Tuesday, July 12, 2011

ಮದುವೆಯ ಬಂಧನ

ಮದುವೆಯ ಬಂಧನ
ಗಂಡ ಹೆಂಡತಿಯ ಸಂಗಮ
ಶುರುವಿನಲ್ಲಿ ಪ್ರೀತಿ ಪ್ರೇಮ
ನಂತರ ಕುಶಲ ಕ್ಷೇಮ

ಗಂಡ ಆಫೀಸಿನಲ್ಲಿ ಹುಲಿ
ಮನೆಗೆ ಬಂದ ಮೇಲೆ ಕಲಿ ಬಿಲಿ
ಮನೆಯಲ್ಲಿ ಒಡತಿಯ ರಾಜ್ಯ
ಅವಲ್ಲದೆ ಸಾಮ್ರಾಜ್ಯ
ಗಂಡ ಅವಳ ಎದುರಿನಲ್ಲಿ ಕ್ರತಜ್ಞ

ಮದುವೆಯ ಬಂಧನ
ಗಂಡ ಹೆಂಡತಿಯ ಸಂಗಮ
ಶುರುವಿನಲ್ಲಿ ಪ್ರೀತಿ ಪ್ರೇಮ
ನಂತರ ಕುಶಲ ಕ್ಷೇಮ

ಹೊರಗೆ ಅವನಿಗೆ ಜಗ ಮಗ
ಮನೆಗೆ ಬರುವಾಗ
ಲೇಟ್ ಆದರೆ ಹೋದ ಮಗ
ಗಂಡ ಎನಿಸುವುದು
ಏನು ನನ್ನ ಕರ್ಮ
ಹೆಂಡತಿಯ ಮನದಲ್ಲಿ
ಇದೇ ನನ್ನ ಧರ್ಮ

ಮದುವೆಯ ಬಂಧನ
ಗಂಡ ಹೆಂಡತಿಯ ಸಂಗಮ
ಶುರುವಿನಲ್ಲಿ ಪ್ರೀತಿ ಪ್ರೇಮ
ನಂತರ ಕುಶಲ ಕ್ಷೇಮ

ಮಕ್ಕಳಿಗೆ ಅವನು ಡ್ಯಾಡಿ
ಹೆಂಡತಿಗೆ ಅವನು ಇರಬೇಕು ರೆಡಿ
ವಯಸ್ಸಾದ ನಂತರ
ಶುರು ಆಗುತ್ತದೆ ಡಾಯಿಟು
ನಂತರ ಅವಳು ಅವನ ನರ್ಸು
ತಿನ್ನಲ್ಲಿಕೆ ನಂತರ
ಓನ್ಲಿ ಉಪ್ಪಿಲ್ಲದ ಸೋರ್ಸು
ಹೆಚ್ಚೇನು ಹೇಳಲಿಕ್ಕೆ ಹೋದರೆ
ಉಪವಾಸದ ಕೋರ್ಸು

ಮದುವೆಯ ಬಂಧನ
ಗಂಡ ಹೆಂಡತಿಯ ಸಂಗಮ
ಶುರುವಿನಲ್ಲಿ ಪ್ರೀತಿ ಪ್ರೇಮ
ನಂತರ ಕುಶಲ ಕ್ಷೇಮ

ನಂತರ ಆಗುತ್ತದೆ
ಅವನಿಗೆ  ಗೋಚರ
ಅವಳ ಮನಸ್ಸಿನ ತಳಮಳ
ಅವಳು ಆಡುವ ಈ ಎಲ್ಲ ಆಟ
ಸಂಸಾರ ನಡೆಸುವ ಈ ಹೋರಾಟ
ಅವಳು ಅನುಭವಿಸುವ ಕಷ್ಟ
ಅವಳ ಅವನ ಮೇಲೆ ಇದ್ದ ನಿಷ್ಠ

ಮದುವೆಯ ಈ ಬಂಧನ
ಅವಳಿಂದಲೇ ಆಗುವುದು ಚಂದನ

by ಹರೀಶ್ ಶೆಟ್ಟಿ,ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...