Thursday, July 28, 2011

ಉಪದೇಶ



ಒಂದು ಊರಿನಲ್ಲಿ ಒಬ್ಬರು ಹೆಸರಾಂತ ಸನ್ಯಾಸಿ ಇದ್ದರು. ಒಂದು ದಿನ ಅವರಲ್ಲಿ ದೂರದಿಂದ ಒಂದು ಹೆಂಗಸು ತನ್ನ ೯ ವರ್ಷ ಮಗನ ಒಟ್ಟಿಗೆ ಬಂದಳು. ಅವಳು ಸನ್ಯಾಸಿಗೆ ನಮಸ್ಕರಿಸಿ 
" ಗುರುಗಳೇ ಈ ನನ್ನ ಮಗ ತುಂಬಾ ಸಿಹಿ ತಿನ್ನುತ್ತಾನೆ, ನೀವು ಏನಾದರೂ ಉಪಾಯ ತಿಳಿಸಿ".



ಸನ್ಯಾಸಿ ಸ್ವಲ್ಪ ಹೊತ್ತು ಮಗನನ್ನು ದಿಟ್ಟಿಸಿ ನೋಡಿ  " ಕಂದಾ, ನೀ ನನ್ನತ್ರ ೧೦ ದಿವಸ ನಂತರ ಬಾ, ನಾ ನಿನಗೆ ಉಪಾಯ ಹೇಳುತ್ತೇನೆ " ಎಂದು ಹೇಳಿದರು.



೧೦ ದಿವಸ ನಂತರ ಪುನಃ ತಾಯಿ/ಮಗ ಸನ್ಯಾಸಿಯಲ್ಲಿಗೆ  ಬಂದರು, ಆಗ ಸನ್ಯಾಸಿಯವರು "ಕಂದಾ ನೀನು ಇನ್ನು ಮೇಲೆ ಸಿಹಿ ತಿನ್ನುವುದನ್ನು ಬಿಟ್ಟು ಬಿಡು" ಎಂದರು. ಇದನ್ನು ಕೇಳಿ ತಾಯಿ  "ಗುರುಗಳೇ ಇದನ್ನು ಹೇಳಲು ನೀವು ನಮಗೆ ಇಷ್ಟು ದೂರದಿಂದ ಕರೆದಿರಲ್ಲ, ಮೊದಲೇ ಹೇಳಬಹುದಿತ್ತಲ್ಲವೇ" ಎಂದು ಕೋಪಿಸಿದರು.



ಆಗ ಸನ್ಯಾಸಿಯವರು "ತಾಯಿ, ನೀವು ಮೊದಲು ಬಂದಾಗ , ನಾನು ಸ್ವತಹ ತುಂಬಾ ಸಿಹಿ ತಿನ್ನುತಿದ್ದೆ, ಆಗ ನಾನು ಇವನಿಗೆ "ನೀನು ಸಿಹಿ ತಿನ್ನುವುದು ಬಿಟ್ಟು ಬಿಡು ಅಂತ ಹೇಗೆ ಹೇಳಲಿ". 



ನೀವು ಹೋದ ಮೇಲೆ ನಾ ಸ್ವತಹ ಸಿಹಿ ತಿನ್ನುವುದನ್ನು ಬಿಟ್ಟು ಬಿಡಲು ಪ್ರಯತ್ನಿಸಿದೆ ಹಾಗು ಸಿಹಿ ತಿನ್ನುವುದನ್ನು ಬಿಡಲು ನಾನು ಯಶಸ್ವಿಯು ಆದೆ.


ಈಗ ನಾನು ಯಶಸ್ವಿಯಾದ ಮೇಲೆ ಇವನು ಸಹ ಸಿಹಿ ತಿನ್ನುವುದನ್ನು ಬಿಟ್ಟು ಬಿಡ ಬಹುದೆಂಬ ವಿಶ್ವಾಸ ಆದ ಮೇಲೆ ಮೇಲೆ ಇವನಿಗೆ ಸಹ "ನೀನು ಸಿಹಿ ತಿನ್ನುವುದು ಬಿಟ್ಟು ಬಿಡು ಅಂತ ಹೇಳಿದೆ ತಾಯಿ".

(ಬೇರೆಯವರಿಗೆ ಉಪದೇಶ ನೀಡುವ ಮೊದಲು ಸ್ವಂತ ಅದನ್ನು ಸಾದಿಸಿ ನೋಡಬೇಕು)

(ಎಲ್ಲೊ ಕೇಳಿದ್ದು ) 

by ಹರೀಶ್ ಶೆಟ್ಟಿ ...ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...