Saturday, July 30, 2011

ಜಗತನ್ನು ಬದಲಾಯಿಸುವ ಮುನ್ನ ನಿಮ್ಮನ್ನು ಸುಧಾರಿಸಿ

ಒಂದು ಉರಿನಲ್ಲಿ ಒಬ್ಬಳು ಆಲಸಿ ಮುದುಕಿ ಇದ್ದಳು. ಅವಳು ಎಷ್ಟು ಆಲಸಿ ಎಂದರೆ ಅವಳ ಮೈ ಬಟ್ಟೆಗಳು ನೀರನ್ನು ಕಂಡು ವರ್ಷ ಕಳೆದಿದ್ದವು, ಅವಳು ಅವಳ ಮನೆಯನ್ನು ಕಟ್ಟಿಸಿದ ಮೇಲೆ ಅವಳ ಮನೆಯನ್ನು ತೊಳೆದು ಸ್ವಚ್ಛ ಮಾಡಿರಲಿಲ್ಲ, ಅವಳ ಮನೆಯ ಅಕ್ಕ ಪಕ್ಕದಲ್ಲಿ ವಾಸಿಸುವವರೆಲ್ಲರು ಇವಳಂತೆಯೇ ಇದ್ದರು, ದಿನವಿಡೀ ಅವಳ ಕೆಲಸವೆಂದರೆ ಇನ್ನೊಬ್ಬರನ್ನು ಟೀಕಿಸುವುದು. ಅವಳ ಸಂಬಂಧಿಕರಾಗಲಿ, ಗೆಳೆಯರಾಗಲಿ, ಯಾರೊಬ್ಬರೂ ಅವಳ ಮನೆಯ ಹತ್ತಿರ ಸುಳಿಯುತ್ತಿರಲಿಲ್ಲ.

ಒಂದು ದಿನ ಆ ಮುದುಕಿ ವಾಸವಾಗಿದ್ದ ಬೀದಿಯಲ್ಲಿ ನೆಡೆದು ಹೋಗುತ್ತಿದ್ದ ಒಬ್ಬ ಸಾಧು ಆ ಮುದುಕಿಗೆ ಬಂಗಾರದಿಂದ ಮಾಡಿದ ಒಂದು ಮೂರ್ತಿಯನ್ನು ಕೊಟ್ಟನು, ಸಂತೋಷದಿಂದ ಸ್ವೀಕರಿಸಿದ ಮುದುಕಿ ಅದನ್ನು ತನ್ನ ಮನೆಯ ಒಂದು ಮೂಲೆಯಲ್ಲಿಟ್ಟಳು, ಸುಂದರವಾದ, ಕಾಂತಿಯುಳ್ಳ ಮೂರ್ತಿ ಮನೆಯಲ್ಲಿದ್ದ ಕೊಳಕಿನಿಂದಾಗಿ ಕಳಾಹೀನವಾಗಿ ಕಾಣಿಸತೊಡಗಿತು.

ಸ್ವಲ್ಪ ಹೊತ್ತು ಚಿಂತಿಸಿದ ಮುದುಕಿ ಮೂರ್ತಿಯನ್ನು ಇರಿಸಿದ ಪೀಠವನ್ನು ತೊಳೆದು ಸ್ವಚ್ಛ ಮಾಡಿದಳು.ಕೊಳಕು ತುಂಬಿದ್ದ ಮನೆಯ ಮೂಲೆಯಲ್ಲಿ ಆ ಪೀಠವನ್ನು ಇರಿಸಿದ್ದು ಇನ್ನಷ್ಟು  ಆಭಾಸವಾಗಿ ಕಾಣಿಸಿತು. ಕೂಡಲೇ ಮುದುಕಿ ಮನೆಯ ಮೂಲೆಯಲ್ಲಿದ್ದ ಕೊಳಕನ್ನೆಲ್ಲಾ ಗುಡಿಸಿ ಸಾರಿಸಿ ಸ್ವಚ್ಛ ಗೊಳಿಸಿದಳು, ಆಗ ದೊಡ್ಡದ್ದಾದ ಮನೆಯಲ್ಲಿ ಕೇವಲ ಮೂಲೆ ಮಾತ್ರ ಶುದ್ದವಾದುದರಿಂದ ಅವಳಿಗೆ  ಉಳಿದ ಭಾಗ ಅಸಹ್ಯವಾಗಿ ಕಂಡಿತು, ಅವಳು ಕೂಡಲೆ ಆ ಕೋಣೆಯನ್ನೇ ಸ್ವಚ್ಛ ಮಾಡಿದಳು. 
ಹೀಗೆ ಮುದುಕಿ ಇಡೀ ಮನೆಯನ್ನೇ ಸ್ವಚ್ಛ ಮಾಡಿದಳು, ಮನೆಯನ್ನು ಸ್ವಚ್ಛ ಮಾಡಿದ ಮುದುಕಿ ಕನ್ನಡಿಯಲ್ಲಿ ತನ್ನನ್ನು ತಾನು ಕಂಡಾಗ ಇಷ್ಟು ಸುಂದರವಾದ ಮನೆಯಲ್ಲಿ ತನ್ನಂತಹ ಕೊಳಕು ಮನುಷ್ಯರು ಇರಲು ಯೋಗ್ಯರಲ್ಲ ಎಂದು ಭಾವಿಸಿ ಬೇಗ ಹೋಗಿ ಸ್ನಾನ ಮಾಡಿ, ಶುದ್ದ ಬಟ್ಟೆ ಧರಿಸಿದಳು, ಸುಂದರವಾಗಿ ಶುಚಿಯಾಗಿ ಹೊರ ಬಂದ ಮುದುಕಿಗೆ ತನ್ನ ಮನೆ ಸುಂದರ ಕಂಡರೂ  ಅಕ್ಕ ಪಕ್ಕದವರ ಮನೆಯೆಲ್ಲ ಕೊಳಕಾಗಿ ಕಂಡು ಬಂದು ಬೇಸರಿಸದಳು,  ಆದರೆ ಮುದುಕಿಯ ಮನೆಯ ಅಕ್ಕ ಪಕ್ಕದಲ್ಲಿರುವ ಎಲ್ಲರಿಗೂ ಮುದುಕಿಯ ಅಂದವಾದ ಮನೆಯ ಪಕ್ಕದಲ್ಲಿ ಇರುವ ತಮ್ಮ ಮನೆ, ತಮ್ಮ ಮಕ್ಕಳು ಎಲ್ಲರೂ ಇಷ್ಟು ಕೊಳಕಾಗಿ ಇರುವುದು ಸರಿಯಲ್ಲವೆಂದು ತಕ್ಷಣ ಎಲ್ಲರೂ ತಮ್ಮ ತಮ್ಮ ಮನೆಯನ್ನು ಮನೆ ಮಂದಿಯರನ್ನು ಸ್ವಚ್ಚಗೊಳಿಸಿದರು, ಹೀಗೆ ನೋಡುತ್ತಿದ್ದಂತೆಯೇ ಸಂಪೂರ್ಣ ಕೇರಿಯೇ  ಶುದ್ದವಾಗಿ ರಾರಾಜಿಸತೊಡಗಿತು.
ಆ ನಂತರ ಮುದುಕಿ ಹಾಗು ಎಲ್ಲರೂ  ಸಂತೋಷದಿಂದ ಇರಲಾರಂಭಿಸಿದರು. 

(ಎಲ್ಲೋ  ಓದಿದ್ದು  ) ಈ  ಕಥೆಯ ಲೇಖಕರ ಬಗ್ಗೆ ಗೊತ್ತಿಲ್ಲ . 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...