ಕೋಗಿಲೆ ನಿನ್ನ ಸ್ವರ
ಎಂಥ ಮಧುರ
ನಿನ್ನ ಸ್ವರದಿಂದ ನಲಿಯುತ್ತಿದೆ
ಉದ್ಯಾನದ ಗಿಡ ಮರ
ಸಿಹಿ ಸ್ವರ ನಿನ್ನ ಪರಿಹಾರಿಸುತ್ತದೆ
ಮನಸ್ಸಿನ ತಳಮಳ
ಕೋಗಿಲೆ ನಿನ್ನ ಸ್ವರ
ಎಂಥ ಮಧುರ
ಎಲ್ಲಿಂದ ಪಡೆದೆ ನೀ ಈ ಸ್ವರ?
ನಿನ್ನ ತಾಯಿಯ ಉಪಕಾರವೇ?
ಅಲ್ಲದೆ ದೇವರ ಇದೆಯೇ ನಿನಗೆ ವರ?
ನಿನ್ನ ಅದ್ಭುತ ಕಂಠದಿಂದ ಹೊರಡುತ್ತದೆ
ಅಮೃತ ವಾಣಿ ಅಮರ
ಕೋಗಿಲೆ ನಿನ್ನ ಸ್ವರ
ಎಂಥ ಮಧುರ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment