುನುಗುನಿಸುತ್ತಿರು
ಎಂದೂ ವಿದಾಯ ಹೇಳದಿರು
ಪ್ರೀತಿ ಮಾಡುತ್ತಲೇ ಹೀಗೆಯೇ
ನಾವೆಲ್ಲಿಯೋ ಮರೆಯಾಗುವ
ನಿಸರ್ಗದ ಮಡಿಲಲಿ ಹೀಗೆಯೇ
ಅಡಗಿಕೊಂಡು ಮಲಗುವ
ಕನಸಿನ ಜಗತ್ತಲ್ಲಿ
ನನಗೆ ಹೀಗೆಯೇ ಕರೆಯುತ್ತಿರು
ಎಂದೂ ವಿದಾಯ ಹೇಳದಿರು...
ಮಧ್ಯೆ ಹಾದಿಯಲಿ ಪ್ರೇಯಸಿ
ನಾವೆಲ್ಲಿಯೋ ಅಗಲಿದರೆ
ಏಕಾಂತ ಜೀವನದ ಆ ಕ್ಷಣಗಳು
ನಿನಗೆ ಭಾರವಾದರೆ
ನಾನು ಹಿಂತಿರುಗಿ ಬರುವೆ
ನೀನು ಕರೆಯಲು ಮರೆಯದಿರು
ಎಂದೂ ವಿದಾಯ ಹೇಳದಿರು...
ಮೂಲ: ಅಮಿತ್ ಖನ್ನ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಬಪ್ಪಿ ಲಹರಿ
ಚಿತ್ರ : ಚಲ್ತೆ ಚಲ್ತೆ
Chalte Chalte Mere Yeh Geet Yaad Rakhna
Kabhi Alvida Na Kahna (2)
Rote Hanste Bas Yunhi Tum
Gungunate Rahna
Kabhi Alvida Na Kehna (2)
Pyar Karte Karte Hum Tum Kahin Kho Jayenge
Yunhi Baharon Ke Aanchal Mein Chhup Ke So Jayenge
Sapno Ki Duniya Mein Tum Yunhi Bulate Rahna
Kabhi Alvida Na Kehna (2)
Chalte Chalte...
Beech Rah Mein Dilbar Bichhad Jaye Kahin Hum Agar
Aur Sooni Si Lagey Tumhe Jeevan Ki Yeh Dagar
Hum Laut Ayenge Tum Yunhi Bulate Rehna
Kabhi Alvida Na Kehna (2)
Chalte Chalte..
www.youtube.com/watch?v=8fMHFLD6NFU

Tuesday, November 1, 2011
Subscribe to:
Posts (Atom)
ಚಂದ್ರಯಾನ
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...
-
ನೀಲ ಗಗನದ ನೆರಳಲಿ ದಿನ ರಾತ್ರಿಯ ಮಿಲನವಾಗುತ್ತದೆ ಹೃದಯ ಹಕ್ಕಿಯಾಗಿ ಹಾರುತ್ತದೆ ನಾನೆಲ್ಲಿಯೋ ಕಳೆದೋಗುತ್ತೇನೆ ನೀಲ ಗಗನದ.... ಯಾವುದೇ ಹೂವು ನಗುವಾಗ ಇನಿಯನ ...
-
ನಾನೊಂದು ಒಣಗಿದ ಮರ ಒಬ್ಬಂಟಿ ಈ ಬಂಜರ ಭೂಮಿಯಲಿ ಒಂದು ಕಾಲ ಇತ್ತು ನನ್ನದು ಸಹ ಆಗ ಈ ಭೂಮಿ ಫಲಿತವಾಗಿತ್ತು! ನನ್ನ ಎಲೆ ಹೂ ತುಂಬಿದ ರೆಂಬೆಯಿಂದ ತಂಗಾಳಿ ಬೀಸ...
-
ಜೇನು ನೊಣ ಜೇನು ನೊಣ ಜೇನು ನೊಣ ನಿನ್ನಲಿದೆ ಸಿಹಿಯ ಕಣ ಸಿಹಿ ಸಿಹಿ ಹುಡುಕುತ ಅಲ್ಲಿ ಇಲ್ಲಿ ತಿರುಗುತ ಹೂವಿನಿಂದ ಹೂವಿಗೆ ಮುಂಜಾನೆಯ ಶುಭಾಶಯ ನೀಡಿ ಅವರಿಂದ...