Wednesday, July 27, 2011

ಅಗಲಿಕೆ


ನಮ್ಮ ಪ್ರೇಮದ
ಕಥೆಯನ್ನು ಮುಗಿಸಿ ಹೋಗುವೆಯಾ ?
ತಾಳು, ಸ್ವಲ್ಪ ತಾಳು
ಹಾಳು ಮಾಡಬೇಡ
ನನ್ನ ಬಾಳು

ನಾವು ಕಂಡ ಆ ಕನಸು
ಇಷ್ಟು ಬೇಗನೆ ಮರೆತು ಹೋದೆಯಾ  ?
ನಮ್ಮ ಮರಳಿನ ಆ ಪುಟ್ಟ ಮನೆ
ಅದರಲ್ಲಿ ಕಂಡ ಸಂಸಾರ
ಮರೆತು ಹೋದೆಯಾ ?

ನಮ್ಮ ಪ್ರೀತಿ
ಎಲ್ಲಿ ನಮ್ಮ ಪ್ರೀತಿ?
ಎಲ್ಲಿ ನಮ್ಮ ಒಂದಾದ ಹೃದಯ?
ತಾಳಲಾರದ ನೋವನ್ನು ಕೊಟ್ಟು
ಹೊರಟು ಹೋಗುವೆಯಾ ?

ನನ್ನ ತನು ಮನದಲ್ಲಿ
ನೀನೇ ನೀನು
ನನ್ನ ಬದುಕಲ್ಲಿ
ಕೇವಲ ನೀನು
ನನ್ನನ್ನು ಕಣ್ಣಿರ ಸಾಗರದಲ್ಲಿ
ಮುಳುಗಿಸಿ ಹೋಗುವೆಯಾ ?

ನಾ ನಿನ್ನ ಅಗಲಿಕೆ
ಸಹಿಸಲಾರೆ
ನಿನ್ನನ್ನು ಬಿಟ್ಟು ಬದುಕಲಾರೆ
ಪ್ರೀತಿಯ ಈ ಪವಿತ್ರ ಬಂಧನವನ್ನು
ತೊರೆದು  ಹೋಗುವೆಯಾ ?
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...