ಪಕ್ಯ...ಪಕ್ಯ ನನ್ನ ಬಿಲ್ಡಿಂಗ್ ನ ಗ್ರೌಂಡ್ ಫ್ಲೂರ್ ಲ್ಲಿ ಇರುತ್ತಿದ್ದ, ಅವನ ತಂದೆ ದೊಡ್ಡ ಕುಡುಕ ಹಾಗು ಪ್ರಯೋಜನ ಇಲ್ಲದವ, ಪಕ್ಯನ ತಾಯಿ ಅಲ್ಲಿ ಇಲ್ಲಿ ದುಡಿದು ಹೇಗಾದರೂ ತನ್ನ ಹಾಗು ಮಕ್ಕಳ ಜೀವನ ಸಾಗಿಸುತ್ತಿದ್ದರು.
ಪಕ್ಯ ನನ್ನಿಂದ ಎರಡು ಮೂರೂ ವರುಷ ದೊಡ್ಡವ, ಪಕ್ಯ ಚಿಕ್ಕಂದಿನಿಂದಲೂ ಮಂದ ಬುದ್ದಿ (Special Abnormal child), ಜೀವ ದೊಡ್ಡದಾದರೂ ಅವನ ಬುದ್ದಿಯ ಬೆಳವಣಿಗೆ ಆಗಿರಲಿಲ್ಲ, ಪಕ್ಯನಿಗೆ ...ಇಬ್ಬರು ತಂಗಿಯರಿದ್ದರು .
೧೨ ವರುಷದಲ್ಲಿಯೇ ಪಕ್ಯನ ಜೀವ ೬ ಫೀಟ್ ಉದ್ದ ಆಗಿತ್ತು, ಆದರೆ ಅವನ ಬುದ್ದಿ ಚಿಕ್ಕ ಮಕ್ಕಳ ಹಾಗೆ, ಪಕ್ಯ ಇಡಿ ದಿನ ಅಲ್ಲಿಂದ ಇಲ್ಲಿ ಇಲ್ಲಿಂದ ಅಲ್ಲಿ ತಿರುಗುತ ಇರುತ್ತಿದ್ದ, ಅವನ ತಾಯಿ ಹೊಟ್ಟೆ ಪಾಡಿಗಾಗಿ ಮನೆ ಮನೆ ದುಡಿಯಲ್ಲಿಕೆ ಹೋಗುತ್ತಿದ್ದಳು, ಅವನ ತಂದೆಗೆ ಕುಡಿಯುವುದರಲ್ಲಿ ಪುರ್ಸ್ಹೊತ್ತು ಇರುತ್ತಿರಲಿಲ್ಲ .
ಎಲ್ಲ ಮಕ್ಕಳು ಪಕ್ಯನಿಗೆ ತುಂಬಾ ತೊಂದರೆ ಕೊಡುತ್ತಿದ್ದರು ಹಾಗು "ಹೇ ವೇಡ(ಮೆಂಟಲ್) ಹೇ ವೇಡ" ಎಂದು ಚಿಡಾಯಿಸುತ್ತಿದ್ದರು, ಪಕ್ಯ ಆ ಮಕ್ಕಳಿಗೆ ಏನು ಮಾಡುತ್ತಿರಲಿಲ್ಲ, ಯಾಕೆಂದರೆ ಅವರು ಏನು ಹೇಳುತ್ತಾರೆ ಅವನಿಗೆ ತಿಳಿಯುತ್ತಿರಲಿಲ್ಲ, ಕೆಲವು ಮಕ್ಕಳು ಅವನಿಗೆ ಕಲ್ಲಿನಿಂದ ಹೊಡೆದು ಓಡಿ ಹೋಗುತ್ತಿದ್ದರು, ಇದರಿಂದ ಪಕ್ಯ ಕೋಪಗೊಳಗಾಗಿ ಅವರ ಹಿಂದೆ ಕಲ್ಲು ಇಡಿದು ಓಡುತ್ತಿದ್ದ.
ನನಗೆ ಯಾವಾಗಲು ಪಕ್ಯನ ಮೇಲೆ ತುಂಬಾ ದಯೆ ಬರುತ್ತಿತ್ತು, ನಾನು ನನ್ನ ಅಮ್ಮನಿಗೆ ಕೇಳುತ್ತಿದ್ದೆ "ಅಮ್ಮ ಆಯಗ್ ಯಿನಾ ಆತ್oಡ್"?(ಅಮ್ಮ ಅವನಿಗೆ ಏನಾಗಿದೆ?), ಅಮ್ಮ ನನಗೆ ಸಮಾಧಾನಿಸುತ್ತಿದ್ದರು "ಆಯೇ ದೇವೆರೆನ ಸ್ಪೆಷಲ್ ಮಗೆ, ಅಇಕ್ ಆಯೇ ಅಂಚ"(ಅವನ ದೇವರ ಸ್ಪೆಷಲ್ ಮಗ,ಅದಕ್ಕೆ ಅವನು ಹಾಗೆ ), ನಾ ಕೇಳುತ್ತಿದ್ದೆ "ಅಂಚಂಡ ಜೋಕುಲು ಆಯಾಗ್ ಪೆಟ್ಟು ದ್ಯಾಗ್ ಪಾಡನು"(ಹಾಗಾದರೆ ಮಕ್ಕಳು ಅವನಿಗೆ ಯಾಕೆ ಹೊಡೆಯುತ್ತಾರೆ), ಅಮ್ಮ ನನಗೆ "ಅವ್ವು ಬುದ್ದಿದಾಂತಿನ ಜೋಕುಲು , ಈ ಮಿನಿ ಅಂಚ ಮಲ್ಪೋಡಚಿ ಆವಾ"(ಅವರು ಬುದ್ದಿ ಇಲ್ಲದ ಮಕ್ಕಳು ನೀನು ಹಾಗೆ ಮಾಡ ಬೇಡ ) ಎಂದು ಹೇಳುತ್ತಿದ್ದರು .
ಪಂಕಜ್ ಪಕ್ಯನಿಗೆ ತುಂಬಾ ಸತಾಯಿಸುತ್ತಿದ್ದ, ಅವನು ಪೋಲಿ ಹುಡುಗರ ಮುಖ್ಯಸ್ತ, ಅವನಿಗೆ ಪಕ್ಯ ನಿಗೆ ಏನಾದರೂ ತಂಟೆ ಮಾಡುವ ಅವ್ಯಾಸ ಆಗಿತ್ತು.
ಒಂದು ದಿವಸ ನಾನು ಶಾಲೆಯಿಂದ ಬರುವಾಗ, ನನ್ನ ಬಿಲ್ಡಿಂಗಿನ ಕೆಳಗೆ ತುಂಬಾ ಜನ ಒಟ್ಟಾಗಿದ್ದರು. ಪಂಕಜನ ತಲೆಯಿಂದ ರಕ್ತ ಸುರಿಯುತ್ತಿತ್ತು, ನಾನು ಕುತೂಹಲದಿಂದ ಒಬ್ಬನನ್ನು ಕೇಳಿದೆ "ಕಾಯ್ ಝಾಲ? (ಏನಾಯಿತು?)" ಅವನು ಹೇಳಿದ " ಕಾಯ್ ನಾಹಿರೇ, ಥೋ ವೇಡ ಆಯನ ಪಕ್ಯ, ತ್ಯಾನಿ ಯಾಲ ದಗಡ ಫೆಕುನ್ ಮಾರಲ" (ಏನಿಲ್ಲ ಮಾಹರಾಯ , ಅವ ಮೆಂಟಲ್ ಪಕ್ಯ ಇದ್ದನಲ್ಲ ಅವನು ಇವನಿಗೆ ಕಲ್ಲಿನಿಂದ ಹೊಡೆದ),. ನನಗೆ ಯಾಕೋ ಪಂಕಜನ ಮೇಲೆ ಸ್ವಲ್ಪವು ಕರುಣೆ ಬರಲಿಲ್ಲ , ಯಾಕೆಂದರೆ ನನಗೆ ಗೊತ್ತಿತ್ತು ಪಂಕಜ್ ಯಾವಾಗಲು ಪಕ್ಯ ನಿಗೆ ತೊಂದರೆ ಕೊಡುತ್ತಿದ್ದ .
ಪಕ್ಯನ ತಾಯಿಗೆ ಕರೆಯಿಸಲಾಯಿತು, ಪಕ್ಯನ ತಾಯಿ ಬಂದ ಕೂಡಲೇ ಎಲ್ಲರೂ ಪಕ್ಯನ ತಾಯಿಗೆ ಅದು ಇದು ಹೇಳಲು ಶುರು ಮಾಡಿದ್ದರು "ಅವನಿಗೆ ಮೆಂಟಲ್ ಆಸ್ಪತ್ರೆಗೆ ಕಳಿಸಿ , ಯಾಕೆ ಮನೆಯಲ್ಲಿ ಇಟ್ಟಿದ್ದೀರಿ", ಪಕ್ಯನ ತಾಯಿ....ಪಾಪ ....ದುಃಖದಿಂದ ಪಕ್ಯನಿಗೆ ತುಂಬಾ ಹೊಡೆದರು, ಹೊಡೆದ ನಂತರ ಅಳಲು ಪ್ರಾರಂಬಿಸಿದ್ದರು, ಪಾಪ....ತಾಯಿ ಹೃದಯಕ್ಕೆ ಗೊತ್ತಿತ್ತು ಅವನ ಏನೂ ತಪ್ಪು ಇರಲಿಕ್ಕಿಲ್ಲವೆಂದು.
ಪಕ್ಯ ಪೆಟ್ಟು ತಿಂದ ನಂತರ ತಾಯಿಯ ಬಳಿಗೆ ಬಂದು ಅವಳ ಕಣ್ಣಿರು ಒರಸಿ " ಆಯೇ .....ಮಲ ಕಾಯಿ ಕಾಯಲಾ ದೇ ನಾ " (ಅಮ್ಮ....ನನಗೆ ಏನೂ ತಿನ್ಲಿಕ್ಕೆ ಕೊಡಲ್ಲ), ಪಾಪ ...ತಾಯಿ ಅವನನ್ನೇ ನೋಡುತಾ ಪುನಃ ಅಳಲು ಪ್ರಾರಂಭಿಸಿದ್ದರು, ಬಡ ತಾಯಿಯಲ್ಲಿ ಅವನಿಗೆ ಡಾಕ್ಟರ ನಲ್ಲಿ ತೋರಿಸಲಿಕ್ಕೆ ಹಣವು ಇರಲಿಲ್ಲ ಹಾಗು ಮೆಂಟಲ್ ಆಸ್ಪತ್ರೆ ಸೇರಿಸಲಿಕ್ಕೆ ಅವಳ ತಾಯಿ ಮನಸ್ಸು ಒಪ್ಪುತಿರಲಿಲ್ಲ, ನನ್ನ ಹೃದಯ ಮನ್ನಸ್ಸು ಅವರನ್ನು ನೋಡಿ "ಆಯ್ಯೋ" ಅನ್ನುತ್ತಿತ್ತು, ಆದರೆ ನನ್ನ ಚಿಕ್ಕ ವಯಸ್ಸು ಅವರ ಸಹಾಯ ಮಾಡಲು ಸಮರ್ಥವಾಗಿರಲಿಲ್ಲ.
ಹಾಗೆಯೇ ದಿನ ಉರುಳಿದಂತೆ ಪಕ್ಯನ ತಾಯಿ ಹೇಗೆಯೋ ಅವನಿಗೆ ಡಾಕ್ಟರಿಗೆ ತೋರಿಸಿದರು, ಆದರೆ ತುಂಬಾ ಖರ್ಚಾದರೂ ಏನೂ ಉಪಯೋಗ ಆಗಲಿಲ್ಲ, ಇದ್ದನ್ನು ನೋಡಿ ಪಕ್ಯನ ತಾಯಿ ಅವನ ಟ್ರೀಟ್ ಮೆಂಟ್ ನಿಲ್ಲಿಸಿ ಅವನಿಗೆ ತನ್ನ ಒಟ್ಟಿಗೆ ತನ್ನ ಡಬ್ಬ ಡೆಲಿವರಿ ಕೆಲಸಕ್ಕೆ ಸೇರಿಸಿದಳು, ನನಗೆ ಗೊತ್ತಿಲ್ಲ ಹೇಗೆ....ಪಕ್ಯನ ತಾಯಿಯ ಈ ಉಪಾಯ ಯಶಸ್ವಿಯಾಯಿತು, ಪಕ್ಯ ಡಬ್ಬ ದೆಲಿವೆರ್ ಮಾಡಲಿಕ್ಕೆ ಪ್ರಾರಂಭಿಸಿದ, ಅವನು ತುಂಬಾ ಕಾಳಜಿಯಿಂದ ಆಫೀಸೆಗೆಲ್ಲ ಡಬ್ಬ ಸಮಗ್ರವಾಗಿ ದೆಲಿವರ್ ಮಾಡುತ್ತಿದ್ದ, ಇದ್ದನ್ನು ನೋಡಿ ನನಗೆ ತುಂಬಾ ಅನಂದವಾಗುತಿತ್ತು, ಈಗ ಪಕ್ಯ ನಮ್ಮೊಟ್ಟಿಗೆ ಸ್ವಲ್ಪ ಸ್ವಲ್ಪ ಮಾತಾನಾಡಲು ಪ್ರಾರಂಭಿಸಿದ, ಅವನ ಬುದ್ದಿ ಮಕ್ಕಳ ಹಾಗೆ ಇದ್ದರು, ಮೊದಲಿನಿಂದ ತುಂಬಾ ಸುಧಾರಣೆ ಇತ್ತು.
ಸ್ವಲ್ಪ ವರುಷ ನಂತರ ನಾವು ಅಲ್ಲಿಂದ ಬೇರೆ ನಗರಕ್ಕೆ ಶಿಫ್ಟ್ ಆದೆವು, ಆದರೆ ಪಕ್ಯ ನನ್ನ ನೆನಪಿನಲ್ಲಿ ಯಾವಾಗಲೂ ಬಾಳುತ್ತಿದ್ದ.
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment