ನರಕ ಯಾತನ
ನನ್ನದೇನು ತಪ್ಪು
ಬಡವನೆಂದು ಏಕೆ ಹೀಯಾಳಿಕೆ
ಕಳೆಯುತಿದ್ದೇನೆ ಕಾಲ
ಅಲ್ಲಿ ಇಲ್ಲಿ ಬಿಕ್ಷೆ ಬೇಡುತ್ತಾ
ಕನಸು ಕಾಣುವುದೇ ಆಗಿದೆ ಕಷ್ಟ
ನನಗಿಲ್ಲ ವಸಂತ ಋತು
ನನಗಿಲ್ಲ ಹಬ್ಬ , ಹರಿಗಳು
ಎಲ್ಲರಿಗೆ ನಾನು ಒಂದು
ಹಾಳು ಬಿಕಾರಿ
ನಾನು ಪಾಪಿ
ನಾನು ಅಧರ್ಮಿ
ನಾನು ಒಂದು ಬೇಡವಾದ ವಸ್ತು
ಬೇಡ ಬೇಡ ನನಗೆ ಈ ಜೀವನ
ನರಕ ಯಾತನ
by ಹರೀಶ್ ಶೆಟ್ಟಿ ,ಶಿರ್ವ
No comments:
Post a Comment