ನನ್ನ ಜೀವನದ
ಮೊದಲ ಮಳೆ ನೆನಪಿದೆ
ಆ ಅಮೋಘ ಕ್ಷಣಗಳು
ಆ ಸಂತೋಷ, ಉಲ್ಲಾಸ
ಮಣ್ಣು ಬೀರುತ್ತಿರುವ
ಆ ಮಧುರ ಸುವಾಸನೆ ನೆನಪಿದೆ
ಮೋಡಗಳನ್ನು ನೋಡಿ
ಜೋರಾಗಿ ಕೂಗುವ
ಚಂಡಿ ಪುಂಡಿಯಾಗಿ
ಅಲ್ಲಿ ಇಲ್ಲಿ ಕುಣಿಯುವ
ಆ ಆಟ ಓಟಗಳು ನೆನಪಿದೆ
ಕೋಗಿಲೆ ಕೂಗುತ್ತಿರುವ
ಅದ್ಭುತ ಗಾನ
ನಿಸರ್ಗದ ಸೌಂದರ್ಯ
ಅದ್ಭುತ ದೃಶ್ಯಗಳು
ಆ ಅಮೂಲ್ಯ ನೋಟ ನೆನಪಿದೆ
ನನ್ನ ಜೀವನದ
ಮೊದಲ ಮಳೆ ನೆನಪಿದೆ
ಎಲ್ಲಿ ಕಳೆದು ಕೊಂಡೆ
ಆ ಆನಂದ ಉಲ್ಲಾಸ
ಜೀವನದ ಕಣ್ಣಿರಿನ ಮಳೆಯಲ್ಲಿ
ಸೋರಿ ಹೋಯಿತೆ?
ಉಳಿದಿದೆ ಕೇವಲ
ಮೊದಲ ಮಳೆಯ ನೆನಪು
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment