ಸೋತಿದ್ದೇವೆ ಓಡಿ ಓಡಿ
ಅಲ್ಲಿ ಇಲ್ಲಿ ಜನರೇ ಜನರು
ಪರಿಚಯದವರಲ್ಲ
ಆದರು ಪರಿಚಯದವರೇ
ಹರಟೆ, ಗಲಾಟೆ, ಹಾಸ್ಯ, ವ್ಯಂಗ
ಸ್ವಲ್ಪ ಸಮಯ ಎಲ್ಲರ ಸಂಗ
ಹಲವು ಮುಖಗಳು
ಅನೇಕ ವೇಷಗಳು
ಸಂತೋಷ, ವ್ಯಾಕುಲ, ಕೋಪ, ತಾಪ
ಅನಂತ ಭಾವನೆಗಳ ತರಂಗ
ಮನೆಯ ವಿಚಾರ
ಕೆಲಸದ ಒತ್ತಡ
ಫ್ಲಾಟು, ಪ್ಲಾನು, ಪ್ಲಾಟ್
ಅವರ ಹಣ , ಇವರ ಹಣ
ಕಳ್ಳತನ, ಬುದ್ದಿವಂತಿಕೆ,ಆಚಾರ,ವಿಚಾರ
ಮಂದಿರ, ಮಸ್ಜಿದ್ , ಚರ್ಚು
ಇಲ್ಲ ಕೆಲವರ ಪರ್ಸು
ಜೀವನ ಒಂದು ರೈಲು ಗಾಡಿ
ಸೋತಿದ್ದೇವೆ ಓಡಿ ಓಡಿ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment