Friday, July 29, 2011

ಎಲ್ಲಿದ್ದಿ ನೀ ಮಳೆರಾಯ ?

ಎಲ್ಲಿದ್ದಿ ನೀ ಮಳೆರಾಯ ?
ಕಾದು ಕಾದು ಸೋತು ಹೋದೆ
ಉರಿಯುತ್ತಿದೆ ನನ್ನ ಜೀವ ಬಿಸಿಲಿನ ತಾಪದಿಂದ
ನರಳುತ್ತಿದ್ದೇನೆ ನೀರಿನ ಕೊರತೆಯಿಂದ
ಎಲ್ಲಿದ್ದಿ ನೀ ಮಳೆರಾಯ ?
ಮೋಡಗಳು ಕೆಲವೊಮ್ಮೆ
ನಮ್ಮ ಕೀಟಲೆ ಮಾಡುತ್ತಿವೆ
ಬಂದು  ಬಂದು ಮುಖ ತೋರಿಸಿ ಓಡುತ್ತಿವೆ 
ಎಲ್ಲಿದ್ದಿ ನೀ ಮಳೆರಾಯ ?
ಭೂಮಿಯ ತ್ರಾಣ ಮುಗಿಯುತ್ತಿವೆ
ಒಣಗಿ ಒಣಗಿ ಕೊರಗುತ್ತಿವೆ 
ಹನಿ ಹನಿಗಾಗಿ ಕಾಯುತ್ತಿವೆ
ಎಲ್ಲಿದ್ದಿ ನೀ ಮಳೆರಾಯ ?
ಮರ ಗಿಡಗಳು ನನ್ನನ್ನು
ನೋಡಿ ನೋಡಿ ಕೂಗುತ್ತಿವೆ
ಆಹಾರ ಇಲ್ಲದೆ ಬಾಡುತ್ತಿವೆ
ಎಲ್ಲಿದ್ದಿ ನೀ ಮಳೆರಾಯ ?
ಮುದಿ ಕಣ್ಣುಗಳು ಆಕಾಶ ನೋಡುತ್ತಿವೆ
ಮಕ್ಕಳ ಮುಗ್ದ ದೃಷ್ಟಿ ನಿನ್ನನ್ನೇ ಕೇಳುತ್ತಿವೆ
ಬೇಗ ಬಾ ಮಳೆರಾಯ
ಎಲ್ಲಿದ್ದಿ ನೀ ಮಳೆರಾಯ ?
by ಹರೀಶ್ ಶೆಟ್ಟಿ , ಶಿರ್ವ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...