ಶಾಲೆ ಮುಗಿದ ನಂತರ ರಮಾ ಹಾಗು ಜಯಲಕ್ಷ್ಮಿ ಇಬ್ಬರು ಅವಸರ ಅವಸರವಾಗಿ ನಡೆದು ಕೊಂಡು ಮನೆಗೆ ಹಿಂತಿರುಗುತ್ತಿದ್ದರು. ಬಿಸಿಲಿನ ತಾಪ ಹೆಚ್ಚಾಗಿತ್ತು, ಅದರ ಮೇಲೆ ಇಬ್ಬರಿಗೂ ತಡೆಯಲಾರದ ಹಸಿವೆ.
ಜಯಲಕ್ಷ್ಮಿ "ಒಹ್.... ಇವತ್ತು ಊಟದಲ್ಲಿ ಏನು ಇರುತ್ತದೋ ...ತುಂಬಾ ಹಸಿವೆ ಆಗ್ತಾ ಇದೆ.
ರಮಾ "ನಿನ್ನ ಗೊತ್ತಿಲ್ಲ , ಆದರೆ ನನ್ನ ಮನೆಯಲ್ಲಿ ದೊಡ್ಡ (ರಮಾಳ ಅಜ್ಜಿ ) ಅದೇ ಗಂಜಿ ಮಾಡಿ ಇಟ್ಟಿರಬೇಕು, ಏನೇ ಇರಲಿ ಹಸಿವೆ ಆಗುವಾಗ ಎಲ್ಲವೂ ನಡೆಯುತ್ತದೆ".
" ಏ ಜಯಲಕ್ಷ್ಮಿ ...ಅಲ್ಲಿ ನೋಡು ಅಳಿಲು."......ರಮಾ ಕಿರಿಚಿದಳು.
"ಒಹ್ .....ಎಷ್ಟು ಸುಂದರವಾಗಿದೆ......ಏ ರಮಾ ......ನೀ ಲಕ್ಕಿ ಕಣೋ ......ಇವತ್ತು ನಿನ್ನ ಮನೆಯಲ್ಲಿ ನಿನ್ನ ದೊಡ್ಡ ನಿನಗೆ ತಿನ್ನಲಿಕ್ಕೆ ಏನು ಸ್ಪೆಷಲ್ ಮಾಡಿರಬೇಕು....ನೋಡು..."
"ಅದು ಹೇಗೆ .....ನೀನು ಹೇಳುತಿರುವುದು" ಎಂದು ರಮಾ ಕೇಳಿದಳು.
" ಅರೇ....ನಿನಗೆ ಗೊತ್ತಿಲ್ಲವೇ ರಮಾ .......ಅಳಿಲನ್ನು ನೋಡಿದರೆ ತುಂಬಾ ಶುಭ ....ಇದನ್ನು ಕಂಡರೆ ತುಂಬಾ ಅದೃಷ್ಟ......ಏನಾದರೂ ಒಳ್ಳೆ ಆಗುತ್ತದೆ, ಮನೆಗೆ ಹೋದ ನಂತರ, ನೀನು ಇದನ್ನು ನಂಬುವೆ " ಎಂದು ಜಯಲಕ್ಷ್ಮಿ ಹೇಳಿದಳು.
" ಹೌದೇ ......ಹಾಗಾದರೆ ದೊಡ್ಡ ಇವತ್ತು ಏನು ಮಾಡಿರ ಬೇಕು " ಎಂದು ಹೇಳಿ ರಸ್ತೆಯಲ್ಲಿ ಇದೇ ವಿಚಾರ ಮಾಡುತ ರಮಾ ಮನೆಗೆ ಮುಟ್ಟಿದಳು.
ಮನೆಗೆ ಬಂದ ನಂತರ ರಮಾ " ದೊಡ್ಡ ...ಎನ್ಕ್ ಪಾಡ್ಲೆ" (ಅಜ್ಜಿ ....ನನಗೆ ಊಟ ಹಾಕು)
ಅದಕ್ಕೆ ದೊಡ್ಡ " ಪೋ ದುಂಬು ಕೈ ಕಾರ್ ದೆಕ್ಕದ್ದ್ ಬಲಾ" (ಹೋಗು ಮೊದಲು ಕೈ ಕಾಲು ತೊಳೆದು ಬಾ) ಎಂದು ಬೊಬ್ಬೆ ಹಾಕಿದರು.
ರಮಾ ಬೇಗನೆ ಕೈ ಕಾಲು ತೊಳೆದು ಬಂದು " ದೊಡ್ಡ ಇನಿ ಯಿನ ಮಲ್ದರ್" (ದೊಡ್ಡ ಇವತ್ತು ಏನು ಮಾಡಿದಿರಿ)"
"ಹಾಂ...... ಕುಲ್ಲು ದುಂಬು" (ಕೂತು ಕೊಳ್ಳು ಮೊದಲು) ಎಂದು ದೊಡ್ಡ ಪಿರಿಪಿರಿ ನುಡಿಯುತ್ತ ಒಳಗೆ ಹೋಗಿ ಒಂದು ದೊಡ್ಡ ಪ್ಲೇಟ್ ಲ್ಲಿ ಏನಾ ತಂದರು.
ಪ್ಲೇಟ್ ಲ್ಲಿ ಇದ್ದ ಉಪ್ಪಿಟ್ಟು ನೋಡಿ ರಮಾಗೆ ಖುಷಿಯೇ ಖುಷಿ.
"ಒಹ್.....ಜಯಲಕ್ಷ್ಮಿ ಹೇಳಿದ್ದು ಸರಿ " ಎಂದು ರಮಾ ಬಕ ಬಕ ಅಂತ ಪ್ಲೇಟ್ ನ್ನು ಖಾಲಿ ಮಾಡಿದಳು.
ಇದು ಆದ ನಂತರ ರಮಾ ಯಾವಾಗಲು ಶಾಲೆಯಿಂದ ಬರುವಾಗ ಎಲ್ಲೊ ಅಳಿಲು ಕಾಣುತ್ತದೆಯೋ ಎಂದು ನೋಡಿ ನೋಡಿ ಬರುತ್ತಿದ್ದಳು. :):):)
by ಹರೀಶ್ ಶೆಟ್ಟಿ, ಶಿರ್ವ

No comments:
Post a Comment